ನಿಧನ
ಮಹೇಶ್ ದೇವಾಡಿಗ ಉಚ್ಚಿಲ ನಿಧನ (Mahesh Devdiga Uchila Passes away)
ಮಹೇಶ್ ದೇವಾಡಿಗ ಉಚ್ಚಿಲ ನಿಧನ (Uchila) ಉಚ್ಚಿಲ : ಉಚ್ಚಿಲ ನಿವಾಸಿ, ಮಹೇಶ್ ದೇವಾಡಿಗ (44)ರವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಚ್ಚಿಲ ಸಹಿತ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಹೇಶ್, ಯುವಕರನ್ನು ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮೃತ ಮಹೇಶ್ ತಂದೆ ನಾರಾಯಣ ದೇವಾಡಿಗ, ತಾಯಿ ಭವಾನಿ, ಪತ್ನಿ, ಇಬ್ಬರು ಮಕ್ಕಳ ಸಹಿತ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

