ಮೂಲ್ಕಿ : ಬೆಥನಿ ಆಂಗ್ಲ ಮಾಧ್ಯಮ ಶಾಲೆ ಕಿಲ್ಪಾಡಿಯಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ
ಮೂಲ್ಕಿ : ಬದುಕಿನಲ್ಲಿ ಸಂಸ್ಕಾರಯುತ ಮೌಲ್ಯಗಳನ್ನು ಮೈಗೂಡಿಸಿಕೊಂಡು. ಪೋಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿ ಅವರನ್ನು ಯೋಗ್ಯ ವ್ಯಕ್ತಿಗಳನ್ನಾಗಿಸಬೇಕು ಎಂದು ಮೂಲ್ಕಿ ಯ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಕಿಲ್ಪಾಡಿಯಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ ಶಿಕ್ಷಕ ರಕ್ಷಕ ಸಂಘದ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿರುವ ಭಾರತಿ ಜಿ. ರಾವ್. ಅವರು ಮಾತನಾಡಿದರು.
ದಿನಾಂಕ 02 07.2024 ರಂದು ಬೆಥನಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕರಕ್ಷಕ ಸಂಘದ ಸಭೆಯಲ್ಲಿ ಮಕ್ಕಳ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಎಷ್ಟು ಮುಖ್ಯ ಎಂಬುದರ ವಿಷಯದ ಕುರಿತು ಅವರು ಮಾತನಾಡಿದರು. ಪ್ರತಿ ಮಗು ತನ್ನ ಭಾವನೆಗಳನ್ನು ಹೆತ್ತವರೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ ಆದ್ದರಿಂದ ಪೋಷಕರು ಮಕ್ಕಳೊಂದಿಗೆ ಕಾಲ ಕಳೆಯಲು ಸಮಯ ಮೀಸಲಿಟ್ಟರೆ, ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ತಪ್ಪಿಸಬಹುದು ಎಂದರು. ಸಭೆಯ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕಿ ವಂದನೆಯ ಡಾ. ಸಿಸ್ಟರ್ ಮಾರಿಯೋಲ್ ಮಾತನಾಡಿ ಮಕ್ಕಳನ್ನು ನಾವು ಯಾವಾಗಲೂ ಪ್ರೀತಿಯಿಂದ ನೋಡಿಕೊಳ್ಳಬೇಕು ಆತ್ಮಸ್ಥೈರ್ಯವನ್ನು ಪೋಷಕರು ತುಂಬಬೇಕು ಎಂದರು. ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷರು ಮಾತನಾಡಿ ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಳ್ಳುವುದೇ ಶಿಕ್ಷಕ ರಕ್ಷಕ ಸಂಘದ ಉದ್ದೇಶ ಎಂದರು.
ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರು , ಮೆಡ್ಲಿನ್ ಕಾನ್ವೆಂಟಿನ ಮೇಲ್ವಿಚಾರಕರಾಗಿರುವ
ವ0ದನೆಯ ಭಗಿನಿ ಮೀನಾ ರವರು ನೂತನವಾಗಿ ಆಯ್ಕೆಯಾಗಿರುವ ಉಪಾಧ್ಯಕ್ಷರು, ಪದಾಧಿಕಾರಿಗಳು. ಮತ್ತಿತರರು ಉಪಸ್ಥಿತರಿದ್ದರು.
ಅತಿಥಿ ದೇವೋಭವ ಎಂಬಂತೆ ಬಂದವರೆಲ್ಲರನ್ನು ಸವಿತಾ ಪಿಯವರು ಸ್ವಾಗತಿಸಿದರು. ರಾಧಿಕಾ ವಂದಿಸಿದರು. ದಯವತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

