ಶಿರ್ವ ವಿದ್ಯಾವರ್ಧಕ ವಿದ್ಯಾ ಸಂಸ್ಥೆಯಲ್ಲಿ ನಿಟ್ಟೆ ವಿನಯ್ ಹೆಗ್ಡೆಯವರಿಗೆ ಶ್ರದ್ಧಾಂಜಲಿ
ಶ್ರದ್ದಾಂಜಲಿ ಸಮರ್ಪಿಸಿದ ಸಂಘದ ಅಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ
(Shirva) ಶಿರ್ವ : ಖ್ಯಾತ ಶಿಕ್ಷಣ ತಜ್ಞ, ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ನಿಟ್ಟೆ ವಿನಯ್ ಹೆಗ್ಡೆಯವರು ಇಂದು ಬೆಳಿಗ್ಗೆ ನಿಧನರಾಗಿದ್ದು, ಅವರಿಗೆ ಶಿರ್ವ ವಿದ್ಯಾವರ್ಧಕ ಸಂಘ ಸಂಚಾಲಿತ ಶಿಕ್ಷಣ ಸಂಸ್ಥೆಯಲ್ಲಿ ಇಲ್ಲಿ ನಡೆದ ಶೃದ್ಧಾಂಜಲಿ ಕಾಪು ಶಾಸಕರು, ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭ ವಿದ್ಯಾವರ್ಧಕ ಸಂಸ್ಥೆಯ ಸಂಚಾಲಕ ಮಟ್ಟಾರು ರತ್ನಾಕರ್ ಹೆಗ್ಡೆ, ಸದಸ್ಯರುಗಳಾದ ನಿತ್ಯಾನಂದ ಹೆಗ್ಡೆ, ಜಗದೀಶ್ ಅರಸ್, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಆಡಳಿತಾಧಿಕಾರಿ ವೈ ಭಾಸ್ಕರ್ ಶೆಟ್ಟಿ, ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

