• Home  
  •   ಅಥಣಿಯಲ್ಲಿ ನಡೆದ ಬೃಹತ್ ತಿರಂಗಾ ರೇಲಿ. (A huge Tiranga rally was held in Athani.)
- social service - social work

  ಅಥಣಿಯಲ್ಲಿ ನಡೆದ ಬೃಹತ್ ತಿರಂಗಾ ರೇಲಿ. (A huge Tiranga rally was held in Athani.)

Share:  ಅಥಣಿಯಲ್ಲಿ ನಡೆದ ಬೃಹತ್ ತಿರಂಗಾ ರೇಲಿ    ದೇಶಭಕ್ತಿಯ ಅಲೆಯಲ್ಲಿ ತೇಲಿದ ನಗರದ ನಿವಾಸಿಗಳು ​ (Athani) ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಗಚ್ಚಿನ ಮಠದ ಪೂಜ್ಯರಾದ ಶ್ರೀ ಶಿವಬಸವ ಸ್ವಾಮೀಜಿಗಳು ಹಾಗೂ ಶ್ರೀ ಶೆಟ್ಟರ ಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಹಿರಿಯ ಗಣ್ಯರು ಹಾಗೂ ಮಾಜಿ ಸೈನಿಕರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಬೃಹತ್ ತಿರಂಗಾ ರ್ಯಾಲಿಯು ಅತ್ಯಂತ ವಿಜೃಂಭಣೆ ಮತ್ತು ದೇಶಭಕ್ತಿಯ ಉತ್ಸಾಹದೊಂದಿಗೆ ಯಶಸ್ವಿಯಾಗಿ ಜರುಗಿತು. […]

​ (Athani) ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಗಚ್ಚಿನ ಮಠದ ಪೂಜ್ಯರಾದ ಶ್ರೀ ಶಿವಬಸವ ಸ್ವಾಮೀಜಿಗಳು ಹಾಗೂ ಶ್ರೀ ಶೆಟ್ಟರ ಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಹಿರಿಯ ಗಣ್ಯರು ಹಾಗೂ ಮಾಜಿ ಸೈನಿಕರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಬೃಹತ್ ತಿರಂಗಾ ರ್ಯಾಲಿಯು ಅತ್ಯಂತ ವಿಜೃಂಭಣೆ ಮತ್ತು ದೇಶಭಕ್ತಿಯ ಉತ್ಸಾಹದೊಂದಿಗೆ ಯಶಸ್ವಿಯಾಗಿ ಜರುಗಿತು.

​    ಐತಿಹಾಸಿಕ ಗಚ್ಚಿನ ಮಠದ ಆವರಣದಿಂದ ಚಾಲನೆ ಪಡೆದ ಈ ಬೃಹತ್ ತಿರಂಗಾ ರ್ಯಾಲಿಯು, ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸಂಚರಿಸಿತು.

    ಗಚ್ಚಿನ ಮಠದಿಂದ ಆರಂಭಗೊಂಡು ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಶಿವಯೋಗಿ ಸರ್ಕಲ್ ವರೆಗೆ ಸಾಗಿ ಬಂತು.  ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳೊಂದಿಗೆ ಕಂಠಪಾಠ ಮಾಡಿ ಮೆರವಣಿಗೆಗೆ ವಿಶೇಷ ಕಳೆ ತಂದರು.

​   ಈ ಬೃಹತ್ ಕಾರ್ಯಕ್ರಮದಲ್ಲಿ ಎಬಿವಿಪಿ ಯುವ ಮೋರ್ಚಾ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜೊತೆಗೆ ಪ್ರಮುಖ ರಾಜಕೀಯ ನಾಯಕರು ಹಾಗೂ ಹಿರಿಯ ಗಣ್ಯರು ಭಾಗವಹಿಸಿ ಮೆರವಣಿಗೆಯ ಗೌರವ ಹೆಚ್ಚಿಸಿದರು.

​ ವಿಶೇಷವಾಗಿ, ಮಾಜಿ ಶಾಸಕರಾದ ಮಹೇಶ್ ಕುಮಠಳ್ಳಿ, ಶ್ರೀ ಪುಟ್ಟು ಹಿರೇಮಠ, ಧರಪ್ಪ ಟಕ್ಕನವರ್, ಸಿದ್ದಪ್ಪ ಮುದುಕಣ್ಣನವರ್, ಗಿರೀಶ್ ಬುಟಾಳಿ, ಸಂಪತ್ ಕುಮಾರ್ ಶೆಟ್ಟಿ, ಶ್ರೀಮತಿ ಸರಸ್ವತಿ ನ್ಯಾಮಗೌಡ ಸೇರಿದಂತೆ ಅನೇಕ ಪ್ರಮುಖ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಥಣಿ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ ಸಾವಿರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

  : ವರದಿ ಮಹೇಶ್ ಶರ್ಮಾ

Leave a comment

Your email address will not be published. Required fields are marked *

eMedia Kannada  @2025. All Rights Reserved.