• Home  
  • ಆನಂದತೀರ್ಥದಲ್ಲಿ ಸೆ. 20 ರಿಂದ 23ರವರೆಗೆ ರಾಜ್ಯಮಟ್ಟದ ಕಬ್-ಬುಲ್ ಬುಲ್ ಉತ್ಸವ – 2025 (State-level Kab-Bul Bull Festival at Anandatirtha from Sept. 20 to 23 – 2025)
- ಶಾಲಾ ಕಾಲೇಜು - ಸನ್ಮಾನ, ಅಭಿನಂದನೆ - ಸ್ಪರ್ಧೆ

ಆನಂದತೀರ್ಥದಲ್ಲಿ ಸೆ. 20 ರಿಂದ 23ರವರೆಗೆ ರಾಜ್ಯಮಟ್ಟದ ಕಬ್-ಬುಲ್ ಬುಲ್ ಉತ್ಸವ – 2025 (State-level Kab-Bul Bull Festival at Anandatirtha from Sept. 20 to 23 – 2025)

Share: ಆನಂದತೀರ್ಥದಲ್ಲಿ ಸೆ. 20 ರಿಂದ 23ರವರೆಗೆ ರಾಜ್ಯಮಟ್ಟದ ಕಬ್–ಬುಲ್ ಬುಲ್ ಉತ್ಸವ – 2025 ಪಾಜಕ ಕುಂಜಾರುಗಿರಿಯ ಆನಂದತೀರ್ಥ ವಿದ್ಯಾಲಯ (Udupi) ಉಡುಪಿ : ಪಾಜಕ ಕುಂಜಾರುಗಿರಿಯ ಆನಂದತೀರ್ಥ ವಿದ್ಯಾಲಯದಲ್ಲಿ ರಾಜ್ಯಮಟ್ಟದ ಕಬ್-ಬುಲ್ ಬುಲ್ ಉತ್ಸವವು ಸೆ. 20 ರಿಂದ 23ರವರೆಗೆ ನಡೆಯಲಿದೆ.     ರಾಜ್ಯದ ವಿವಿಧ ಜಿಲ್ಲೆಗಳಿಂದ 750 ಕ್ಕೂ ಹೆಚ್ಚು ಮಕ್ಕಳು ಹಾಗೂ ಸುಮಾರು 250 ಶಿಕ್ಷಕರು, ಸಿಬ್ಬಂದಿ ಹಾಗೂ ಫ್ಲಾಕ್ ಮಾಸ್ಟರ್‌ಗಳು ಭಾಗವಹಿಸಲಿದ್ದಾರೆ.     ಈ ಉತ್ಸವವು ಕೇವಲ ಮಕ್ಕಳ ಕೌಶಲ್ಯ […]

(Udupi) ಉಡುಪಿ : ಪಾಜಕ ಕುಂಜಾರುಗಿರಿಯ ಆನಂದತೀರ್ಥ ವಿದ್ಯಾಲಯದಲ್ಲಿ ರಾಜ್ಯಮಟ್ಟದ ಕಬ್-ಬುಲ್ ಬುಲ್ ಉತ್ಸವವು ಸೆ. 20 ರಿಂದ 23ರವರೆಗೆ ನಡೆಯಲಿದೆ.

    ರಾಜ್ಯದ ವಿವಿಧ ಜಿಲ್ಲೆಗಳಿಂದ 750 ಕ್ಕೂ ಹೆಚ್ಚು ಮಕ್ಕಳು ಹಾಗೂ ಸುಮಾರು 250 ಶಿಕ್ಷಕರು, ಸಿಬ್ಬಂದಿ ಹಾಗೂ ಫ್ಲಾಕ್ ಮಾಸ್ಟರ್‌ಗಳು ಭಾಗವಹಿಸಲಿದ್ದಾರೆ.

    ಈ ಉತ್ಸವವು ಕೇವಲ ಮಕ್ಕಳ ಕೌಶಲ್ಯ ಪ್ರದರ್ಶನಕ್ಕೆ ಸೀಮಿತವಲ್ಲ. ಬದಲಿಗೆ ನಮ್ಮ ಕರಾವಳಿ ಸಂಸ್ಕೃತಿ, ಸ್ಥಳೀಯ ಪಾಕಕಲೆ, ಕಲಾ-ಕೈಗಾರಿಕೆ, ಹೊರಾಂಗಣ ಜೀವನ ಶೈಲಿ ಇವುಗಳನ್ನು ಮಕ್ಕಳಿಗೆ ಪರಿಚಯಿಸುವ ವಿಶೇಷ ಪ್ರಯತ್ನವಾಗಿದೆ. ಜೊತೆಗೆ ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅವರಲ್ಲಿ ಸಾಂಸ್ಕೃತಿಕ ಅರಿವು ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವನ್ನು ಬೆಳೆಸುವುದು ಮುಖ್ಯ ಉದ್ದೇಶವಾಗಿದೆ.

     ರಾಜ್ಯ ಮಟ್ಟದ ಈ ಉತ್ಸವವು ಮಕ್ಕಳಲ್ಲಿ ತಂಡ ಭಾವನೆ, ಸೇವಾ ಮನೋಭಾವ, ಸಾಹಸಪ್ರಿಯತೆ ಹಾಗೂ ಸಂಸ್ಕೃತಿ ಅರಿವು ಬೆಳೆಸುವ ಸುವರ್ಣಾವಕಾಶವಾಗಲಿದೆ. ಕರ್ನಾಟಕದ ವಿವಿಧೆಡೆಯಿಂದ ಬರುವ ಕಬ್ – ಬುಲ್ ಬುಲ್ ಮಕ್ಕಳು ಒಂದೇ ವೇದಿಕೆಯಲ್ಲಿ ಸೇರುವುದರಿಂದ “ಏಕತೆಯಲ್ಲಿ ವೈವಿಧ್ಯತೆ” ಎಂಬ ಸಂದೇಶವನ್ನು ಬಲಪಡಿಸುವುದು ಇದರ ವಿಶೇಷತೆ.

     ಆನಂದತೀರ್ಥ ವಿದ್ಯಾಲಯವು ತನ್ನ ಆತಿಥ್ಯ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಮೂಲಕ ಈ ಮಹೋತ್ಸವವನ್ನು ಸ್ಮರಣೀಯಗೊಳಿಸಲು ಸಜ್ಜಾಗಿದೆ ಎಂದು ಆನಂದ ತೀರ್ಥ ವಿದ್ಯಾಲಯದ ಪ್ರಾಂಶುಪಾಲೆ ಗೀತಾ ಶಶಿಧರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.