ಅನನ್ಯ ಪೌಂಡೇಶನ್ ನಿಂದ ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ನಾಗರಾಜ್ ಭಟ್ ಉಪಸ್ಥಿತಿ
(Udupi – Bantakal) ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕವು ಗಣಕಯಂತ್ರ ವಿಭಾಗದ ಸಹಯೋಗದೊಂದಿಗೆ ಭವಿಷ್ಯವನ್ನು ಸಬಲೀಕರಣಗೊಳಿಸುವುದು ಇಂಜಿನಿಯರಿಂಗ್ನಲ್ಲಿ ವಿತರಿಸಿದ ದತ್ತಾಂಶ ಸಂಸ್ಕರಣೆಗಾಗಿ ́ಹಡೂಪ್ ಬಳಕೆ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ಈ ಉಪನ್ಯಾಸದಲ್ಲಿ ಟಾರ್ಗೆಟ್ ಸಂಸ್ಥೆಯ ಅನನ್ಯ ಅಂಬಾಸಿಡರ್ ಇಂಜಿನಿಯರ್ ಆಗಿರುವ ಶ್ರೀಮತಿ ಖುಷ್ಬೂ ಶರ್ಮಾರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಹಡೂಪ್ ಮೂಲಭೂತ ಅಂಶಗಳು ಹಾಗೂ ವಿತರಣಾತ್ಮಕ ದತ್ತಾಂಶ ಪ್ರೋಸೆಸಿಂಗ್ನಲ್ಲಿ ಅದರ ಪಾತ್ರ ಮತ್ತು ದೊಡ್ಡ ಪ್ರಮಾಣದ ದತ್ತಾಂಶವನ್ನು ನಿರ್ವಹಿಸುವಲ್ಲಿ ಅದರ ಮಹತ್ವವನ್ನು ವಿವರಿಸಿದರು.
ದತ್ತಾಂಶ ತಂತ್ರಜ್ಞಾನಗಳಲ್ಲಿ ಲಭ್ಯವಿರುವ ವೃತ್ತಿ ಅವಕಾಶಗಳ ಕುರಿತು ವಿವರಿಸಿ, ಕೈಗಾರಿಕಾ ಯೋಜನೆಗಳು, ಇಂಟರ್ನ್ ಶಿಪ್ ಗಳು ಮತ್ತು ನಿರಂತರ ಕೌಶಲ್ಯಾಭಿವೃದ್ಧಿಯ ಮೂಲಕ ಬಲವಾದ ತಾಂತ್ರಿಕ ನೆಲೆಯನ್ನು ನಿರ್ಮಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಈ ಕಾರ್ಯಕ್ರಮವನ್ನು ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ಮೇಘಾ ರಾಣಿಯವರು ಸಂಯೋಜಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ನಾಗರಾಜ್ ಭಟ್, ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

