ಮುಂಡ್ಕೂರು- ಮುಲ್ಲಡ್ಕ ಶೆಣೈ ಪದವು ರಸ್ತೆಗೆ ಗುದ್ದಲಿ ಪೂಜೆ
ಗುದ್ದಲಿ ಪೂಜೆ ನೆರವೇರಿಸಿದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್
(Mudkuru) ಮುಂಡ್ಕೂರು : ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾನಗರ ಶೆಣೈ ಪದವು ಕಜೆ ಮಾರಿಗುಡಿ ಸಚ್ಚೇರಿಪೇಟೆ ಜಿಲ್ಲಾ ಪಂಚಾಯತ್ ಕೂಡು ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ 1 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಕಾರ್ಕಳ ಶಾಸಕ ವಿ. ಸುನಿಲ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ಪ ಸಪಳಿಗ, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಕಾರ್ಕಳ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಬೋಳ ಕಜೆ ಮಹಾಮ್ಮಾಯಿ ದೇವಸ್ಥಾನದ ಗೌರವಧ್ಯಕ್ಷರಾದ ಎಂ.ಜಿ ಕರ್ಕೇರಾ, ಮುಂಡ್ಜೂರು ಬಿಜೆಪಿ ಸ್ಥಾನಿಯ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಸಂದೀಪ್ ಶೆಟ್ಟಿ, ಲೋಕೇಶ್ ಪೂಜಾರಿ, ಬಿಜೆಪಿ ಪ್ರಮುಖರಾದ ರವೀಂದ್ರ ಶೆಟ್ಟಿ, ಮುಲ್ಲಡ್ಕ ಪರಾರಿ, ಸೋಮನಾಥ ಪೂಜಾರಿ, ಇಲಾಖಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಪ್ರಬಂಧಕ ಅರುಣ್ ರಾವ್ ಕಾರ್ಯಕ್ರಮ ನಿರೂಪಿಸಿದರು.

