• Home  
  • ಅ. 24ರಂದು ಬೆಹರೆನ್​ನಲ್ಲಿ ತನುಶ್ರೀ ದಾಖಲೆಯ ಯೋಗ ಸಾಧನೆಗೆ ಸಜ್ಜು (Tanushree sets new yoga record in Bahrain on Oct. 24)
- ದೇಶ-ವಿದೇಶ - ಸನ್ಮಾನ, ಅಭಿನಂದನೆ - ಸ್ಪರ್ಧೆ

ಅ. 24ರಂದು ಬೆಹರೆನ್​ನಲ್ಲಿ ತನುಶ್ರೀ ದಾಖಲೆಯ ಯೋಗ ಸಾಧನೆಗೆ ಸಜ್ಜು (Tanushree sets new yoga record in Bahrain on Oct. 24)

Share: ಅ. 24ರಂದು ಬೆಹರೆನ್​ನಲ್ಲಿ ತನುಶ್ರೀ ದಾಖಲೆಯ ಯೋಗ ಸಾಧನೆಗೆ ಸಜ್ಜು      ಈಗಾಗಲೇ 2023ರಲ್ಲಿ 45 ನಿಮಿಷದಲ್ಲಿ 245 ಯೋಗಾಸನ ಪ್ರದರ್ಶನದ ಸಾಧನೆ (Udupi) ಉಡುಪಿ: ಸೈಂಟ್​ ಸಿಸಿಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಅ. 24ರಂದು ಬೆಹರೆನ್​ ಕನ್ನಡ ಸಂಘದಲ್ಲಿ 1 ಗಂಟೆಯಲ್ಲಿ 300 ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಗೋಲ್ಡನ್​ ಬುಕ್​ ಆಫ್  ರೆಕಾರ್ಡ್​ ಸಾಧನೆ ಮಾಡಲಿದ್ದಾರೆ ಎಂದು ತಂದೆ ಉದಯ್​ಕುಮಾರ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.    ಈಗಾಗಲೇ 2023ರಲ್ಲಿ 45 ನಿಮಿಷದಲ್ಲಿ 245 […]

(Udupi) ಉಡುಪಿ: ಸೈಂಟ್​ ಸಿಸಿಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಅ. 24ರಂದು ಬೆಹರೆನ್​ ಕನ್ನಡ ಸಂಘದಲ್ಲಿ 1 ಗಂಟೆಯಲ್ಲಿ 300 ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಗೋಲ್ಡನ್​ ಬುಕ್​ ಆಫ್  ರೆಕಾರ್ಡ್​ ಸಾಧನೆ ಮಾಡಲಿದ್ದಾರೆ ಎಂದು ತಂದೆ ಉದಯ್​ಕುಮಾರ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

   ಈಗಾಗಲೇ 2023ರಲ್ಲಿ 45 ನಿಮಿಷದಲ್ಲಿ 245 ಯೋಗಾಸನ ಪ್ರದರ್ಶನ ಮೂಲಕ ಗೋಲ್ಡನ್​ ಬುಕ್​ ಆಫ್ ರೆಕಾರ್ಡ್​ನಲ್ಲಿ ಹೆಸರು ದಾಖಲಿಸಿದ್ದಾರೆ. ಈಗ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಲು ಅಣಿಯಾಗಿದ್ದು, ವಿದೇಶದಲ್ಲಿ ಮೊದಲ ಸಾಧನೆ ಮಾಡಲಿದ್ದಾರೆ.

     ಯೋಗಾಸನ ಪ್ರದರ್ಶನದಲ್ಲಿ ಭಾರತೀಯ ರಾಯಭಾರಿ ವಿನೋದ್​ ಚಾಕೋಬ್​ ಭಾಗವಹಿಸಲಿದ್ದಾರೆ. 

     ಕರಾವಳಿಯ ಹಲವಾರು ಪ್ರತಿಭೆಗಳನ್ನು ನಮ್ಮಲ್ಲಿಗೆ ಕರೆಸಿ ಅವರೆಲ್ಲರಿಗೂ ಗೌರವ ಸಲ್ಲಿಸಿದ್ದೇವೆ ಎಂದು ಬೆಹರೆನ್ ಕನ್ನಡ ಸಂಘದ  ಅಧ್ಯಕ್ಷ ಅಜಿತ್​ ಬಂಗೇರ   ತಿಳಿಸಿದರು.

     ಕುರ್ಕಾಲು ಗ್ರಾಪಂ ಸದಸ್ಯ ಪ್ರವಿಣ್​ ಕುಮಾರ್​ ಕುರ್ಕಾಲ್, ತನುಶ್ರೀ ಪಿತ್ರೋಡಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.