• Home  
  • ಬಂಟಕಲ್ಲು ತಾಂತ್ರಿಕ ಕಾಲೇಜಿನಲ್ಲಿ “ಬೇಸಿಕ್‌ ಲೈಫ್‌ ಸಪೋರ್ಟ್ ಆಂಡ್‌ ಏರ್ ವೇ ಮ್ಯಾನೇಜ್ ಮೆಂಟ್” ಕಾರ್ಯಾಗಾರ  (‘NIHOP 2024’, One day Workshop on “Basic Life Support and Airway Management”)
- ಶಾಲಾ ಕಾಲೇಜು

ಬಂಟಕಲ್ಲು ತಾಂತ್ರಿಕ ಕಾಲೇಜಿನಲ್ಲಿ “ಬೇಸಿಕ್‌ ಲೈಫ್‌ ಸಪೋರ್ಟ್ ಆಂಡ್‌ ಏರ್ ವೇ ಮ್ಯಾನೇಜ್ ಮೆಂಟ್” ಕಾರ್ಯಾಗಾರ  (‘NIHOP 2024’, One day Workshop on “Basic Life Support and Airway Management”)

Share: ಬಂಟಕಲ್ಲು ತಾಂತ್ರಿಕ ಕಾಲೇಜಿನಲ್ಲಿ “ಬೇಸಿಕ್‌ ಲೈಫ್‌ ಸಪೋರ್ಟ್ ಆಂಡ್‌ ಏರ್ ವೇ ಮ್ಯಾನೇಜ್ ಮೆಂಟ್” ಕಾರ್ಯಾಗಾರ  (Bantakal) ಬಂಟಕಲ್:‌ ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೊಳಪಟ್ಟ ಬಂಟಕಲ್ಲು ನಿರಾಮಯ ಇನ್ಸ್ಟಿಟ್ಯೂಟ್ ಆಫ಼್ ಹೆಲ್ತ್ ಸೈನ್ಸಸ್ ಹಾಗೂ ಡೆಲ್ಟಾ ಹೆಲ್ತ್ ಕೇರ್ ನ ಆಶ್ರಯದಲ್ಲಿ ಬೇಸಿಕ್ ಲೈಫ್ ಸಪೋರ್ಟ್  ಹಾಗೂ ಏರ್ ವೇ ಮ್ಯಾನೇಜ್ ಮೇಂಟ್ ನ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.   ಎಸ್.ಎಂ.ವಿ.ಐ.ಟಿ.ಎಂ ಬಂಟಕಲ್ ನ ಪ್ರಾಂಶುಪಾಲರಾದ ಶ್ರೀ ತಿರುಮಲೇಶ್ವರ ಭಟ್ (Dr. Thirumaleshwara Bhat […]

ಬಂಟಕಲ್ಲು ತಾಂತ್ರಿಕ ಕಾಲೇಜಿನಲ್ಲಿ “ಬೇಸಿಕ್‌ ಲೈಫ್‌ ಸಪೋರ್ಟ್ ಆಂಡ್‌ ಏರ್ ವೇ ಮ್ಯಾನೇಜ್ ಮೆಂಟ್” ಕಾರ್ಯಾಗಾರ 

(Bantakal) ಬಂಟಕಲ್:‌ ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೊಳಪಟ್ಟ ಬಂಟಕಲ್ಲು ನಿರಾಮಯ ಇನ್ಸ್ಟಿಟ್ಯೂಟ್ ಆಫ಼್ ಹೆಲ್ತ್ ಸೈನ್ಸಸ್ ಹಾಗೂ ಡೆಲ್ಟಾ ಹೆಲ್ತ್ ಕೇರ್ ನ ಆಶ್ರಯದಲ್ಲಿ ಬೇಸಿಕ್ ಲೈಫ್ ಸಪೋರ್ಟ್  ಹಾಗೂ ಏರ್ ವೇ ಮ್ಯಾನೇಜ್ ಮೇಂಟ್ ನ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

  ಎಸ್.ಎಂ.ವಿ.ಐ.ಟಿ.ಎಂ ಬಂಟಕಲ್ ನ ಪ್ರಾಂಶುಪಾಲರಾದ ಶ್ರೀ ತಿರುಮಲೇಶ್ವರ ಭಟ್ (Dr. Thirumaleshwara Bhat Principal SMVITM)ರವರು ಮುಖ್ಯ ಅತಿಥಿಯಾಗಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ಅವರು ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿ, ಜೀವ ರಕ್ಷಣೆಯ ಬಗೆಗಿನ ಕಾರ್ಯಾಗಾರಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. 

 ಅತಿಥಿಯಾದ ಡಾ. ನವೀನ್ ಎಂ. ಬಲ್ಲಾಳ್(Naveen M Ballal)  ರವರು ಬೇಸಿಕ್ ಲೈಫ್ ಸಪೋರ್ಟ್ ನ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.

 ಡೆಲ್ಟಾ ಹೆಲ್ತ್ ಕೇರ್ ನ ಬೋಧಕರಾದ ಶ್ರೀ ರಾಹುಲ್ ಬಿಸ್ಟ್ (Rahul Bisht, AHA-BLS & ACLS Instructor Delta Health Care Vadodara India),ರವರು “ಬೇಸಿಕ್ ಲೈಫ್ ಸಪೋರ್ಟ್ ಹಾಗೂ ಏರ್ ವೇ ಮ್ಯಾನೇಜ್ ಮೇಂಟ್” ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

 ಶ್ರೀ ಸಿ. ಆರ್.ಭರತ್ ನಾರಾಯಣನ್ ರವರು ಮೆಡಿಕಲ್ ಸಿಮ್ಯೂಲೇಟರ್ ನ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. 

 ನಿರಾಮಯ ಇನ್ಸ್ಟಿಟ್ಯೂಟ್ ಆಫ್‌ ಹೆಲ್ತ್ ಸೈನ್ಸಸ್, ಉಡುಪಿ ಕಾಲೇಜ್ ಆಫ್ ನರ್ಸಿಂಗ್, ವಿದ್ಯಾ ಕಾಲೇಜ್ ಆಫ್ ನರ್ಸಿಂಗ್,  ಆದರ್ಶ ಇನ್ಸ್ಟಿಟ್ಯೂಟ್ ಆಫ಼್ ಅಲೈಡ್ ಹೆಲ್ತ್ ಸೈನ್ಸಸ್ , ವಿದ್ಯಾರತ್ನ ಇನ್ಸ್ಟಿಟ್ಯೂಟ್ ಆಫ್‌ ಹೆಲ್ತ್ ಸೈನ್ಸಸ್ ಹಾಗೂ ಎಸ್.ಎಂ.ವಿ.ಐ.ಟಿ.ಎಂ.ನ ಎಂ.ಬಿ.ಎ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.

ನಿರಾಮಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಫ್ಲಾವಿಯ ಕ್ಯಾಸ್ಟಲೀನೊ (Dr. Flavia Castelino, Principal NCON) ಸ್ವಾಗತಿಸಿ, ರೋಶನಿ ರೋಡ್ರಿಗಸ್ ಕಾರ್ಯಾಗಾರದ ಬಗ್ಗೆ ಅವಲೋಕಿಸಿದರು.   ಶಿವಶಂಕರ್ ಪೈ ವಂದಿಸಿ. ಜೆನಿಫರ್ ಮಥಾಯಸ್ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.