• Home  
  • ಅದಮಾರು ಪಿಪಿಸಿ ವಿದ್ಯಾ ಸಂಸ್ಥೆಯಲ್ಲಿ 216 ವಿದ್ಯಾರ್ಥಿಗಳು ಎಸ್‌ಎಸ್‌ ಎಲ್‌ಸಿ ವಿದ್ಯಾರ್ಥಿಗಳು (216 students are SS LC students at Adamaru PPC Educational Institution
- ಶಾಲಾ ಕಾಲೇಜು

ಅದಮಾರು ಪಿಪಿಸಿ ವಿದ್ಯಾ ಸಂಸ್ಥೆಯಲ್ಲಿ 216 ವಿದ್ಯಾರ್ಥಿಗಳು ಎಸ್‌ಎಸ್‌ ಎಲ್‌ಸಿ ವಿದ್ಯಾರ್ಥಿಗಳು (216 students are SS LC students at Adamaru PPC Educational Institution

Share: ಅದಮಾರು ಪಿಪಿಸಿ ವಿದ್ಯಾ ಸಂಸ್ಥೆಯಲ್ಲಿ 216 ವಿದ್ಯಾರ್ಥಿಗಳು ಎಸ್‌ಎಸ್‌ ಎಲ್‌ಸಿ ವಿದ್ಯಾರ್ಥಿಗಳು (Adamaru) ಅದಮಾರು : ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಇಂದಿನಿಂದ ಆರಂಭಗೊಂಡಿದ್ದು, ಏಪ್ರಿಲ್ 4ರವರೆಗೆ ನಡೆಯಲಿದೆ. ಮೂರು ಹಂತಗಳ ಪರೀಕ್ಷೆಯಲ್ಲಿ ಇದು ಮೊದಲನೆಯದಾಗಿದ್ದು, ರಾಜ್ಯಾದ್ಯಂತ 2,818 ಕೇಂದ್ರಗಳಲ್ಲಿ 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.  ಮೊದಲ ದಿನ ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ನಡೆಯಲಿವೆ. ಕಾಪು ತಾಲೂಕಿನ ಅದಮಾರು ಪೂರ್ಣಪ್ರಜ್ಞ ಶಾಲೆಯಲ್ಲಿ ಈ ಬಾರಿ 216 ಮಕ್ಕಳು ತಮ್ಮ ಭವಿಷ್ಯ […]

(Adamaru) ಅದಮಾರು : ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಇಂದಿನಿಂದ ಆರಂಭಗೊಂಡಿದ್ದು, ಏಪ್ರಿಲ್ 4ರವರೆಗೆ ನಡೆಯಲಿದೆ.

ಮೂರು ಹಂತಗಳ ಪರೀಕ್ಷೆಯಲ್ಲಿ ಇದು ಮೊದಲನೆಯದಾಗಿದ್ದು, ರಾಜ್ಯಾದ್ಯಂತ 2,818 ಕೇಂದ್ರಗಳಲ್ಲಿ 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

 ಮೊದಲ ದಿನ ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ನಡೆಯಲಿವೆ.

ಕಾಪು ತಾಲೂಕಿನ ಅದಮಾರು ಪೂರ್ಣಪ್ರಜ್ಞ ಶಾಲೆಯಲ್ಲಿ ಈ ಬಾರಿ 216 ಮಕ್ಕಳು ತಮ್ಮ ಭವಿಷ್ಯ ಬರೆಯಲಿದ್ದಾರೆ. ಪರೀಕ್ಷೆಗಾಗಿ 9 ಕೊಠಡಿಗಳನ್ನು ಸಿದ್ಧ ಪಡಿಸಲಾಗಿದ್ದು, ಇಂದು ಕೊಠಡಿಯಲ್ಲಿ ತಲಾ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪಡುಬಿದ್ರಿಯ ಲಯನ್ಸ್‌ ಶಾಲೆ ಮತ್ತು ಗಣಪತಿ ಹೈಸ್ಕೂಲ್‌, ಎರ್ಮಾಳು ಬಡಾದ ವಿದ್ಯಾಪ್ರಭೋಧಿನಿ, ತೆಂಕದ ಕಿನಾರಾ ಶಾಲೆ ಮತ್ತು ಸರಕಾರಿ ಹೈಸ್ಕೂಲ್ ಹಾಗೂ ಪಿಪಿಸಿ ಅದಮಾರಿನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

  ಬಿಸಿಲಿನ ತಾಪ ಹೆಚ್ಚಾಗಿದ್ದು, ವಿದ್ಯಾರ್ಥಿಗಳ ನೆರವಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ನಿರ್ಜಲೀಕರಣ ತಡೆಯಲು ಒಆರ್‌ಎಸ್ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.  

ಪರೀಕ್ಷಾ ಕೊಠಡಿಯ ಸುಪಾಸಿನಲ್ಲಿ ಸಿಸಿ ಕೆಮೆರಾ ಅಳವಡಿಸಲಾಗಿದ್ದು, ಹೆಚ್ಚಿನ ಭದ್ರತೆ ವಹಿಸಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.