Tag: udupi

ಕರಾವಳಿ ವಿಡಿಯೋ

ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ 28 ಕೋಟಿ ನಷ್ಟ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ 28 ಕೋಟಿ ನಷ್ಟ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಗಳೂರು: ಉಡುಪಿ ಜಿಲ್ಲೆಯಾದ್ಯಂತ ಮಳೆ‌ ಆರ್ಭಟದಿಂದ ಇದುವರೆಗೂ 9 ಮಂದಿ ಸಾವನ್ನಪ್ಪಿದ್ದು, ಸುಮಾರು 28 ಕೋಟಿ ಮೌಲ್ಯದ ಆಸ್ತಿ ನಷ್ಟ ಉಂಟಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿ ಚಟುವಟಿಕೆಗಳಿಗೆ […]

ಅಪರಾಧ

ಉಡುಪಿ ವೀಡಿಯೋ ಘಟನೆ: ಮೂರು ಮುಸ್ಲಿಮ್ ವಿದ್ಯಾರ್ಥಿನಿಯರ ವಿರುದ್ಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲು

ವೀಡಿಯೋ ಘಟನೆ: ಮೂರು ಅನ್ಯ ಕೋಮಿನ  ವಿದ್ಯಾರ್ಥಿನಿಯರ ವಿರುದ್ಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲು ಉಡುಪಿ: ನಗರದ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯೋರ್ವಳ ವೀಡಿಯೋ ಚಿತ್ರೀಕರಣ ಮಾಡಿದ ಕುರಿತು ಮಲ್ಪೆ ಠಾಣೆಯಲ್ಲಿ ಮೂವರು ಅನ್ಯ ಕೋಮಿನ ವಿದ್ಯಾರ್ಥಿನಿಯರ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್, ಕರ್ನಾಟಕರವರ ಅನುದಾನದ ಅಡಿಯಲ್ಲಿ ನೇತ್ರಜ್ಯೋತಿ ಇನ್ಸ್ಟಿಟ್ಯೂಟ್‌ ಆಫ್‌ ಎಲೈಡ್‌ ಹೆಲ್ತ್‌ ಸಾಯನ್ಸ್‌ ಎಂಬ ಶಿಕ್ಷಣ ಸಂಸ್ಥೆ ಪ್ಯಾರಾ ಮೆಡಿಕಲ್‌ಗೆ […]

ಅಪರಾಧ

ಉಡುಪಿ ಚಿನ್ನಾಭರಣ ಘಟಕದಲ್ಲಿ ರಾಸಾಯನಿಕ ಹೊಗೆ: ಅಧಿಕಾರಿಗಳಿಂದ ಪರಿಶೀಲನೆ

ಉಡುಪಿ ಚಿನ್ನಾಭರಣ ಘಟಕದಲ್ಲಿ ರಾಸಾಯನಿಕ ಹೊಗೆ ಪರಿಸರ ಅಧಿಕಾರಿಗಳಿಂದ ಪರಿಶೀಲನೆ: ನೋಟೀಸ್ ಜಾರಿ ಉಡುಪಿ, ಜು.25: ರಾಸಾಯನಿಕ ಹೊಗೆ ಹೊಸಸೂಸುವ ವಿಚಾರವಾಗಿ ಇಂದು ಉಡುಪಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ನಗರದ ಚಿನ್ನಾಭರಣ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಈ ಘಟಕದ ಸುತ್ತಮುತ್ತ ಅಂಗಡಿ ಮುಗ್ಗಟ್ಟು, ದೇವಾಲಯ, ಮಸೀದಿ, ಸರಕಾರಿ ಶಾಲೆ, ವಸತಿ ಸಮುಚ್ಛಯಗಳಿದ್ದು ಇಲ್ಲಿ ಹೊರ ಸೂಸುವ ರಾಸಾಯನಿಕ ಹೊಗೆಯಿಂದ ಪರಿಸರದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿತ್ತು.  ಈ ಹಿನ್ನೆಲೆ ಯಲ್ಲಿ […]

ಅಪರಾಧ ವಿಡಿಯೋ

ಮೊಬೈಲ್‌ ಚಿತ್ರೀಕರಣ ಪ್ರಕರಣ: ಉಡುಪಿ ಕಾಲೇಜು ಆಡಳಿತ ಮಂಡಳಿಯ ಸ್ಪಷ್ಟೀಕರಣ

ಮೊಬೈಲ್‌ ಚಿತ್ರೀಕರಣ ಪ್ರಕರಣ: ಉಡುಪಿ ಕಾಲೇಜು ಆಡಳಿತ ಮಂಡಳಿಯ ಸ್ಪಷ್ಟೀಕರಣ ಉಡುಪಿ: ನಗರದ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯ ವಾಷ್ ರೂಮಿನ ದೃಶ್ಯಗಳನ್ನು ಮೂವರು  ಅನ್ಯ ಕೋಮಿನ ವಿದ್ಯಾರ್ಥಿನಿಯರು ಚಿತ್ರೀಕರಣ ಮಾಡಿದ್ದಾರೆ ಎಂಬ ವದಂತಿ ಹಬ್ಬಿದೆ.  ಈ ಸಂಬಂಧ ಇಂದು ಸ್ಪಷ್ಟನೆ ನೀಡಿರುವ ಕಾಲೇಜಿನ ಆಡಳಿತ ಮಂಡಳಿ  ನಿರ್ದೇಶಕಿ ರಶ್ಮೀ ಕೃಷ್ಣಪ್ರಸಾದ್, ಪ್ರಕರಣದ ಮೂವರು ವಿದ್ಯಾರ್ಥಿನಿಯರು ಒಂದೇ ಕ್ಲಾಸ್ ನವರಾಗಿದ್ದು, ಇನ್ನೊಬ್ಬಳು ಹುಡುಗಿ ಬೇರೆ ಕ್ಲಾಸ್ ನವಳು. ಇಂತಹ ಘಟನೆ ನಡೆಯಬಾರದು ಎಂಬ ಕಾರಣಕ್ಕೆ […]

ಕರಾವಳಿ

ಮಣಿಪುರ ಜನತೆ ಶಾಂತಿ ಕಾಪಾಡಲು ಉಡುಪಿ ಪೇಜಾವರ ಶ್ರೀ ಮನವಿ

ಮಣಿಪುರ ಜನತೆ ಶಾಂತಿ ಕಾಪಾಡಲು ಉಡುಪಿ ಪೇಜಾವರ ಶ್ರೀ ಮನವಿ  ಉಡುಪಿ: ದೇಶದ ಅವಿಭಾಜ್ಯ ಅಂಗವಾಗಿರುವ ಮಣಿಪುರ ರಾಜ್ಯದಲ್ಲಿ ಇತ್ತೀಚಿನ‌ ದಿನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಬೆಳವಣಿಗೆಗಳಿಂದ ಮನಸ್ಸಿಗೆ ತುಂಬ ವಿಷಾದವಾಗಿದೆ ಎಂದು ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಇಂದು ಉಡುಪಿಯಲ್ಲಿ ಹೇಳಿದ್ದಾರೆ. ಜಗತ್ತಿಗೇ ಅಹಿಂಸೆ ಶಾಂತಿಯ ಮಂತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸಿದ ಭಾರತದ ಯಾವುದೇ ಭಾಗದಲ್ಲಿ ಇಂಥ ವಿಲಕ್ಷಣ ಬೆಳವಣಿಗೆಗಳು ನಡೆಯಬಾರದು. ಅದು ನಮಗೆ ಬದುಕು ಕೊಟ್ಟ ನೆಲಕ್ಕೆ ನಾವು ಮಾಡುವ […]

ಕರಾವಳಿ ರಾಜಕೀಯ

ದೇಶವನ್ನು 60 ವರ್ಷಗಳ ಕಾಲ ಲೂಟಿ ಮಾಡಿದವರು ಮತ್ತೆ ಇಂಡಿಯಾ ಹೆಸರಿನೊಂದಿಗೆ ಒಂದಾಗಿದ್ದಾರೆ – ಉಡುಪಿಯಲ್ಲಿ ಶೋಭಾ ಕರಂದ್ಲಾಜೆ

ದೇಶವನ್ನು 60 ವರ್ಷಗಳ ಕಾಲ ಲೂಟಿ ಮಾಡಿದವರು ಮತ್ತೆ ಇಂಡಿಯಾ ಹೆಸರಿನೊಂದಿಗೆ ಒಂದಾಗಿದ್ದಾರೆ – ಶೋಭಾ ಕರಂದ್ಲಾಜೆ ಉಡುಪಿ: ದೇಶವನ್ನು ಕಳೆದ 60 ವರ್ಷಗಳ ಕಾಲ ಲೂಟಿ ಮಾಡಿದವರು ಇಂದು ಮತ್ತೆ ಒಂದಾಗಿದ್ದಾರೆ. ತಮ್ಮ ಒಕ್ಕೂಟಕ್ಕೆ ಇಂಡಿಯಾ ಎಂಬ ಹೆಸರು ಇಟ್ಟುಕೊಂಡಿದ್ದಾರೆ. ಬ್ರಿಟಿಷ್ ಲೂಟಿಕೋರರು ಉಪಯೋಗ ಮಾಡಿದ ಹೆಸರು ಇಟ್ಟಿದ್ದಾರೆ. ಬ್ರಿಟಿಷರಂತೆ ಈಗ ಹೊಸ ಈಸ್ಟ್ ಇಂಡಿಯಾ ಕಂಪನಿ ಶುರು ಮಾಡಿದ್ದಾರೆ. ಇದು ಭಾರತ ವರ್ಸಸ್ ಈಸ್ಟ್ ಇಂಡಿಯಾ ಕಂಪನಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ. […]

ಕರಾವಳಿ

ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಚುನಾವಣೆ:  ಅಧ್ಯಕ್ಷ ರಾಗಿ ಮೊಹಮ್ಮದ್ ಶರೀಫ್, ಪ್ರ. ಕಾರ್ಯದರ್ಶಿಯಾಗಿ ಬೈಲೂರು ಹರೀಶ್ ಅಚಾರ್ಯ  ಆಯ್ಕೆ

ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಚುನಾವಣೆ:  ಅಧ್ಯಕ್ಷ ರಾಗಿ ಮೊಹಮ್ಮದ್ ಶರೀಫ್ , ಪ್ರ. ಕಾರ್ಯದರ್ಶಿಯಾಗಿ ಬೈಲೂರು ಹರೀಶ್ ಅಚಾರ್ಯ  ಆಯ್ಕೆ  ಕಾರ್ಕಳ:  ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಕಳ ತಾಲೂಕು ಘಟಕ ಇದರ ನೂತನ ಅಧ್ಯಕ್ಷರಾಗಿ   ಮೊಹಮ್ಮದ್ ಷರೀಫ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ  ಬೈಲೂರು ಹರೀಶ್ ಅಚಾರ್ಯ ಆಯ್ಕೆಯಾಗಿದ್ದಾರೆ.  ಕೋಶಾಧಿಕಾರಿ ಸ್ಥಾನಕ್ಕೆ  ಕೆ.ಎಂ ಖಲೀಲ್  ಆಯ್ಕೆ ನಡೆಯಿತು.   ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯಂತೆ  ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಕಳ ತಾಲೂಕು ಘಟಕದ  […]

ಕರಾವಳಿ

ಕರ್ನಾಟಕ ರಾಜ್ಯ ಅಂಗನವಾಡಿ ತಾಲೂಕುಗಳ ಜಂಟಿ ಸಮಾವೇಶ

ಉಡುಪಿ : ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ನೇತ್ರತ್ವದಲ್ಲಿ ಇಂದು ಬನ್ನಂಜೆ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಉಡುಪಿ, ಕಾಪು,ಬ್ರಹ್ಮಾವಾರ, ಕುಂದಾಪುರ ತಾಲೂಕುಗಳ ಜಂಟಿ ಸಮಾವೇಶ ನಡೆಯಿತು.  ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದ ರವರು ಸಮಾವೇಶ ಉದ್ಘಾಟಿಸಿ ರಾಜ್ಯದ ಅಂಗನವಾಡಿ ನೌಕರರ ಸಮಸ್ಯೆ ಬಗ್ಗೆ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಅಧ್ಯಕ್ಷರಾದ ಭಾರತಿ ವಹಿಸಿದರು.  ಸಭೆಯಲ್ಲಿ ಸಂಘ ದ ಜಿಲ್ಲಾ ಕಾರ್ಯದರ್ಶಿ ಸುಶೀಲಾ ನಾಡ,ಜಿಲ್ಲಾ […]

ಅಪರಾಧ

ಯಕ್ಷಗಾನ ಕಲಾವಿದ ಗಣಪತಿ ಬೈಲಗದ್ದೆ ನಿಧನ

 ಉಡುಪಿ : ಹೊನ್ನಾವರ ತಾಲೂಕಿನ ಬೈಲುಗದ್ದೆಯ ನಿವಾಸಿ ಬಡಗುತಿಟ್ಟಿನ ಯಕ್ಷಗಾನ ಕಲಾವಿದ ಗಣಪತಿ ಬೈಲಗದ್ದೆ (39 ವರ್ಷ) ನಿನ್ನೆ (16-07-2023) ನಿಧನ ಹೊಂದಿದರು.  ಗುಣವಂತೆಯ ಶ್ರೀಮಯ ಯಕ್ಷಗಾನ ಕಲಾಕೇಂದ್ರದಲ್ಲಿ ಕೆರೆಮನೆ ಶಂಭು ಹೆಗಡೆ ಹಾಗೂ ಹೆರಂಜಾಲು ಗೋಪಾಲ ಗಾಣಿಗರ ಶಿಷ್ಯರಾಗಿದ್ದ ಇವರು ಗುಂಡುಬಾಳ, ಮಡಾಮಕ್ಕಿ, ಪೆರ್ಡೂರು, ಸಾಲಿಗ್ರಾಮ‌ ಹಾಗೂ ಸಿಗಂದೂರು ಮೇಳಗಳಲ್ಲಿ ಎರಡು ದಶಕಗಳ ಕಾಲ ವಿವಿಧ ಪೋಷಕ ಪಾತ್ರಗಳ ನಿರ್ವಹಣೆಯಿಂದ ಕಲಾರಸಿಕರ ಮನಗೆದ್ದಿದ್ದರು.  ಅನಾರೋಗ್ಯದ ಕಾರಣದಿಂದ ಕಳೆದ ವರ್ಷ ಮೇಳದ ತಿರುಗಾಟ ಮಾಡಿರಲಿಲ್ಲ. ಅವಿವಾಹಿತರಾಗಿದ್ದ ಇವರು […]

ಕರಾವಳಿ

ನಿವೃತ್ತ ಅಧಿಕಾರಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ.

  ಮಣಿಪಾಲ,ಜು.18; ಕೇಂದ್ರ ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿಯೊರ್ವರ ಶವವು ಕೊಳೆತ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ. ಮೃತರನ್ನು ಪೆರ್ಡೂರು ಗೋಪಾಲ ನಾಯಕ್ (83ವ) ಎಂದು ಗುರುತಿಸಲಾಗಿದೆ.  ಅನಾರೋಗ್ಯದಿಂದ ಮೃತಪಟ್ಟು ಮೂರು ದಿನಗಳು ಕಳೆದಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೃತರು ದಶರಥ ನಗರದ ನರಸಿಂಗೆ ದೇವಸ್ಥಾನದ ಬಳಿ ಒಬ್ಬಂಟಿಯಾಗಿ ವಾಸವಾಗಿದ್ದರು. ಮಣಿಪಾಲ ಪೋಲಿಸ್ ಠಾಣೆಯ ಪೋಲಿಸ್ ಅಧಿಕಾರಿಗಳು ಘಟನಾ ಸ್ಥಳಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಶವವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ನೆರವಾದರು.

eMedia Kannada  @2025. All Rights Reserved.