ದೇಶ-ವಿದೇಶ
ಮಣಿಪುರ ಹಿಂಸಾಚಾರ: ಸಿಎಂ ಸಿಂಗ್‌ರನ್ನು ಪದಚ್ಯುತಗೊಳಿಸಲು ಸರ್ವಪಕ್ಷ ಸಭೆಯಲ್ಲಿ ಒತ್ತಾಯ
ಮಣಿಪುರ: ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಪದಚ್ಯುತಗೊಳಿಸಬೇಕು. ಏಕೆಂದರೆ ರಾಜ್ಯದ ಜನರು ಅವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಎಂದು ಪ್ರತಿಪಕ್ಷ ನಾಯಕರು ಶನಿವಾರ ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯ ನಂತರ ಮಾತನಾಡಿದ ಆರ್‌ಜೆಡಿ ಸಂಸದ ಮನೋಜ್ ಝಾ ಅವರು. ”ಮಣಿಪುರದಲ್ಲಿ ಆಡಳಿತದ ನೇತೃತ್ವ ವಹಿಸುವ ವ್ಯಕ್ತಿಯ ಮೇಲೆ ನಂಬಿಕೆ ಇಲ್ಲ ಎಂದು ಹೇಳುವ ಮಟ್ಟಕ್ಕೆ ಇಡೀ ಪ್ರತಿಪಕ್ಷಗಳು ಬಂದಿವೆ. ಆ ವ್ಯಕ್ತಿ ಉಸ್ತುವಾರಿಯಾಗುವವರೆಗೂ ನೀವು ಶಾಂತಿಯನ್ನು ಹೊಂದಲು ಸಾಧ್ಯವಿಲ್ಲ” ಎಂದು ಹೇಳಿದರು. […]

