• Home  
  • ಅಂಬಲಪಾಡಿ: ಸಮಾಜ ಸೇವಕ ವಿಶು ಶೆಟ್ಟಿ ತಂಡದಿಂದ  5 ದಿನಗಳಿಂದ ಡಾಂಬರ್‌ನಲ್ಲಿ ಹೂತಿದ್ದ ಶ್ವಾನದ ರಕ್ಷಣೆ (Ambalapady: Social worker Vishu Shetty’s team rescues dog buried in asphalt for 5 days)   
- social service

ಅಂಬಲಪಾಡಿ: ಸಮಾಜ ಸೇವಕ ವಿಶು ಶೆಟ್ಟಿ ತಂಡದಿಂದ  5 ದಿನಗಳಿಂದ ಡಾಂಬರ್‌ನಲ್ಲಿ ಹೂತಿದ್ದ ಶ್ವಾನದ ರಕ್ಷಣೆ (Ambalapady: Social worker Vishu Shetty’s team rescues dog buried in asphalt for 5 days)   

Share: ಅಂಬಲಪಾಡಿ: ಸಮಾಜ ಸೇವಕ ವಿಶು ಶೆಟ್ಟಿ ತಂಡದಿಂದ  5 ದಿನಗಳಿಂದ ಡಾಂಬರ್‌ನಲ್ಲಿ ಹೂತಿದ್ದ ಶ್ವಾನದ ರಕ್ಷಣೆ   (Udupi) ಉಡುಪಿ: ಕಳೆದ ಐದು ದಿನಗಳಿಂದ ಡಾಂಬರ್‌ನಲ್ಲಿ ಹೂತಿದ್ದ ಶ್ವಾನವನ್ನು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಮತ್ತು ಅವರ ತಂಡದ ಹರೀಶ್ ಉದ್ಯಾವರರವರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.    ಆದಿಉಡುಪಿ ಸಂತೆ ಮಾರ್ಕೆಟ್ ಬಳಿ ರಸ್ತೆ ಡಾಂಬರ್ ಗೋಡಾನಿನಲ್ಲಿ ಕೆಲವು ಡಬ್ಬಗಳಿಂದ ಡಾಂಬರ್ ಸೋರಿಕೆ ಉಂಟಾಗಿ ಸ್ಥಳದಲ್ಲಿ ಪಸರಿಸಿತ್ತು. ಅಲ್ಲಿಗೆ ಆಹಾರ ಅರಸಿ ತೆರಳಿದ್ದ ಶ್ವಾನವೊಂದು ಡಾಂಬರಿನಲ್ಲಿ ಬಿದ್ದು […]

ಅಂಬಲಪಾಡಿ: ಸಮಾಜ ಸೇವಕ ವಿಶು ಶೆಟ್ಟಿ ತಂಡದಿಂದ  5 ದಿನಗಳಿಂದ ಡಾಂಬರ್‌ನಲ್ಲಿ ಹೂತಿದ್ದ ಶ್ವಾನದ ರಕ್ಷಣೆ  

(Udupi) ಉಡುಪಿ: ಕಳೆದ ಐದು ದಿನಗಳಿಂದ ಡಾಂಬರ್‌ನಲ್ಲಿ ಹೂತಿದ್ದ ಶ್ವಾನವನ್ನು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಮತ್ತು ಅವರ ತಂಡದ ಹರೀಶ್ ಉದ್ಯಾವರರವರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

   ಆದಿಉಡುಪಿ ಸಂತೆ ಮಾರ್ಕೆಟ್ ಬಳಿ ರಸ್ತೆ ಡಾಂಬರ್ ಗೋಡಾನಿನಲ್ಲಿ ಕೆಲವು ಡಬ್ಬಗಳಿಂದ ಡಾಂಬರ್ ಸೋರಿಕೆ ಉಂಟಾಗಿ ಸ್ಥಳದಲ್ಲಿ ಪಸರಿಸಿತ್ತು. ಅಲ್ಲಿಗೆ ಆಹಾರ ಅರಸಿ ತೆರಳಿದ್ದ ಶ್ವಾನವೊಂದು ಡಾಂಬರಿನಲ್ಲಿ ಬಿದ್ದು ಏಳಲಾರದೆ ಕಳೆದ ಐದು ದಿನಗಳಿಂದ ಒದ್ದಾಡುತ್ತಿತ್ತು. ಸ್ಥಳೀಯರಿಂದ ಮಾಹಿತಿ ಪಡೆದ ವಿಶುಶೆಟ್ಟಿ ಮತ್ತು ಹರೀಶ್ ಉದ್ಯಾವರರವರು ಅಲ್ಲಿಗೆ ತೆರಳಿ, ಡಬ್ಬಿಗಳ ನಡುವೆ ಡಾಂಬರ್ ನಲ್ಲಿ ಸಿಲುಕಿದ್ದ ಶ್ವಾನವನ್ನು ಬಹಳ ಪ್ರಯಾಸದಿಂದ ರಕ್ಷಿಸಿದ್ದಾರೆ.

ಡಾಮಾರು ತುಂಬಿದ್ದ ಡಬ್ಬಿಯನ್ನು ವಾಹನಕ್ಕೆ ಕಟ್ಟಿ ಎಳೆದು ತದನಂತರ ತೆಂಗಿನ ಎಣ್ಣೆಯನ್ನು ಸವರಿ ನಾಯಿಯನ್ನು ರಕ್ಷಿಸುವಲ್ಲಿ ವಿಶುಶೆಟ್ಟಿ ಮತ್ತು ಹರೀಶ್ ಉದ್ಯಾವರ ಯಶಸ್ವಿಯಾಗಿದ್ದಾರೆ.

  ಡಾಂಬರಿನ ವ್ಯಾಪಾರಿಗಳು ಈ ರೀತಿ ಡಾಂಬರ್ ಸೋರದಂತೆ ಜಾಗ್ರತೆ ವಹಿಸಿ, ಹಾವು ಹಾಗೂ ಮೂಕಪ್ರಾಣಿಗಳಿಗೆ ತೊಂದರೆ ಆಗದಂತೆ ಸಹಕರಿಸಬೇಕೆಂದು ವಿಶುಶೆಟ್ಟಿ ಮನವಿ ಮಾಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.