• Home  
  • ಅದಮಾರು ಪಿಪಿಸಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ (International Yoga Day At Adamaru PPC Educational institution)
- ಜೀವನಶೈಲಿ

ಅದಮಾರು ಪಿಪಿಸಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ (International Yoga Day At Adamaru PPC Educational institution)

Share: ಅದಮಾರು ಪಿಪಿಸಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ ಪಡುಬಿದ್ರಿ:  ಇಲ್ಲಿನ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಎನ್ ಎಸ್ ಎಸ್ ಆಶ್ರಯದಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಯೋಗಾಸನಗಳ ಪ್ರಾತ್ಯಕ್ಷಿಕೆಯ ಮೂಲಕ ನೆರವೇರಿಸಲಾಯಿತು.  ಯೋಗ ಗುರುಗಳಾದ ಉಡುಪಿ ಜಿಲ್ಲಾ ಪತಂಜಲ ಯೋಗ ಸಮಿತಿಯ ಕಾರ್ಯದರ್ಶಿ ರಂಜಿತ್ ಕೆ ಎಸ್ ರವರು  ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.  ಅವರು ಯೋಗದ ಮಹತ್ವವನ್ನು ತಿಳಿಸುತ್ತಾ,  ಯೋಗವೆಂದರೆ ಕರ್ಮದ ಕೌಶಲ. ಕೇವಲ ಯೋಗಾಸನಗಳು ಮಾತ್ರ ಯೋಗವಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, […]

ಅದಮಾರು ಪಿಪಿಸಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ

ಪಡುಬಿದ್ರಿ:  ಇಲ್ಲಿನ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಎನ್ ಎಸ್ ಎಸ್ ಆಶ್ರಯದಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಯೋಗಾಸನಗಳ ಪ್ರಾತ್ಯಕ್ಷಿಕೆಯ ಮೂಲಕ ನೆರವೇರಿಸಲಾಯಿತು.

 ಯೋಗ ಗುರುಗಳಾದ ಉಡುಪಿ ಜಿಲ್ಲಾ ಪತಂಜಲ ಯೋಗ ಸಮಿತಿಯ ಕಾರ್ಯದರ್ಶಿ ರಂಜಿತ್ ಕೆ ಎಸ್ ರವರು  ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

 ಅವರು ಯೋಗದ ಮಹತ್ವವನ್ನು ತಿಳಿಸುತ್ತಾ,  ಯೋಗವೆಂದರೆ ಕರ್ಮದ ಕೌಶಲ. ಕೇವಲ ಯೋಗಾಸನಗಳು ಮಾತ್ರ ಯೋಗವಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಲ್ಲವೂ ಯೋಗವೇ ಆಗಿದೆ. ಇದರಿಂದ ಶರೀರ ಹಾಗೂ ಮಾನಸಿಕ ಸ್ವಾಸ್ಥ್ಯ ದೊರೆಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ಯೋಗ ಮಾಡಬೇಕು ಎಂದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಪ್ರತಿನಿಧಿ ಪ್ರೊ. ನಿತ್ಯಾನಂದರು ಮಾತನಾಡಿ, ಯೋಗದಿಂದ ಕೆಲವು ಗುಣಪಡಿಸಲಾರದ ಕಾಯಿಲೆಗಳು ಸುಲಭವಾಗಿ ಗುಣವಾಗುತ್ತವೆ. ಮಂಡಿ ನೋವು, ತಲೆನೋವು, ಶ್ವಾಸಕೋಶದ ತೊಂದರೆಗಳು ಇವೆಲ್ಲವೂ ಯೋಗ ಮಾಡುವುದರಿಂದ ದೂರವಾಗುತ್ತದೆ. ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ ಎಂದರು.

 ವಿದ್ಯಾರ್ಥಿಗಳು ತಾಡಾಸನ , ವೃಕ್ಷಾಸನ ತ್ರಿಕೋನಾಸನ, ವಜ್ರಾಸನ ಮೊದಲಾದ ಆಸನಗಳನ್ನು ಪ್ರದರ್ಶಿಸಿದರು.

 ವಿಶ್ವ ಯೋಗ ದಿನಾಚರಣೆಯನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಾಯಿತು. ಕಾಲೇಜು ಹಾಗೂ ಹೈಸ್ಕೂಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಾಮೂಹಿಕ ಯೋಗಭ್ಯಾಸ ಮಾಡಿದರು.

 ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಸಂಜೀವ್ ನಾಯಕ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಎ ವಿ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಶ್ರೀಮತಿ ಪ್ರತಿಮಾ ಭಟ್ ಉಪಸ್ಥಿತರಿದ್ದರು.

 ಹತ್ತನೇ ತರಗತಿಯ ವಿದ್ಯಾರ್ಥಿನಿ ಕು. ಪ್ರಣಮ್ಯ ಸ್ವಾಗತಿಸಿದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಬಿ ಭಾರ್ಗವಿ ಕಾರ್ಯಕ್ರಮ ನಿರೂಪಿಸಿದರು.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕು.  ಸ್ನೇಹ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.