Tag: padubiri police station

ಶಾಲಾ ಕಾಲೇಜು

ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ಮಾದಕ ದ್ರವ್ಯ, ಬಳಕೆ ವಿರೋಧಿ ಜಾಗೃತಿ ಅಭಿಯಾನ (Anti-drug abuse awareness campaign at Uchilla Saraswati Mandir School)

ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ಮಾದಕ ದ್ರವ್ಯ, ಬಳಕೆ ವಿರೋಧಿ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ  (Uchila) ಉಚ್ಚಿಲ: ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ಮಾದಕ ಅಂತರಾಷ್ಟ್ರೀಯ ಮಾದಕ ದ್ರವ್ಯ ಬಳಕೆ ವಿರೋಧಿ ದಿನ ಹಾಗೂ ವಿಶ್ವ ತಂಬಾಕು ರಹಿತ ದಿನ ಜಾಗೃತಿ ಅಭಿಯಾನ ಕಾರ್ಯಕ್ರಮ ನೆರವೇರಿತು. ಪಡುಬಿದ್ರಿ ಪೊಲೀಸ್ ಠಾಣೆಯ ಎಎಸ್ಐ ಅನಿಲ್ ಕುಮಾರ್ ಟಿ ನಾಯಕ್ ಮುಖ್ಯ ಅತಿಥಿಯಾಗಿ ಆಗಮಿಸಿ, ಮಾದಕ ದ್ರವ್ಯ ಸೇವಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ಹಾಗೂ […]

ಅಪಘಾತ

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಸಾವು (Man walking on the side of the road hit by car, dies)

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಸಾವು   ಉಮಾನಾಥ ಶೆಣೈ ಮೃತ ವ್ಯಕ್ತಿ (Padubidri: ಪಡುಬಿದ್ರಿ : ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ರಾ.ಹೆ.66ರ  ತೆಂಕ ಎರ್ಮಾಳು ಕೆನರಾ ಬ್ಯಾಂಕ್ ಬಳಿ ಘಟಿಸಿದೆ.   ಉಮಾನಾಥ ಶೆಣೈ (69) ಮೃತ ವ್ಯಕ್ತಿ.  ಇವರು ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಹಿಂದಿನಿಂದ ಉಡುಪಿ […]

ಅಪಘಾತ

ಹೆಜಮಾಡಿ : ಕಾರಿಗೆ ಲಾರಿ ಡಿಕ್ಕಿ, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು (Hejamadi: Lorry collides with car, occupants escape unhurt)

 ಹೆಜಮಾಡಿ : ಕಾರಿಗೆ ಲಾರಿ ಡಿಕ್ಕಿ, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಡುಬಿದ್ರಿ ಪೊಲೀಸರು (Hejamady) ಹೆಜಮಾಡಿ: ಉಡುಪಿ ಕಡೆಗೆ ಸಾಗುತ್ತಿದ್ದ ಕಾರಿಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿಯಾಗಿ ಕಾರು ಜಖಂಗೊಂಡು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ಸಂಜೆ ಹೆಜಮಾಡಿ ಪೆಟ್ರೋಲ್ ಪಂಪ್ ಬಳಿ ಘಟಿಸಿದೆ.   ಉಡುಪಿ ಕಡೆಗೆ ಸಾಗುತ್ತಿದ್ದ ಕಾರಿಗೆ ವೇಗವಾಗಿ ಉಡುಪಿ ಕಡೆ ಸಾಗುತ್ತಿದ್ದ ಟಿಪ್ಪರ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಡಿವೈಡರ್ ಏರಿ ರಸ್ತೆ ನಿಯಮದ ಕಂಬಕ್ಕೆ […]

ನಿಧನ

ಎಲ್ಲೂರು : ಖಾಸಗಿ ಕಂಪನಿ ನೌಕರ ಹೃದಯಾಘಾತದಿಂದ ಮೃತ್ಯು (Yelloor: Private company employee dies of heart attack)

ಎಲ್ಲೂರು : ಖಾಸಗಿ ಕಂಪನಿ ನೌಕರ ಹೃದಯಾಘಾತದಿಂದ ಮೃತ್ಯು (Padubidri) ಪಡುಬಿದ್ರಿ : ಎಲ್ಲೂರು ಗ್ರಾಮದಲ್ಲಿರುವ  “ಪವರ್‌ ಮೆಕ್‌” ಇಂಡಸ್ಟ್ರಿ ಪ್ರೈವೆಟ್‌ ಲಿಮಿಟೆಡ್‌ ಕಂಪೆನಿಯಲ್ಲಿ ಕಾರ್ಮಿಕನಾಗಿದ್ದ ವ್ಯಕ್ತಿಯೋರ್ವ ಕುಸಿದು ಬಿದ್ದ ಘಟನೆ ಭಾನುವಾರ ರಾತ್ರಿ ಘಟಿಸಿದೆ.  ಪಂಜಾಬ್ ಮೂಲದ ಅಮರ್‌ಜೀತ್‌ ಸಿಂಗ್‌ (49) ಎಂಬವರು ಕೆಲಸ ಮುಗಿಸಿ ಕಂಪನಿಯ ಸ್ಟೋರ್ ರೂಮ್ ಬಳಿ ಹೋದಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು.  ತೀವ್ರ ಅಸ್ವಸ್ಥಗೊಂಡ ಅವರನ್ನು ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮುಕ್ಕ ಆಸ್ಪತ್ರೆಗೆ […]

eMedia Kannada  @2025. All Rights Reserved.