• Home  
  • ಅದಾನಿ ಫೌಂಡೇಶನ್ ನಿಂದ ಜಿಲ್ಲೆಯ ೬,೭೩೦ ಶಾಲಾ ವಿದ್ಯಾರ್ಥಿಗಳಿಗೆ ಒಟ್ಟು ರೂ. ೪೦ ಲಕ್ಷ ಮೌಲ್ಯದ ಉಚಿತ ಶಿಕ್ಷಣ ಪರಿಕರಗಳ ವಿತರಣೆ 
- ಶಾಲಾ ಕಾಲೇಜು

ಅದಾನಿ ಫೌಂಡೇಶನ್ ನಿಂದ ಜಿಲ್ಲೆಯ ೬,೭೩೦ ಶಾಲಾ ವಿದ್ಯಾರ್ಥಿಗಳಿಗೆ ಒಟ್ಟು ರೂ. ೪೦ ಲಕ್ಷ ಮೌಲ್ಯದ ಉಚಿತ ಶಿಕ್ಷಣ ಪರಿಕರಗಳ ವಿತರಣೆ 

Share: ಅದಾನಿ ಫೌಂಡೇಶನ್‌ನಿಂದ  ಜಿಲ್ಲೆಯ ೬,೭೩೦ ಶಾಲಾ ವಿದ್ಯಾರ್ಥಿಗಳಿಗೆ ಒಟ್ಟು ರೂ. ೪೦ ಲಕ್ಷ ಮೌಲ್ಯದ ಉಚಿತ ಶಿಕ್ಷಣ ಪರಿಕರಗಳ ವಿತರಣೆ.   ಉಡುಪಿ : ಎಲ್ಲೂರು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ತನ್ನ ಸಿಎಸ್‌ಆರ್ ಕಾರ್ಯಕ್ರಮಗಳನ್ನು ನಿರ್ವಹಿಸುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಷನ್ ಮುಖೇನ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ೭೮ ಸರ್ಕಾರಿ,  ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ೬,೭೩೦ ವಿದ್ಯಾರ್ಥಿಗಳಿಗೆ ಒಟ್ಟು ರೂ. ೪೦ ಲಕ್ಷ ಮೌಲ್ಯದ ಶಿಕ್ಷಣ […]

ಅದಾನಿ ಫೌಂಡೇಶನ್‌ನಿಂದ  ಜಿಲ್ಲೆಯ ೬,೭೩೦ ಶಾಲಾ ವಿದ್ಯಾರ್ಥಿಗಳಿಗೆ ಒಟ್ಟು ರೂ. ೪೦ ಲಕ್ಷ ಮೌಲ್ಯದ ಉಚಿತ ಶಿಕ್ಷಣ ಪರಿಕರಗಳ ವಿತರಣೆ. 

 ಉಡುಪಿ : ಎಲ್ಲೂರು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ತನ್ನ ಸಿಎಸ್‌ಆರ್ ಕಾರ್ಯಕ್ರಮಗಳನ್ನು ನಿರ್ವಹಿಸುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಷನ್ ಮುಖೇನ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ೭೮ ಸರ್ಕಾರಿ,  ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ೬,೭೩೦ ವಿದ್ಯಾರ್ಥಿಗಳಿಗೆ ಒಟ್ಟು ರೂ. ೪೦ ಲಕ್ಷ ಮೌಲ್ಯದ ಶಿಕ್ಷಣ ಪರಿಕರಗಳನ್ನು ೨೦೨೩-೨೪ ಶೈಕ್ಷಣಿಕ ಸಾಲಿನಲ್ಲಿ ವಿತರಿಸಿದೆ. 

 ಅದಾನಿ ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಆಳ್ವ ಅವರು ಶಾಲೆಗಳಿಗೆ ತೆರಳಿ ಸಾಂಕೇತಿಕವಾಗಿ ಪರಿಕರಗಳನ್ನು ವಿತರಿಸಿದರು.

 ವಿತರಿಸಿದ ಪರಿಕರಗಳಲ್ಲಿ ಆಯಾ ತರಗತಿಯ ವಿದ್ಯಾರ್ಥಿಗಳಿಗೆ ಅನುಗುಣವಾಗುವಂತೆ ನೋಟ್ ಪುಸ್ತಕಗಳು, ರೆಕಾರ್ಡ್ ಪುಸ್ತಕ, ಜಿಯೊಮೆಟ್ರಿ ಬಾಕ್ಸ್, ಬ್ಯಾಗ್‌ಗಳ ಜೊತೆಗೆ ಕೊಡೆಗಳು ಒಳಗೊಂಡಿವೆ. 

 ಪರಿಕರಗಳನ್ನು ವಿತರಿಸಿ ಮಾತನಾಡಿದ ಅದಾನಿ ಸಮೂಹದ ಅಧ್ಯಕ್ಷರಾದ ಕಿಶೋರ್ ಆಳ್ವ, ಯುಪಿಸಿಎಲ್ ಅದಾನಿ ಸಮೂಹಕ್ಕೆ ಸೇರಿ ೮ ವರ್ಷಗಳಾಗಿದ್ದು, ಸತತವಾಗಿ ೮ ವರ್ಷಗಳಿಂದ ಬೃಹತ್ ಪ್ರಮಾಣದಲ್ಲಿ ಸ್ಥಾವರದ ಆಸುಪಾಸಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಪರಿಕರಗಳನ್ನು ಒದಗಿಸುತ್ತಿದ್ದು, ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಸುಮಾರು ರೂ. ೪೦ ರಿಂದ ೫೦ ಲಕ್ಷದಷ್ಟು ಅನುದಾನವನ್ನು ಈ ಕಾರ್ಯಕ್ರಮಕ್ಕೆ ಅದಾನಿ ಫೌಂಡೇಶನ್ ಮೀಸಲಿಡುತ್ತಿದೆ ಎಂದು ತಿಳಿಸಿದರು.

 ವಿದ್ಯಾರ್ಥಿಗಳಿಗೆ ಪರಿಕರಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತ್ತಿದ್ದು, ಕೆಲ ವರ್ಷಗಳಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತಸ ತಂದಿದೆ ಎಂದು ಆಳ್ವ ಎಂದರು.

ಅದಾನಿ ಫೌಂಡೇಶನ್‌ನ ಸಿಎಸ್‌ಆರ್ ಯೋಜನೆಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸಲು ಸಂಸ್ಥೆಯು ಶ್ರಮಿಸುತ್ತಿದೆ ಎಂದು ಆಳ್ವ ಅವರು ಹೇಳಿದರು.  ಈ ಕ್ಷೇತ್ರದ ಸಿಎಸ್‌ಆರ್ ಯೋಜನೆಯಡಿ ಶಿಕ್ಷಣ ಪರಿಕರ ವಿತರಣೆ, ವಿದ್ಯಾರ್ಥಿವೇತನ ವಿತರಣೆ, ಹಣಕಾಸಿನ ಕೊರತೆ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಅನುದಾನ, ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲು ಲ್ಯಾಪ್ ಟಾಪ್ ಕಂಪ್ಯೂಟರ್ ವಿತರಣೆ, ಶಾಲೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುದಾನ, ಶೌಚಾಲಯ ನಿರ್ಮಾಣ ಇವೆಲ್ಲವೂ  ಒಳಗೊಂಡಿದೆ ಎಂದು ತಿಳಿಸಿದರು.

  ಪ್ರತಿ ವಾರ್ಷಿಕ ಸಾಲಿನ ಅದಾನಿ ಯುಪಿಸಿಎಲ್ ಸಿಎಸ್‌ಆರ್ ಅನುದಾನದಲ್ಲಿ ಶೇ. ೨೦% ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನಿಯೋಜಿಸುತ್ತಿದೆ ಎಂದು ಆಳ್ವ ಅವರು ಹೇಳಿದರು.

ಈ ಸಂದರ್ಭ ಎಜಿಎಂ ರವಿ ಜೀರೆ, ಸಿಬ್ಬಂದಿಗಳಾದ ಅನುದೀಪ್‌, ಧೀರಜ್‌ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.