ರಾಜಕೀಯ
ಮುಸ್ಲಿಂ ಸಮುದಾಯಕ್ಕಿರುವ ಮೀಸಲಾತಿ ಕೊನೆಗೊಳಿಸುವುದು ನಮ್ಮ ಗುರಿ- ಅಮಿತ್ ಶಾ
ಮಹಾರಾಷ್ಟ್ರ ನಾಂದೇಡ್; ಮುಸ್ಲಿಂ ಸಮುದಾಯಕ್ಕೆ ಇರುವ ಮೀಸಲಾತಿ ಕೊನೆಗೊಳಿಸಬೇಕು. ಧರ್ಮಾಧಾರಿತ ಮೀಸಲಾತಿ ನೀಡುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂಬತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಸಂಭ್ರಮಾಚರಣೆಯ ಅಂಗವಾಗಿ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಶಾ, ಮುಸ್ಲಿಮರಿಗೆ ಯಾವುದೇ ಮೀಸಲಾತಿ ಇರಬಾರದು. ಅದು ನಮ್ಮ ಮಾನ್ಯತೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ಸಾಧ್ಯವಿಲ್ಲ […]

