ಪಾಂಗಾಳ : ಬಸ್ ಡಿಕ್ಕಿಯಾಗಿ ಮಹಿಳೆ ಮೃತ್ಯು
ಉಡುಪಿಯಿಂದ ಮಂಗಳೂರಿಗೆ ಸಾಗುತ್ತಿದ್ದ ಬಸ್
(Kaup)ಕಾಪು : ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ವೇಗದೂತ ಬಸ್ ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿದ ಘಟನೆ ಪಾಂಗಾಳ ರಾ.ಹೆ 66 ರಲ್ಲಿ ಶುಕ್ರವಾರ ರಾತ್ರಿ ಘಟಿಸಿದೆ.
ಬಸ್ ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿತ್ತು.
ಬ್ಯಾಂಕಿನ ನಿವೃತ್ತ ಉದ್ಯೋಗಿ ಮಹಿಳೆ ಶ್ರೀಮತಿ ಭಟ್ (73) ಎಂದು ತಿಳಿದು ಬಂದಿದ್ದು, ಅವರು ಪೂರ್ವ ಕಡೆಯಿಂದ ಪಶ್ಚಿಮದ ಕಡೆಗೆ ದಾಟಲು ನಿಂತಿದ್ದರು ಎಂದು ತಿಳಿದು ಬಂದಿದೆ.
ಉಚ್ಚಿಲದ ಸಮಾಜ ಸೇವಕ ಜಲಾಲ್, ಹಮೀದ್, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ಚಾಲಕ ನಾಗರಾಜ್ ಮತ್ತು ಸ್ಥಳೀಯರು ಸಹಕರಿಸಿದ್ದು, ಅಂಬುಲೆನ್ಸ್ ಮೂಲಕ ಮೃತದೇಹವನ್ನು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನಿಸಿದ್ದಾರೆ.
ಕಾಪು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

