ಅಪರಾಧ
ಕಾಸರಗೋಡು: ಶಾಲಾ ವಾಹನದಡಿಗೆ ಬಿದ್ದು 4 ವರ್ಷದ ಬಾಲಕಿ ಮೃತ್ಯು
ಕಾಸರಗೋಡು: ಶಾಲಾ ವಾಹನದಡಿಗೆ ಬಿದ್ದು 4 ವರ್ಷದ ಬಾಲಕಿ ಮೃತ್ಯು ಕಾಸರಗೋಡು, ಆ 24 : ಶಾಲಾ ವಾಹನದಡಿಗೆ ಬಿದ್ದು ನರ್ಸರಿ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಕಂಬಾರ್ ಸಿರಿಬಾಗಿಲು ಎಂಬಲ್ಲಿ ನಡೆದಿದೆ. ಸಿರಿಬಾಗಿಲಿನ ಮುಹಮ್ಮದ್ ಸುಬೈರ್ ರವರ ಪುತ್ರಿ ಆಯಿಷಾ ಸೆಯಾ (4) ಮೃತ ಪಟ್ಟವಳು. ಮನೆ ಸಮೀಪ ಈ ದುರಂತ ನಡೆದಿದೆ. ಶಾಲೆ ಬಿಟ್ಟು ಮನೆ ಬಳಿ ಬಾಲಕಿಯನ್ನು ಇಳಿಸಿ ಬಸ್ಸನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಅದೇ ಬಸ್ಸಿನಡಿ ಸಿಲುಕಿ ಈ ಘಟನೆ ನಡೆದಿದೆ. […]

