ಗ್ರಾಮ ಪಂಚಾಯತ್ ಸದಸ್ಯರ ಅನರ್ಹತೆ ಬಗ್ಗೆ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಕೋಟ ಪ್ರಶ್ನೆ
ಕೋಟ: ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರು ಆಯ್ಕೆಯಾದ ೩ ತಿಂಗಳ ಒಳಗೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರವನ್ನು ಸಲ್ಲಿಸದೇ ಇದ್ದರೆ, ಸದಸ್ಯತ್ವ ಅನರ್ಹಗೊಳಿಸಲಾಗುವುದು ಎಂದು ಉಚ್ಛ ನ್ಯಾಯಾಲಯ ಮತ್ತು ಸರ್ಕಾರ ಅಭಿಪ್ರಾಯ ಪಟ್ಟ ಹಿನ್ನೆಲೆಯಲ್ಲಿ ಈ ಬಗ್ಗೆ ಶೂನ್ಯ ವೇಳೆಯಲ್ಲಿ ಸದನದ ಗಮನ ಸೆಳೆಯುತ್ತಾ ಗ್ರಾಮ ಪಂಚಾಯತಿಯ ಸದಸ್ಯರಲ್ಲಿ ಶೇ. ೫೦ ರಷ್ಟು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದಿಂದ ಬಂದವರಾಗಿದ್ದು, ಅವರನ್ನು ಇಂತಹ ಒಂದು ವಿಚಾರಕ್ಕೆ ಕೂಡಲೇ ಅವರ ಸದಸ್ಯ […]


