• Home  
  • ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಉದ್ಘಾಟನೆ (Inauguration of the Amruta Mahotsav of Adamaru Purnapragya Educational Institute)
- ಶಾಲಾ ಕಾಲೇಜು

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಉದ್ಘಾಟನೆ (Inauguration of the Amruta Mahotsav of Adamaru Purnapragya Educational Institute)

Share: ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಉದ್ಘಾಟನೆ ಸುಜ್ಞಾನ ಮಂದಿರ ಕಟ್ಟಡ ಲೋಕಾರ್ಪಣೆ (Adamaru) ಅದಮಾರು: ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವದ ಪ್ರಯುಕ್ತ “ಸುಜ್ಞಾನ ಮಂದಿರ” ಕಟ್ಟಡವನ್ನು ಅದಮಾರು ಹಿರಿಯ ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಮತ್ತು ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಜತೆಯಾಗಿ ಶನಿವಾರ ಲೋಕಾರ್ಪಣೆಗೊಳಿಸಿದರು.   ಇದೇ ಸಂದರ್ಭ ಯತಿಗಳು ಪ್ರಜ್ಞಾಮೃತ ಪ್ರದರ್ಶಿನಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಅದಮಾರು ಹಿರಿಯ ಯತಿಗಳಾದ ಶ್ರೀ […]

(Adamaru) ಅದಮಾರು: ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವದ ಪ್ರಯುಕ್ತ “ಸುಜ್ಞಾನ ಮಂದಿರ” ಕಟ್ಟಡವನ್ನು ಅದಮಾರು ಹಿರಿಯ ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಮತ್ತು ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಜತೆಯಾಗಿ ಶನಿವಾರ ಲೋಕಾರ್ಪಣೆಗೊಳಿಸಿದರು.

  ಇದೇ ಸಂದರ್ಭ ಯತಿಗಳು ಪ್ರಜ್ಞಾಮೃತ ಪ್ರದರ್ಶಿನಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಅದಮಾರು ಹಿರಿಯ ಯತಿಗಳಾದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ, ಗ್ರಾಮಾಂತರ ಪ್ರದೇಶವಾದ ಅದಮಾರಿನಲ್ಲಿ ಪೂಜ್ಯ ವಿಬುಧೇಶತೀರ್ಥರು ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ ಕೃತಾರ್ಥರಾಗಿದ್ದಾರೆ. ಮಕ್ಕಳು ಆರೋಗ್ಯವಂತರಾಗಿ ಶಿಕ್ಷಣ ಪಡೆಯುವುದೇ ಅವರ ಸಂಕಲ್ಪವಾಗಿತ್ತು. ಶಾಲೆಗೆ ಯಾವುದೇ ವಾಹನ ಸೌಕರ್ಯ ಇಲ್ಲದೆ ಬಂದ ವಿದ್ಯಾರ್ಥಿಗಳು ಯಾವುದೇ ರೋಗ ರುಜಿನ ಇಲ್ಲದೆ ಆರೋಗ್ಯವಂತರಾಗಿ ಬಾಳುತ್ತಿದ್ದಾರೆ ಎಂದರು.

 ಅತಿ ವಿಶಿಷ್ಟ ನಿವೃತ್ತ ವಿಜ್ಞಾನಿ ಪದ್ಮಶ್ರೀ ಪ್ರಹ್ಲಾದ ರಾಮರಾವ್‌ ರವರು ದಿಕ್ಸೂಚಿ ಭಾಷಣಗೈದರು.

   ವೇದಿಕೆಯಲ್ಲಿ ಬೆಂಗಳೂರು ಜವಾಹರಲಾಲ್‌ ನೆಹರು ತಾರಾಲಯದ ನಿರ್ದೇಶಕ ಡಾ. ಬಿ ಆರ್. ಗುರುಪ್ರಸಾದ್‌, ಖ್ಯಾತ ಸಂಶೋಧಕ ಡಾ. ವಿನಾಯಕ ಕೆ ಪತ್ತಾರ್‌, ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಎರ್ಮಾಳು ಉದಯ ಕೆ. ಶೆಟ್ಟಿ, ಡಾ. ಶಿವಾನಂದ ಶೆಟ್ಟಿ, ಉಡುಪಿ ಅದಮಾರು ಮಠ ಶಿಕ್ಷಣ ಸಂಸ್ಥೆ ಬೆಂಗಳೂರು ಇದರ ಗೌರವ ಕಾರ್ಯದರ್ಶಿ ಡಾ. ಎಪಿ ಭಟ್ ಉಪಸ್ಥಿತರಿದ್ದರು.

  ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ಭಟ್ ಸ್ವಾಗತಿಸಿದರು.

 ಶಿಕ್ಷಕ ಜಯಶಂಕರ ಕಂಗಣ್ಣಾರು ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.