Tag: mobile shoot

ಅಪರಾಧ

ಉಡುಪಿ ವಿಡಿಯೋ ಪ್ರಕರಣ: ತನಿಖಾಧಿಕಾರಿ ಬದಲಾವಣೆ

ಉಡುಪಿ ವಿಡಿಯೋ ಪ್ರಕರಣ: ತನಿಖಾಧಿಕಾರಿ ಬದಲಾವಣೆ ಉಡುಪಿ : ಉಡುಪಿ ವಿದ್ಯಾರ್ಥಿನಿ ವಿಡಿಯೋ ಪ್ರಕರಣದ ತನಿಖಾಧಿಕಾರಿ ಬದಲು ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿ ಮಂಜುನಾಥ್ ಗೌಡ ಅವರನ್ನು ಬದಲಿಸಿ ಕುಂದಾಪುರದ ಡಿವೈಎಸ್ ಬೆಳ್ಳಿಯಪ್ಪ ಎಂಬುವರಿಂದ ತನಿಖೆಯನ್ನು ನಡೆಸಲು ನಿರ್ಧರಿಸಲಾಗಿದೆ.  ಅವರಿಗೆ ತನಿಖೆಯ ಜವಾಬ್ದಾರಿಯನ್ನು ನೀಡಲಾಗಿದೆ.  ಮಂಜುನಾಥ್ ಗೌಡ ಅವರು ತನಿಖೆಯಲ್ಲಿ ಲೋಪ ಮಾಡಿದ್ದಾರೆಂದು ಆರೋಪ ಕೇಳಿ ಬಂದಿತ್ತು. ಅದರಂತೆ ಶನಿವಾರ ಅಧಿಕಾರಿಯನ್ನು ಬದಲಾಯಿಸಲಾಗಿದೆ.

ಅಪರಾಧ ಕರಾವಳಿ

ಉಡುಪಿ: ಪ್ಯಾರಾಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣ; ಉಡುಪಿ ಜಿಲ್ಲಾ ಬಿಜೆಪಿ ಇಂದು ಬೃಹತ್ ಪ್ರತಿಭಟನೆ‌

ಉಡುಪಿ: ಪ್ಯಾರಾಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣ; ಉಡುಪಿ ಜಿಲ್ಲಾ ಬಿಜೆಪಿ ಇಂದು ಬೃಹತ್ ಪ್ರತಿಭಟನೆ  ಉಡುಪಿ: ಪ್ಯಾರಾಮೆಡಿಕಲ್ ಕಾಲೇಜೊಂದರ ಶೌಚಾಲಯದಲ್ಲಿ ಹಿಂದೂ ಯುವತಿಯ ವಿಡಿಯೋ ಚಿತ್ರೀಕರಣ ಮಾಡಿರುವ ಘಟನೆ ಖಂಡಿಸಿ ಹಾಗೂ  ಸಂತ್ರಸ್ತ ಯುವತಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ಇಂದು ಬೃಹತ್‌  ಪ್ರತಿಭಟನೆ ಹಮ್ಮಿಕೊಂಡಿತು.  ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾದರು.  ನಗರದ ಬಿಜೆಪಿ ಕಚೇರಿಯಿಂದ ಪ್ರಮುಖ ರಸ್ತೆ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಯಾವುದೇ […]

ಅಪರಾಧ ವಿಡಿಯೋ

ಮೊಬೈಲ್‌ ಚಿತ್ರೀಕರಣ ಪ್ರಕರಣ: ಉಡುಪಿ ಕಾಲೇಜು ಆಡಳಿತ ಮಂಡಳಿಯ ಸ್ಪಷ್ಟೀಕರಣ

ಮೊಬೈಲ್‌ ಚಿತ್ರೀಕರಣ ಪ್ರಕರಣ: ಉಡುಪಿ ಕಾಲೇಜು ಆಡಳಿತ ಮಂಡಳಿಯ ಸ್ಪಷ್ಟೀಕರಣ ಉಡುಪಿ: ನಗರದ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯ ವಾಷ್ ರೂಮಿನ ದೃಶ್ಯಗಳನ್ನು ಮೂವರು  ಅನ್ಯ ಕೋಮಿನ ವಿದ್ಯಾರ್ಥಿನಿಯರು ಚಿತ್ರೀಕರಣ ಮಾಡಿದ್ದಾರೆ ಎಂಬ ವದಂತಿ ಹಬ್ಬಿದೆ.  ಈ ಸಂಬಂಧ ಇಂದು ಸ್ಪಷ್ಟನೆ ನೀಡಿರುವ ಕಾಲೇಜಿನ ಆಡಳಿತ ಮಂಡಳಿ  ನಿರ್ದೇಶಕಿ ರಶ್ಮೀ ಕೃಷ್ಣಪ್ರಸಾದ್, ಪ್ರಕರಣದ ಮೂವರು ವಿದ್ಯಾರ್ಥಿನಿಯರು ಒಂದೇ ಕ್ಲಾಸ್ ನವರಾಗಿದ್ದು, ಇನ್ನೊಬ್ಬಳು ಹುಡುಗಿ ಬೇರೆ ಕ್ಲಾಸ್ ನವಳು. ಇಂತಹ ಘಟನೆ ನಡೆಯಬಾರದು ಎಂಬ ಕಾರಣಕ್ಕೆ […]

eMedia Kannada  @2025. All Rights Reserved.