Tag: ut khader

ಕರಾವಳಿ ವಿಡಿಯೋ

ಉಳ್ಳಾಲ ಬಟ್ಟಪಾಡಿ ಕಡಲೊರೆತ ಹಾನಿ ಪ್ರದೇಶಕ್ಕೆ ಸಿಎಂ ಭೇಟಿ, ಪರಿಶೀಲನೆ

ಉಳ್ಳಾಲ ಬಟ್ಟಪಾಡಿ ಕಡಲೊರೆತ ಹಾನಿ ಪ್ರದೇಶಕ್ಕೆ ಸಿಎಂ ಭೇಟಿ, ಪರಿಶೀಲನೆ  ಮಂಗಳೂರು: ಉಳ್ಳಾಲ ತಾಲೂಕಿನ ಬಟ್ಟಪಾಡಿ ಕಡಲೊರೆತ ಹಾನಿ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಿ, ಸ್ಥಳೀಯರು ಹಾಗೂ ಸಂತ್ರಸ್ತರ ಜತೆಗೆ ಮಾತನಾಡಿ ಸಮಸ್ಯೆಗಳನ್ನು ಆಲಿಸಿದರು.  ಈ ವೇಳೆ ಅವರು ಮಾತನಾಡಿ, ಕರಾವಳಿ ಪ್ರದೇಶದ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಉಂಟಾಗುವ ಕಡಲೊರೆತ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡು ಹಿಡಿಯುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. […]

ರಾಜಕೀಯ

ಕಾಂಗ್ರೆಸ್ ಋಣ ತೀರಿಸಿದ ಸ್ಪೀಕರ್- ಐರೋಡಿ ವಿಠ್ಠಲ್ ಪೂಜಾರಿ

ಕಾಂಗ್ರೆಸ್ ಋಣ ತೀರಿಸಿದ ಸ್ಪೀಕರ್- ಐರೋಡಿ ವಿಠ್ಠಲ್ ಪೂಜಾರಿ ಕೋಟ: ವಿಧಾನ ಸಭಾ ಸ್ಪೀಕರ್ ಆಗಿ ರಾಜಧರ್ಮವನ್ನೆ ಪಾಲನೆ ಮಾಡಬೇಕೆ ವಿನಹ ಕಾಂಗ್ರೆಸ್ ಏಜಂಟ್ ಅಂತೆ ವರ್ತಿಸಬಾರದು ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಹೇಳಿದ್ದಾರೆ.  ಸ್ಪೀಕರ್‌ ಯು.ಟಿ ಖಾದರ್ ರಾಜ್ಯ ಸರಕಾರದ ಋಣ ತೀರಿಸಲು ಸ್ಪೀಕರ್ ಸ್ಥಾನ ಅಲಂಕರಿಸಿದ್ದಾರೆ. ನಮ್ಮ ಸರಕಾರದ ಅವಧಿಯಲ್ಲಿ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿ ಕುಳಿತು ವಿಧಾನ ಸಭೆಗೆ ಹಲವು ಬಾರಿ ಚ್ಯುತಿ ತಂದ ಉದಾಹರಣೆ […]

ಅಪರಾಧ

ಸದನದಲ್ಲಿ ಅತಿರೇಕದ ವರ್ತನೆ: ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಸಹಿತ 10 ಮಂದಿ ಬಿಜೆಪಿ ಶಾಸಕರ ಅಮಾನತು

ಸದನದಲ್ಲಿ ಅತಿರೇಕದ ವರ್ತನೆ: ಉಡುಪಿ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಸಹಿತ 10 ಮಂದಿ ಬಿಜೆಪಿ ಶಾಸಕರ ಅಮಾನತು ಬೆಂಗಳೂರು: ವಿಧಾನಸಭೆ ಕಲಾಪದ ಸಂದರ್ಭ ಅತಿರೇಕದ ವರ್ತನೆ ತೋರಿದ ಹತ್ತು ಮಂದಿ ಬಿಜೆಪಿ ಶಾಸಕರನ್ನು ಬುಧವಾರ ಅಮಾನತು ಮಾಡಲಾಗಿದೆ. ಪ್ರಸಕ್ತ ಅಧಿವೇಶನದ ಅವಧಿ ಮುಗಿಯುವ ವರೆಗೂ ಶಾಸಕರನ್ನು ಅಮಾನತು ಮಾಡಲಾಗಿದೆ. ಡಾ. ಅಶ್ವತ್ಥನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್. ಅಶೋಕ್, ಉಮಾನಾಥ್ ಕೋಟ್ಯಾನ್, ಅರಗ ಜ್ಞಾನೇಂದ್ರ ಹಾಗೂ ಭರತ್ […]

ಕರಾವಳಿ ಪ್ರಚಲಿತ

 ಉಳ್ಳಾಲದಲ್ಲ ಮಳೆಗೆ ಮೊದಲ ಬಲಿ; ಮೋರಿ ದಾಟುತ್ತಿದ್ದ ವ್ಯಕ್ತಿ ನೀರಿಗೆ ಬಿದ್ದು ಸಾವು

ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ ಉಳ್ಳಾಲ: ಮೋರಿ‌ ದಾಟುವ ಸಂದರ್ಭ ವ್ಯಕ್ತಿಯೋರ್ವರು ಆಯ ತಪ್ಪಿ ಮೋರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ‌ ಪಿಲಾರು ಎಂಬಲ್ಲಿ ನಡೆದಿದೆ. ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ಬಾಡಿಗೆ ಮನೆ ನಿವಾಸಿ ಸುರೇಶ್ ಗಟ್ಟಿ‌(52)ಮೃತರು. ಸುರೇಶ್ ಗಟ್ಟಿ ಅವರು ವೃತ್ತಿಯಲ್ಲಿ ಪೈಂಟರ್ ಆಗಿದ್ದು ಕೆಲಸ ಮುಗಿಸಿ ಮನೆಗೆ ಬರುವಾಗ ಮೋರಿ ದಾಟುತ್ತಿದ್ದ ವೇಳೆ ಕಾಲು ಜಾರಿ ಮೋರಿಗೆ ಬಿದ್ದು ಧಾರಾಕಾರ ಸುರಿಯುತ್ತಿದ್ದ ಮಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. […]

eMedia Kannada  @2025. All Rights Reserved.