Tag: scucide

ಅಪರಾಧ

ಹರೇಕಳ: ನೇತ್ರಾವತಿ ನದಿಯಲ್ಲಿ ತಾಯಿ, ‌ಮಗು ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ (Dead bodies of mother and child found in Netravati river: suicide suspected)

ಹರೇಕಳ: ನೇತ್ರಾವತಿ ನದಿಯಲ್ಲಿ ತಾಯಿ, ‌ಮಗು ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ (Mudipu) ಮುಡಿಪು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಕಡವಿನಬಳಿ ಸಮೀಪದ ನೇತ್ರಾವತಿ ನದಿಯಲ್ಲಿ ತಾಯಿ ಹಾಗೂ  ಒಂದು ವರ್ಷದ ಮಗುವಿನ ಮೃತದೇಹ ಶುಕ್ರವಾರ ರಾತ್ರಿ ಪತ್ತೆಯಾಗಿದೆ.‌ ತಾಯಿಯು ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.     ಮೃತ ಮಹಿಳೆಯನ್ನು  ನಾಗರಾಜ್ ಎಂಬವರ ಪತ್ನಿ ಚೈತ್ರಾ( 30) ಎಂದು ಗುರುತಿಸಲಾಗಿದೆ. ಅಡ್ಯಾರ್ ನಿವಾಸಿಯಾಗಿರುವ ಇವರು ತನ್ನ ಒಂದು ವರ್ಷದ ಮಗು ದಿಯಾಂಶ್ ಜೊತೆ ಮಧ್ಯಾಹ್ನ […]

ಅಪರಾಧ

ಪುತ್ತೂರು : ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ(Puttru : College girl commits sucide by hanging)

ಪುತ್ತೂರು : ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ (Putturu) ಪುತ್ತೂರು : ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಶ್ವರಮಂಗಲ ಸಮೀಪದ ಸುಳ್ಯಪದವು ಕನ್ನಡ್ಕದಲ್ಲಿ ನಡೆದಿದೆ.  ಕನ್ನಡ್ಕ ನಿವಾಸಿ, ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ (16ವ) ಮೃತ ಯುವತಿ.  ದೀಕ್ಷಾ ಮನೆಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ  ಕಾರಣ ತಿಳಿದು ಬಂದಿಲ್ಲ.  ದೀಕ್ಷಾ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದು, ನಾಳೆ ಅವರಿಗೆ ಲ್ಯಾಬ್ ಪರೀಕ್ಷೆಯಿತ್ತು ಎಂದು ವರದಿಯಾಗಿದೆ. […]

ಅಪರಾಧ

ಉಳ್ಳಾಲ (Ullala) : ಕಾಫಿಡೇ ಮಾಲೀಕ ಸಿದ್ದಾರ್ಥ ಆತ್ಮಹತ್ಯೆ ಸ್ಥಳದಲ್ಲೇ ಮತ್ತೊಬ್ಬ ಉದ್ಯಮಿ ನದಿಗೆ ಹಾರಿ ಸಾವಿಗೆ ಶರಣು (scucide) – ಶೋಧಕಾರ್ಯ ಆರಂಭ

  ಉಳ್ಳಾಲ : ಕಾಫಿಡೇ ಮಾಲೀಕ ಸಿದ್ದಾರ್ಥ ಆತ್ಮಹತ್ಯೆ ಸ್ಥಳದಲ್ಲೇ ಮತ್ತೊಂದು ಆತ್ಮಹತ್ಯೆ ಮತ್ತೊಬ್ಬ ಉದ್ಯಮಿ ನದಿಗೆ ಹಾರಿ ಸಾವಿಗೆ ಶರಣು – (Suicide)ಉದ್ಯಮಿಯ ಸಾವಿಗೆ ಕಾರಣ ನಿಗೂಢ, ಶೋಧಕಾರ್ಯ ಆರಂಭ ನ್ಯೂಸ್ ಆ್ಯರೋ : ಕಾಫಿಡೇ ಮಾಲೀಕ ಸಿದ್ದಾರ್ಥ್ ಸಾವಿಗೆ ಶರಣಾದ ಸ್ಥಳದಲ್ಲಿಯೇ ಮತ್ತೊಬ್ಬ ಉದ್ಯಮಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಘಟಿಸಿದೆ.   ಕಳೆದ ನಾಲ್ಕು ವರ್ಷಗಳ ಹಿಂದೆ ಅಂತಾರಾಷ್ಟ್ರೀಯವಾಗಿ ಪ್ರಸಿದ್ಧಿ ಪಡೆದ ಉದ್ಯಮಗಳಲ್ಲಿ ಒಂದಾಗಿದ್ದ ಕಾಫಿಡೇ (CEFE COFFEE DAY) […]

ಅಪರಾಧ

(mangaluru beach) ಕಡಲ ತೀರದಲ್ಲಿ ಬೆಂಗಳೂರು (Bengaluru)ಮೂಲದ ಇಬ್ಬರ ಸಾವು ; ಮಧ್ಯವಯಸ್ಕ ವ್ಯಕ್ತಿ ಮತ್ತು ಮಹಿಳೆ ಆತ್ಮಹತ್ಯೆ ಶಂಕೆ (suicide)

(mangaluru beach) ಕಡಲ ತೀರದಲ್ಲಿ ಬೆಂಗಳೂರು (Bengaluru)ಮೂಲದ ಇಬ್ಬರ ಸಾವು ; ಮಧ್ಯವಯಸ್ಕ ವ್ಯಕ್ತಿ ಮತ್ತು ಮಹಿಳೆ ಆತ್ಮಹತ್ಯೆ ಶಂಕೆ (suicide) (mangaluru) ಪಣಂಬೂರು ಕಡಲ ತೀರದಲ್ಲಿ ಬೆಂಗಳೂರು ಮೂಲದ ಇಬ್ಬರು, ಮಧ್ಯವಯಸ್ಕ ವ್ಯಕ್ತಿ ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮಂಗಳೂರು, ಅ.19: ಪಣಂಬೂರು ಕಡಲ ತೀರದಲ್ಲಿ ಬೆಂಗಳೂರು ಮೂಲದ ಇಬ್ಬರು ಮಧ್ಯ ವಯಸ್ಕ ವ್ಯಕ್ತಿ ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.  ಲಕ್ಷ್ಮಿ […]

ಅಪರಾಧ

  ಮಲ್ಪೆ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಟು ಆತ್ಮಹತ್ಯೆ

  ಮಲ್ಪೆ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಟು ಆತ್ಮಹತ್ಯೆ  ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಶಾಂತಿನಗರದ ನಿವಾಸಿ, ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟಸಿದೆ.  ಶಾಂತಿನಗರ ನಿವಾಸಿ ವಿರಾಜ್ ಮೆಂಡನ್ (29) ಆತ್ಮಹತ್ಯೆ ಮಾಡಿಕೊಂಡ ಯುವಕ. ಇತ್ತೀಚೆಗೆ ವಿರಾಜ್‌ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ. ಮಲ್ಪೆ ಶಾಂತಿನಗರದಲ್ಲಿರುವ ತಮ್ಮ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಅಸಹಜ […]

ಅಪರಾಧ

ತಮಿಳ್ನಾಡು: ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಮರುದಿನವೇ ತಂದೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ತಮಿಳ್ನಾಡು: ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಮರುದಿನವೇ ತಂದೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಚೆನ್ನೈ: ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ನಂತರ 19 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡ ಒಂದು ದಿನದ ನಂತರ, ತರುಣನ ತಂದೆ ಕೂಡಾ ತಮಿಳುನಾಡಿನ ಚೆನ್ನೈ  ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2022 ರಲ್ಲಿ 12 ನೇ ತರಗತಿಯಲ್ಲಿ 427 ಅಂಕಗಳೊಂದಿಗೆ ಪಾಸಾಗಿದ್ದ ಜಗದೀಶ್ವರನ್ ಎರಡು ಪ್ರಯತ್ನಗಳಲ್ಲಿ   ನೀಟ್ ಪ್ರವೇಶ ಪರೀಕ್ಷೆಯನ್ನು ಪಾಸಾಗಲು ಸಾಧ್ಯವಾಗಲಿಲ್ಲ. ಜಗದೀಶ್ವರನ್ ಶನಿವಾರ […]

ಅಪರಾಧ

ಕಿನ್ನಿಗೋಳಿಯಲ್ಲಿ ಜ್ಯುವೆಲರಿ ಅಂಗಡಿ ಮಾಲಕ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣು

ಕಿನ್ನಿಗೋಳಿಯಲ್ಲಿ ಜ್ಯುವೆಲರಿ ಅಂಗಡಿ ಮಾಲಕ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣು ಕಿನ್ನಿಗೋಳಿ; ಜ್ಯುವೆಲರಿ ಅಂಗಡಿ ಮಾಲಕರೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಕಿನ್ನಿಗೋಳಿಯ ರಾಮನಗರಲ್ಲಿ ನಡೆದಿದೆ. ಕಿನ್ನಿಗೋಳಿ ನಿವಾಸಿ ಶ್ರೀಧರ ಆಚಾರ್ಯ ಜುವೆಲರ್ಸ್‌ನ ಮಾಲಕ ಉಮೇಶ್‌ ಆಚಾರ್ಯ (62) ಆತ್ಮಹತ್ಯೆಗೈದವರು. ಮಾನಸಿಕ ಖಿನ್ನತೆಯಿಂದ ಅವರು ತನ್ನ ಮನೆಯ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿನ್ನಿಗೋಳಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿದ್ದ ಅವರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾಗಿದ್ದರು.

ಅಪರಾಧ

ವಿಟ್ಲ;ಅನಂತಾಡಿ ದಂಪತಿ ಆತ್ಮಹತ್ಯೆಗೆ ಯತ್ನ ಪತಿ ಸಾವು, ಪತ್ನಿ ಗಂಭೀರ

ವಿಟ್ಲ: ಕೊಡಾಜೆ ಅನಂತಾಡಿ ಗ್ರಾಮದಲ್ಲಿ ಗಂಡ-ಹೆಂಡತಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿ, ಪತಿ ಸಾವನ್ನಪ್ಪಿ ಪತ್ನಿ ಗಂಭೀರ ಗಾಯಗೊಂಡ ಘಟನೆಗೆ ಸಂಬಂಧಿಸಿ ಮಹತ್ವದ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಪ್ರತಾಪ್ (33)ರವರು ಮೃತಪಟ್ಟಿದ್ದಾರೆ‌‌. ಈ ಕುರಿತು ಪ್ರತಾಪ್ ಸಹೋದರ ಪ್ರದೀಪ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಪ್ರತಾಪ್‌ ತನ್ನ ಪತ್ನಿಯೊಂದಿಗೆ ವಾಸವಾಗಿದ್ದು, ಪತ್ನಿ ಬೇರೆ ವ್ಯಕ್ತಿಗೆ ಮೆಸೆಜ್‌ ಮಾಡುತ್ತಿದ್ದುದರಿಂದ ಗಂಡ-ಹೆಂಡತಿಯೊಳಗೆ ಜಗಳ ನಡೆದಿತ್ತು. ಇದರಿಂದ ಜು.1 ರಂದು ಮನೆಯ ಊಟದ ಕೋಣೆಯ ಸಿಲಿಂಗ್‌ ಫ್ಯಾನಿಗೆ ನೈಲಾನ್‌ ಸಿರೇಯನ್ನು ಕಟ್ಟಿ ಅದರ […]

ಅಪರಾಧ

 Breaking news ಕೋಲಾರದಲ್ಲಿ ಮರ್ಯಾದೆಗೇಡು ಹತ್ಯೆ: ಪರಿಶಿಷ್ಟ ಜಾತಿಯವನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ; ಯುವಕ ಆತ್ಮಹತ್ಯೆ

ಕೋಲಾರ : ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳನ್ನು ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಪ್ರಿಯತಮೆಯ ಸಾವಿನ ಸುದ್ದಿ ತಿಳಿದು ಆಘಾತಕ್ಕೆ ಒಳಗಾದ ಯುವಕ ತಾನೂ ರೈಲಿಗೆ ತಲೆ ಕೊಟ್ಟು ಅತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ. ಬೋಡಗುರ್ಕಿ ಗ್ರಾಮದ ಪರಿಶಿಷ್ಟ ಜಾತಿಯ ಗಂಗಾಧರ (23) ಮತ್ತು ಗೊಲ್ಲ ಸಮುದಾಯದ ಕೀರ್ತಿ (20) ಪರಸ್ಪರ ಪ್ರೀತಿಸುತ್ತಿದ್ದರು. ಇದು ಗೊತ್ತಾಗಿ ಕೀರ್ತಿಯ ತಂದೆ ಕೃಷ್ಣಮೂರ್ತಿ ಮಂಗಳವಾರ […]

ಅಪರಾಧ

ಪೊಲೀಸರು ವಿಚಾರಣೆಗೆಂದು ಕರೆತಂದಿದ್ದ ಆರೋಪಿ ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ; ಘಟನೆ ಬೆನ್ನಲ್ಲೆ ಇನ್ಸ್ ಪೆಕ್ಟರ್ ಸೇರಿ ಐವರು ಪೊಲೀಸರು ಅಮಾನತು

ಪೊಲೀಸರು ವಿಚಾರಣೆಗೆಂದು ಕರೆತಂದಿದ್ದ ಆರೋಪಿ ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ; ಘಟನೆ ಬೆನ್ನಲ್ಲೆ ಇನ್ಸ್ ಪೆಕ್ಟರ್ ಸೇರಿ ಐವರು ಪೊಲೀಸರು ಅಮಾನತು ಕಾರವಾರ:ಕಳ್ಳತನ ಆರೋಪದಡಿ ವಿಚಾರಣೆಗೆ ಕರೆ ತಂದಿದ್ದ ಆರೋಪಿಯೋರ್ವ ಪೊಲೀಸ್ ಠಾಣೆಯಲ್ಲಿ ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಹಾರ ಮೂಲದ ದಿಲೀಪ ಮಂಡೇಲ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಜೂನ್ 24ರಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್, ಪಿಎಸ್​ಐ ಸೇರಿ ಐವರನ್ನು ಅಮಾನತು ಮಾಡಲಾಗಿದೆ. ಜೂನ್ 24ರಂದು […]

eMedia Kannada  @2025. All Rights Reserved.