• Home  
  •  ಅದಮಾರು ಹಿರಿಯ ಶ್ರೀ ಗಳಿಂದ ಸ್ಪೀಕರ್ ಅವಹೇಳನ: ಸಾರ್ವತ್ರಿಕ ಖಂಡನೆ (Speaker contempt by Adamaru Swamiji : Universal Cndemnation)
- ಅಪರಾಧ

 ಅದಮಾರು ಹಿರಿಯ ಶ್ರೀ ಗಳಿಂದ ಸ್ಪೀಕರ್ ಅವಹೇಳನ: ಸಾರ್ವತ್ರಿಕ ಖಂಡನೆ (Speaker contempt by Adamaru Swamiji : Universal Cndemnation)

Share: ಅದಮಾರು ಹಿರಿಯ ಶ್ರೀ ಗಳಿಂದ ಸ್ಪೀಕರ್ ಅವಹೇಳನ: ಸಾರ್ವತ್ರಿಕ ಖಂಡನೆ  (Udupi) ಉಡುಪಿ: ಉಡುಪಿಯ ಅದಮಾರು ಮಠದ ಹಿರಿಯ ಸ್ವಾಮೀಜಿ ವಿಶ್ವಪ್ರಿಯತೀರ್ಥ ಸ್ವಾಮೀಜಿಯವರು (Adamaru Sri Vishwapriya Swamiji) ರಾಜ್ಯ ವಿಧಾನಸಭೆಯ ಸ್ಪೀಕರ್‌ ಯು. ಟಿ ಖಾದರ್‌ (Speaker UT Khader) ಅವರನ್ನು ಏಕವಚನದಲ್ಲಿ ಸಂಬೋಧಿಸಿ ನಿಂದಿಸಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.  ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಫೆ. 22ರಿಂದ 28ರವರೆಗೆ ಬ್ರಹ್ಮಕಲಾಶಾಭಿಷೇಕದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಫೆ. 26ರಂದು […]

ಅದಮಾರು ಹಿರಿಯ ಶ್ರೀ ಗಳಿಂದ ಸ್ಪೀಕರ್ ಅವಹೇಳನ: ಸಾರ್ವತ್ರಿಕ ಖಂಡನೆ

 (Udupi) ಉಡುಪಿ: ಉಡುಪಿಯ ಅದಮಾರು ಮಠದ ಹಿರಿಯ ಸ್ವಾಮೀಜಿ ವಿಶ್ವಪ್ರಿಯತೀರ್ಥ ಸ್ವಾಮೀಜಿಯವರು (Adamaru Sri Vishwapriya Swamiji) ರಾಜ್ಯ ವಿಧಾನಸಭೆಯ ಸ್ಪೀಕರ್‌ ಯು. ಟಿ ಖಾದರ್‌ (Speaker UT Khader) ಅವರನ್ನು ಏಕವಚನದಲ್ಲಿ ಸಂಬೋಧಿಸಿ ನಿಂದಿಸಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

 ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಫೆ. 22ರಿಂದ 28ರವರೆಗೆ ಬ್ರಹ್ಮಕಲಾಶಾಭಿಷೇಕದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಫೆ. 26ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅದಮಾರು ಸ್ವಾಮೀಜಿಯವರು  ಸ್ಪೀಕರ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

 ಕನ್ನಡ ಹೋರಾಟಗಾರರು ಕನ್ನಡ, ಕನ್ನಡ ಎಂದು ಹೊರಳಾಡಿಕೊಳ್ತಾರೆ. ಅವರ ಮಕ್ಕಳು ಆಂಗ್ಲ ಶಾಲೆಯಲ್ಲಿ ಓದುತ್ತಿದ್ದಾರೆ. ಇವರು ಹಿಂದಿ ಬೋರ್ಡ್ ಬಗ್ಗೆ ಗಲಾಟೆ ಮಾಡ್ತಾರೆ. ಅಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ನಡೆಯುವಾಗ ಒಬ್ಬ ಅಧ್ಯಕ್ಷ ಮೇಲ್ಗಡೆ ಕೂತಿರ್ತಾನೆ. ಅವನ ಕನ್ನಡ ಕೇಳಿದ್ದೀರಾ ? ಕೇಳಿಲ್ಲಾ ಅಂದ್ರೆ ಸರಿಯಾಗಿ ಕೇಳಿಸಿಕೊಳ್ಳಿ. ಲಕಾರ ಳಕಾರಗಳ ವ್ಯತ್ಯಾಸ ಇಲ್ಲದ ರೀತಿ ಕನ್ನಡ ಭಾಷೆ ಬರ್ತಾ ಉಂಟು. ಆದರೆ ಕೆಲವರು ಸುಮ್ಮನೆ ಕನ್ನಡ ಕನ್ನಡ ಅಂತ ಗಲಾಟೆ ಮಾಡ್ತಾರೆ ಎಂದು ಶ್ರೀಗಳು ಹೇಳಿದ್ದಾರೆ.

 ಸ್ವಾಮೀಜಿಯ ಈ ನಡೆಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ವಿಧಾನ ಸಭಾಧ್ಯಕ್ಷರನ್ನು ಏಕ ವಚನದಲ್ಲಿ ಸಂಬೋಧಿಸಿ ಹಿರಿಯ ಸ್ವಾಮೀಜಿಗಳು ಈ ರೀತಿ ಮಾತಾಡಿದ್ದು ಖಂಡನಾರ್ಹ ಎಂದು ರಾಜ್ಯ ಯುವ ಕಾಂಗ್ರೆಸ್ಸಿನ ಮಾಜಿ ಕಾರ್ಯದರ್ಶಿ ಕಾಂಗ್ರೆಸ್ ನ ಹಿರಿಯ ಮುಖಂಡ ಗಣೇಶ್ ರಾಜ್ ಸರಳೇಬೆಟ್ಟು (Ganeshraj Saralebettu) ಆಕ್ರೋಶ ವ್ಯಕ್ತವಾಗಿದೆ.

ಸುಸಂಸ್ಕೃತರೆನಿಸಿದ ಶ್ರೀಗಳು  ಇಂತಹ ಕೆಟ್ಟ ಪದಗಳಿಂದ ವರ್ಣಿಸಿರುವುದು, ನಿಂದಿಸುವುದು ಸರಿಯಾದ ಮಾರ್ಗವಲ್ಲ ಅವರ ಬಾಯಲ್ಲಿ ಇಂತಹ ಪದ ನಿರೀಕ್ಷಿಸಿರಲಿಲ್ಲ ಎಂದು ಗಣೇಶ್ ರಾಜ್ ಖೇದ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.