• Home  
  •  ಅಚ್ಚಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಶಿಬಿರ (Environmental awareness information camp at Achchada Higher Primary School)
- ಶಾಲಾ ಕಾಲೇಜು

 ಅಚ್ಚಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಶಿಬಿರ (Environmental awareness information camp at Achchada Higher Primary School)

Share: ಅಚ್ಚಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಶಿಬಿರ ಮಕ್ಕಳು ತಮ್ಮ ಜನ್ಮದಿನದಂದು ಗಿಡ ನಾಟಿ ಮಾಡಿ: ಯೋಜನಾಧಿಕಾರಿ ಮಮತಾಶೆಟ್ಟಿ  (Katapady) ಕಟಪಾಡಿ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಟಪಾಡಿ ವಲಯದ  ಕಟಪಾಡಿ ಕಾರ್ಯಕ್ಷೇತ್ರದ ಅಚ್ಚಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಪರಿಸರ ಜಾಗೃತಿ ಮಾಹಿತಿ  ಕಾರ್ಯಕ್ರಮನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ  ಅಬ್ದುಲ್ ಸತ್ತಾರ್ ವಹಿಸಿದ್ದರು.  ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು  ಯೋಜನಾಧಿಕಾರಿ ಶ್ರೀಮತಿ […]

 (Katapady) ಕಟಪಾಡಿ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಟಪಾಡಿ ವಲಯದ  ಕಟಪಾಡಿ ಕಾರ್ಯಕ್ಷೇತ್ರದ ಅಚ್ಚಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಪರಿಸರ ಜಾಗೃತಿ ಮಾಹಿತಿ  ಕಾರ್ಯಕ್ರಮನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ  ಅಬ್ದುಲ್ ಸತ್ತಾರ್ ವಹಿಸಿದ್ದರು.

 ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು  ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಮಕ್ಕಳಿಗೆ, ಪರಿಸರದ ರಕ್ಷಣೆ, ಜಾಗೃತಿ ಬಗ್ಗೆ ಮಾಹಿತಿ ನೀಡಿ ದ ಅವರು, ಪರಿಸರ ಉಳಿಸಲು ಪ್ರತಿಯೊಬ್ಬ ಮಕ್ಕಳೂ ತಮ್ಮ ಜನ್ಮದಿನದಂದು ಗಿಡ ನಾಟಿ ಮಾಡಿ ಎಂದು ಕಿವಿಮಾತು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಿರಿಜಾರವರು  ಪ್ರಾಸ್ತಾವಿಕವಾಗಿ ಮಾತನಾಡಿದರು. 

  ಕಾರ್ಯಕ್ರಮದಲ್ಲಿ  ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ  ಶ್ರೀಮತಿ ಪೂರ್ಣಿಮಾ, ಕೃಷಿ ಮೇಲ್ವಿಚಾರಕ ದೇವೇಂದ್ರ, ಸೇವಾ ಪ್ರತಿನಿಧಿ ಶ್ರೀಮತಿ ಶೋಭಾ ಉಪಸ್ಥಿತರಿದ್ದರು.

 ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಣೆ ಮಾಡಲಾಯಿತು.

ಶಾಲಾ ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಧ್ಯಾಪಕಿ ಶ್ರೀಮತಿ ಜಯಶ್ರೀ  ಸ್ವಾಗತಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.