• Home  
  • ಅ. 25 (ಶನಿವಾರ) : ಬೆಂಗಳೂರಿನ ಚೌಡಯ್ಯ ಭವನದಲ್ಲಿ ರಾಧಾ ರಂಗಾರೋಹಣ (Oct. 25 (Saturday): Radha Rangarohana at Chowdayya Bhavan, Bengaluru)
- ಮನೋರಂಜನೆ

ಅ. 25 (ಶನಿವಾರ) : ಬೆಂಗಳೂರಿನ ಚೌಡಯ್ಯ ಭವನದಲ್ಲಿ ರಾಧಾ ರಂಗಾರೋಹಣ (Oct. 25 (Saturday): Radha Rangarohana at Chowdayya Bhavan, Bengaluru)

Share:  ಅ. 25 (ಶನಿವಾರ) : ಬೆಂಗಳೂರಿನ ಚೌಡಯ್ಯ ಭವನದಲ್ಲಿ ರಾಧಾ ರಂಗಾರೋಹಣ  ಖ್ಯಾತ ಭರತನಾಟ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ರಾಧಾ ಶ್ರೀವತ್ಸ (Bengaluru) ಬೆಂಗಳೂರು: ನಾಡಿನ ಪ್ರಖ್ಯಾತ ಭರತನಾಟ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ರಾಧಾ ಶ್ರೀವತ್ಸ ಅವರ ರಂಗ ಪ್ರವೇಶ ಕಾರ್ಯಕ್ರಮ  ಅ.  25 (ಶನಿವಾರ) ರಾಜಧಾನಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನೆರವೇರಲಿದೆ.     ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದೆ ಕಲಾಮಂಡಲಮ್ ಉಷಾ ದಾತಾರ್, ಚಿತ್ರನಟಿ […]

(Bengaluru) ಬೆಂಗಳೂರು: ನಾಡಿನ ಪ್ರಖ್ಯಾತ ಭರತನಾಟ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ರಾಧಾ ಶ್ರೀವತ್ಸ ಅವರ ರಂಗ ಪ್ರವೇಶ ಕಾರ್ಯಕ್ರಮ  ಅ.  25 (ಶನಿವಾರ) ರಾಜಧಾನಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನೆರವೇರಲಿದೆ.

    ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದೆ ಕಲಾಮಂಡಲಮ್ ಉಷಾ ದಾತಾರ್, ಚಿತ್ರನಟಿ ಮಾಳವಿಕಾ ಅವಿನಾಶ್, ನಟ ನೆ.ಲ. ನರೇಂದ್ರ ಬಾಬು ಆಗಮಿಸಲಿದ್ದಾರೆ.

   ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್, ಪಾಲಕರಾದ ಶ್ರೀವತ್ಸ ಮತ್ತು ಕವಿತಾ ಹಾಜರಿರಲಿದ್ದಾರೆ.

ನಟವಾಂಗದಲ್ಲಿ ಗುರು ಸುಪರ್ಣಾ, ಗಾಯನದಲ್ಲಿ ರೋಹಿತ್ ಭಟ್, ಮೃದಂಗದಲ್ಲಿ ಗುರುಮೂರ್ತಿ,  ಕೊಳಲಿನಲ್ಲಿ ನಿತೀಶ್ ಅಮ್ಮಣ್ಣಾಯ, ವೀಣೆಯಲ್ಲಿ ಗೋಪಾಲ್ ಮತ್ತು ರಿದಂ ಪ್ಯಾಡ್ ನಲ್ಲಿ ಪವನ್  ದತ್ತ ಹಿಮ್ಮೇಳ ಸಹಕಾರ ನೀಡಲಿದ್ದಾರೆ.

ಕಲಾವಿದೆಯ ಪರಿಚಯ:

ದ್ವಿತೀಯ ಪಿಯು ಅಧ್ಯಯನ ಮಾಡುತ್ತಿರುವ ರಾಧಾ, ಈಗಾಗಲೇ ಸಾಯಿ ಆರ್ಟ್ಸ್ ಸಂಸ್ಥೆಯ ಹತ್ತು, ಹಲವು ಕಾರ್ಯಕ್ರಮದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿದ ಯುವ ಕಲಾವಿದೆ.

   ಶ್ರೀವತ್ಸ ಮತ್ತು ಕವಿತಾ ಅವರ ಪುತ್ರಿಯಾದ ಈಕೆ ನರ್ತನದಲ್ಲಿ ನವ ನವೀನ ತಂತ್ರಗಳನ್ನು ಕಲಿಯುವಲ್ಲಿ ಅದಮ್ಯ ಆಸಕ್ತಿ. ಹಾಗಾಗಿ ಮುದ್ರಾ, ತಾಳ, ಲಯ ಮತ್ತು ಅಭಿನಯಕ್ಕೆ ಈಕೆಯ ಪ್ರಧಾನ ಆಧ್ಯತೆ ಇದೆ. ವಿದುಷಿ ಹರ್ಷಿತಾ ವಿದ್ಯಾ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿರುವುದು ಈಕೆಯ ಇನ್ನೊಂದು ಹೆಗ್ಗಳಿಕೆ.

ವೇದಿಕೆ ಕಲಾವಿದೆಯಾಗಬೇಕು:

ನೃತ್ಯದಲ್ಲಿ ವಿದ್ವತ್ ಮಾಡುವುದರೊಂದಿಗೆ ಬಿಇ. ವ್ಯಾಸಂಗ ಮಾಡಬೇಕು. ಜೀವನಕ್ಕೆ ಭದ್ರವಾದ ಒಂದು ವೃತ್ತಿ ಬೇಕು. ನೃತ್ಯ ಹವ್ಯಾಸವಾಗಿ ಇಟ್ಟುಕೊಳ್ಳುತ್ತೇನೆ. ನಾನು ಉತ್ತಮವಾದ ‘ವೇದಿಕೆ ಕಲಾವಿದೆʼಆಗಬೇಕು ಎಂಬ ಕನಸು ಇದೆ ಎನ್ನುವುದು ರಾಧಾಳ ಅಭಿಪ್ರಾಯ.

    ಅವಳ ಹಂಬಲಕ್ಕೆ ಇಡೀ ಕುಟುಂಬದ ಬೆಂಬಲವಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.