• Home  
  • ಆನಂದ್ ಸಿ ಕುಂದರ್ ಕನಸಿನ ಕೃಷಿ ಕಾಯಕದಲ್ಲಿ ಮಿಂದೆದ್ದ ವಿದ್ಯಾರ್ಥಿ ಸಮುದಾಯ
- ಪ್ರಚಲಿತ - ಶಾಲಾ ಕಾಲೇಜು

ಆನಂದ್ ಸಿ ಕುಂದರ್ ಕನಸಿನ ಕೃಷಿ ಕಾಯಕದಲ್ಲಿ ಮಿಂದೆದ್ದ ವಿದ್ಯಾರ್ಥಿ ಸಮುದಾಯ

Share: ಗೀತಾನಂದ ಫೌಂಡೇಶನ್‌ನಿಂದ  ಸಂಭ್ರಮದ ಸಾಗುವಳಿ ಎಂಬ ವಿನೂತ ಕಾರ್ಯಕ್ರಮ ಆಯೋಜನೆ ಕೋಟ: ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಕನಸಿನ ಯೋಜನೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಕಾಯಕ ನಿರ್ವಹಿಸುವ ಸಂಭ್ರಮದ ಸಾಗುವಳಿ ಎಂಬ ಶೀರ್ಷಿಕೆಯಡಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಹೊಸ ಆಯಾಮ ತುಂಬಿತು. ಮಂಗಳವಾರ ಕೋಟತಟ್ಟು ಪಡುಕರೆ ಪರಿಸರದ ಕೃಷಿ ಭೂಮಿಯಲ್ಲಿ ಉಡುಪಿ ಕೃಷಿ ಇಲಾಖೆಯ ಸಂಯೋಜನೆಯೊಂದಿಗೆ   ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ನಾಟಿಗೈಯುವ ಹೊಸ ತಲೆಮಾರಿಗೆ ಪರಿಚಯಿಸಿತು.  ಉಡುಪಿ ಜಿಲ್ಲಾ […]

ಗೀತಾನಂದ ಫೌಂಡೇಶನ್‌ನಿಂದ  ಸಂಭ್ರಮದ ಸಾಗುವಳಿ ಎಂಬ ವಿನೂತ ಕಾರ್ಯಕ್ರಮ ಆಯೋಜನೆ

ಕೋಟ: ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಕನಸಿನ ಯೋಜನೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಕಾಯಕ ನಿರ್ವಹಿಸುವ ಸಂಭ್ರಮದ ಸಾಗುವಳಿ ಎಂಬ ಶೀರ್ಷಿಕೆಯಡಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಹೊಸ ಆಯಾಮ ತುಂಬಿತು.

ಮಂಗಳವಾರ ಕೋಟತಟ್ಟು ಪಡುಕರೆ ಪರಿಸರದ ಕೃಷಿ ಭೂಮಿಯಲ್ಲಿ ಉಡುಪಿ ಕೃಷಿ ಇಲಾಖೆಯ ಸಂಯೋಜನೆಯೊಂದಿಗೆ   ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ನಾಟಿಗೈಯುವ ಹೊಸ ತಲೆಮಾರಿಗೆ ಪರಿಚಯಿಸಿತು.

 ಉಡುಪಿ ಜಿಲ್ಲಾ ಕೃಷಿ ಇಲಾಖೆಯ  ಸಹಾಯಕ ಅಧಿಕಾರಿ ಮೋಹನ್ ರಾಜ್ ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಮಾನಗಳಲ್ಲಿ ಕೃಷಿಯ ಅವಶ್ಯಕತೆ , ಕೃಷಿ ನಿರ್ಲಕ್ಷ್ಯದಿಂದ ಮುಂದಿನ ದಿನಗಳಲ್ಲಿ ಎದುರಾಗುವ ಪರಿಣಾಮಗಳು, ನಾಟಿಗೈಯುವ ವಿಧಾನ, ಸಂಪ್ರದಾಯಕ ನಾಟಿ ಕ್ರಮಗಳ ಕುರಿತು ಮಾಹಿತಿ ನೀಡಿದರು.

 ಉತ್ಸಾಹದಿಂದಲೇ ಗದ್ದೆಗಿಳಿದ ವಿದ್ಯಾರ್ಥಿಗಳು

ಪ್ರಸ್ತುತ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಎದುರಾಗುತ್ತಿರುವ ಸಮಸ್ಯೆಗಳ ನಡುವೆ ಯುವ ಸಮುದಾಯಕ್ಕೆ ಕೃಷಿಯ ಕುರಿತು ಆಸಕ್ತಿ ಹೆಚ್ಚಿಸುವ ಚಿಂತನೆಯೊಂದಿಗೆ   ಆನಂದ್ ಸಿ ಕುಂದರ್ ತಮ್ಮ ಪ್ರೋತ್ಸಾಹದಿಂದ ನಡೆಸಲ್ಪಡುವ  ಮಣೂರು ಪಡುಕರೆ ಸರಕಾರಿ ಶಿಕ್ಷಣ ಸಂಸ್ಥೆಯ ಅದರಲ್ಲೂ ಅಲ್ಲಿ ಕಳೆದ ವರ್ಷ ಆರಂಭಗೊಂಡ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ  ಈ ಕಾರ್ಯಕ್ರಮ ರೂಪಿಸಿದರು.

 ವಿದ್ಯಾರ್ಥಿಗಳು ಆಸಕ್ತಿಯಿಂದ ಕೃಷಿ(ಗದ್ದೆ)ಭೂಮಿಗೆ ದುಮುಕಿ ನಾಟಿ ಗೈಯಲು ಆರಂಭಿದರು.

ಸಾಂಪ್ರದಾಯಿಕ ಕೃಷಿಗೆ ಒತ್ತು ನೀಡುವ ಉದ್ದೇಶದಿಂದ ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಒಳಲ್ (ಕೂಗು) ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ತಲೆಗೆ ಧರಿಸಲು ಹಾಳೆ ನೀಡಿತು.

ಮೊದಲನಾಟಿಗೆ (ಗಣಪತಿ ನೆಟ್ಟಿ) ಅವರೆ ಬೇಸಿದರು!

ಸಾಮಾನ್ಯವಾಗಿ ಮೊದಲ ನಾಟಿಗೆ ಪ್ರತಿಯೊರ್ವ ರೈತ ಸಮುದಾಯದ ಮನೆಯಲ್ಲಿ ಹೆಸರು, ಅವರೆ ಹೀಗೆ ಇತರ ಧಾನ್ಯಗಳನ್ನು ಬೇಯಿಸಿ ನಾಟಿ ಗೈಯುವರಿಗೆ ನೀಡುತ್ತಿದ್ದರು. ಇದಕ್ಕೆ ಗಣಪತಿ ನಾಟಿ ಎಂದು ಕರೆಯುತ್ತಾರೆ. ಅದೇ ಮಾದರಿಯಲ್ಲಿ ಅವರೆ ಬೇಯಿಸಿ ವಿದ್ಯಾರ್ಥಿಗಳಿಗೆ, ಬಂದ ಅತಿಥಿಗಳಿಗೆ ಗೀತಾನಂದ ಫೌಂಡೇಶನ್ ವ್ಯವಸ್ಥೆ ಕಲ್ಪಿಸಿತು.

 ಉಪಸ್ಥಿತಿ

ಹೀಗೊಂದು ಕಾರ್ಯಕ್ರಮದಲ್ಲಿ  ಗೀತಾನಂದ ಫೌಂಡೇಶನ್ ನಿರ್ದೇಶಕರಾದ ಗೀತಾ ಆನಂದ್ ಸಿ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಜನತಾ ಸಂಸ್ಥೆಯ ಮ್ಯಾನೇಜರ್ ಶ್ರೀನಿವಾಸ್ ಕುಂದರ್, ಕೋಟ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಪ್ರಭಾ, ಮಣೂರು ಪಡುಕರೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಾ, ಉಪನ್ಯಾಸಕ ಸತ್ಯನಾರಾಯಣ ಆಚಾರ್, ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್  ಕಾಂಚನ್ ಕೋಟ, ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವೃಂದ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.