• Home  
  • ಅದಾನಿ ಫೌಂಡೇಶನ್ ಅನುದಾನ : ತೆಂಕ ಗ್ರಾಪಂ  ಕಟ್ಟಡದ ಮೊದಲನೆಯ ಮಹಡಿ ಉದ್ಘಾಟನೆ (Adani Foundation grant: Inauguration of the first floor of the Tenka Grampan building)
- ಸಹಾಯ ಹಸ್ತ

ಅದಾನಿ ಫೌಂಡೇಶನ್ ಅನುದಾನ : ತೆಂಕ ಗ್ರಾಪಂ  ಕಟ್ಟಡದ ಮೊದಲನೆಯ ಮಹಡಿ ಉದ್ಘಾಟನೆ (Adani Foundation grant: Inauguration of the first floor of the Tenka Grampan building)

Share: ಅದಾನಿ ಫೌಂಡೇಶನ್ ಅನುದಾನ : ತೆಂಕ ಗ್ರಾಪಂ  ಕಟ್ಟಡದ ಮೊದಲನೆಯ ಮಹಡಿ ಉದ್ಘಾಟನೆ   ಹೊಸ ಕಚೇರಿ ಉದ್ಘಾಟಿಸಿದ ಅದಾನಿ ಸಮೂಹದ  ಅಧ್ಯಕ್ಷ ಕಿಶೋರ್ ಆಳ್ವ (Thenka yermal) ತೆಂಕ ಎರ್ಮಾಳು: ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ತನ್ನ ಸಿಎಸ್‌ ಆರ್‌ ಅನುದಾನದಲ್ಲಿ ರೂ. 25.15 ಲಕ್ಷ ವೆಚ್ಚದಲ್ಲಿ ತೆಂಕ ಗ್ರಾಮ ಪಂಚಾಯತ್ ಕಚೇರಿಯ ಮೊದಲ ಮಹಡಿಯನ್ನು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರ ಹಾಗೂ ಅಧ್ಯಕ್ಷರಾದ ಕಿಶೋರ್ ಆಳ್ವ ಉದ್ಘಾಟಿಸಿದರು.    ಈ ಸಂದರ್ಭ […]

(Thenka yermal) ತೆಂಕ ಎರ್ಮಾಳು: ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ತನ್ನ ಸಿಎಸ್‌ ಆರ್‌ ಅನುದಾನದಲ್ಲಿ ರೂ. 25.15 ಲಕ್ಷ ವೆಚ್ಚದಲ್ಲಿ ತೆಂಕ ಗ್ರಾಮ ಪಂಚಾಯತ್ ಕಚೇರಿಯ ಮೊದಲ ಮಹಡಿಯನ್ನು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರ ಹಾಗೂ ಅಧ್ಯಕ್ಷರಾದ ಕಿಶೋರ್ ಆಳ್ವ ಉದ್ಘಾಟಿಸಿದರು.

   ಈ ಸಂದರ್ಭ ಮಾತನಾಡಿದ ಕಿಶೋರ್ ಆಳ್ವ, 2015ರಲ್ಲಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರವು ಅದಾನಿ ಸಮೂಹ  ಪಡೆದ ನಂತರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿವಿಧ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಗಳು ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಜೀವನೋಪಾಯ ಉತ್ತೇಜನ ಹಾಗೂ ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹ ಕ್ಷೇತ್ರಗಳಲ್ಲಿ ಜಾರಿಗೊಳ್ಳುತ್ತಿವೆ.

  ಸುತ್ತಮುತ್ತಲಿನ ಏಳು ಗ್ರಾಮ ಪಂಚಾಯತ್‌ಗಳಿಗೆ ವಿಶೇಷ ಸಿಎಸ್‌ ಆರ್‌ ಅನುದಾನವನ್ನು ನೀಡಲಾಗಿದೆ. ಈ ಯೋಜನೆಯಡಿ ಅದಾನಿ ಫೌಂಡೇಶನ್ ಈಗಾಗಲೇ ಸುಮಾರು ರೂ. 12 ಕೋಟಿ ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ತೆಂಕ ಗ್ರಾಮ ಪಂಚಾಯತ್‌ನಲ್ಲೇ ಸುಮಾರು ರೂ. 2.10 ಕೋಟಿ ಮೌಲ್ಯದ ಕಾಮಗಾರಿಗಳು ಜಾರಿಗೊಂಡಿವೆ.

  ಪ್ರತಿ ವರ್ಷ ಪಂಚಾಯತ್‌ಗಳು ಸಲ್ಲಿಸುವ ಕ್ರಿಯಾ ಯೋಜನೆ ಆಧಾರದ ಮೇಲೆ ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕ್ರಿಯಾ ಯೋಜನೆಯ ಭಾಗವಾಗಿ ತೆಂಕ ಗ್ರಾಮ ಪಂಚಾಯತ್‌ ತನ್ನ ವ್ಯಾಪ್ತಿಯಲ್ಲಿನ ಜನಸಂಖ್ಯೆ ಮತ್ತು ಆಡಳಿತಾತ್ಮಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಂಚಾಯತ್ ಕಚೇರಿಯನ್ನು ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಿತ್ತು. ಈ ಮನವಿಗೆ ಸ್ಪಂದಿಸಿ ಅದಾನಿ ಪವರ್ ಲಿಮಿಟೆಡ್ ಮತ್ತು ಅದಾನಿ ಫೌಂಡೇಶನ್ ಸಹಯೋಗದಲ್ಲಿ ಈಗಿರುವ ಪಂಚಾಯತ್ ಕಟ್ಟಡದ ಮೇಲೆ ಮೊದಲ ಮಹಡಿಯನ್ನು ನಿರ್ಮಿಸಲಾಗಿದೆ ಎಂದರು.

 ತೆಂಕ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಸುರೇಖಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ,   ಗ್ರಾಮ ಲೆಕ್ಕಾಧಿಕಾರಿಯಾದ ವಿಜಯ್, ಮಾಜಿ ಉಪಾಧ್ಯಕ್ಷೆ  ಕಸ್ತೂರಿ ಪ್ರವೀಣ್, ಪಂಚಾಯತ್ ಮಾಜಿ ಸದಸ್ಯರಾದ ಕಿಶೋರ್ ಕುಮಾರ್, ಬಾಲಚಂದ್ರ, ಅರುಣಾ ಕುಮಾರಿ, ಅದಾನಿ ಪವರ್ ಲಿಮಿಟೆಡ್ ನ ಎಜಿಎಂ ರವಿ ಆರ್. ಜೇರೆ, ಅದಾನಿ ಫೌಂಡೇಶನ್ ಸಿಬ್ಬಂದಿ ಅನುದೀಪ್ ಹಾಗೂ ಪಂಚಾಯತ್‌ ಸಿಬ್ಬಂದಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.