ಇಂದು ಮಂಗಳೂರಿನಲ್ಲಿ ಮೋದಿ ರೋಡ್ ಶೋ : ಪೊಲೀಸರ ಸರ್ಪಗಾವಲು
(ಮಂಗಳೂರು) ಮಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು (ಭಾನುವಾರ) ಮಂಗಳೂರಿನಲ್ಲಿ ವಿಜಯ ಸಂಕಲ್ಪ ರೋಡ್ ಶೋ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಎಡಿಜಿಪಿ, ಐಜಿಪಿ, 6 ಎಸ್ಪಿ, 2 ಡಿಸಿಪಿ, 10 ಡಿವೈಎಸ್ಪಿ, 6 ಎಸಿಪಿ, 55 ಇನ್ಸ್ಪೆಕ್ಟರ್, 120 ಪಿಎಸ್ಐ, 147 ಎಎಸ್ಐ, 1400 ಹೆಡ್ ಕನ್ಸಟೇಬಲ್, 92 ಗೃಹರಕ್ಷಕರು, 15 ಕೆಎಸ್ಆರ್ಪಿ ತುಕಡಿ, 2 ಸಿಆರ್ಪಿಎಫ್ ತುಕಡಿ, 4 ಎಎಸ್ಸಿ ತಂಡ, 1 ಬಿಡಿಡಿಎಸ್ ತಂಡ, 30 ಡಿಎಫ್ಎಂಡಿ, 34 ಸೆಕ್ಟರ್ ಮೋಬೈಲ್, ರೋಡ್ ಶೋ ನಡೆಯುವ ರಸ್ತೆಯುದ್ದಕ್ಕೂ 25ಕ್ಕೂ ಅಧಿಕ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ.
ಮೋದಿ ಅವರು 7.30ಕ್ಕೆ ಲೇಡಿ ಹಿಲ್ನ ನಾರಾಯಣ ಗುರು ವೃತ್ತ ಸಮೀಪ ಆಗಮಿಸಲಿದ್ದಾರೆ. ಇದಾದ ಬಳಿಕ ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಕಾರ್ಯಕ್ರಮ ಆರಂಭವಾಗಲಿದೆ.
ಕರಾವಳಿ ಮೈದಾನ ಮುಂಭಾಗ, ಎಂ.ಜಿ.ರಸ್ತೆ, ಲಾಲ್ ಭಾಗ್, ಬಲ್ಲಾಳ್ ಬಾಗ್, ಬೆಸೆಂಟ್, ಲಾಲ್ಬಾಗ್ – ಕೊಡಿಯಾಲ್ ಗುತ್ತು – ಬಿ.ಜಿ ಸ್ಕೂಲ್ ಜಂಕ್ಷನ್ – ಪಿ.ವಿ.ಎಸ್ – ನವಭಾರತ ವೃತ್ತ – ಹಂಪನಕಟ್ಟೆ ವರೆಗೆ ರೋಡ್ ಶೋ ಮುಂದುವರಿಯಲಿದೆ.
ಸಾರ್ವಜನಿಕರು ಸಂಜೆ ನಿಗದಿತ ಸಮಯಕ್ಕೆ 1 ಗಂಟೆ ಮುಂಚಿತವಾಗಿ ಸಂಬಂಧಪಟ್ಟ ರಸ್ತೆಯಲ್ಲಿ ಬಂದು ನಿಂತು ರೋಡ್ ಶೋ ವೀಕ್ಷಣೆ ಮಾಡಬಹುದಾಗಿದೆ. 8.45ಕ್ಕೆ ರೋಡ್ ಶೋ ಸಮಾಪನಗೊಳ್ಳಲಿದೆ.
ರೋಡ್ ಶೋ ಕಾರ್ಯಕ್ರಮದ ಅಂಗವಾಗಿ ಶನಿವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಜೇಶ್ವರ ಗೋವಿಂದ ಪೈ ರಸ್ತೆವರೆಗೆ ಝರೋ ಟ್ರಾಫಿಕ್ನಲ್ಲಿ ರಿಹರ್ಸಲ್ ನಡೆಯಿತು. ಸಾಲು ಸಾಲು ಬೆಂಗಾವಲು ಪಡೆ ವಾಹನಗಳು ಸಾಗಿದ ಬಳಿಕ ಮೋದಿ ಅವರು ಚಲಿಸುವ ವಾಹನದ ಮಾದರಿಯ ತೆರೆದ ವಾಹನ ಚಲಿಸಿತು. ಇದರ ಹಿಂದೆ ಹತ್ತಾರು ಭದ್ರತಾ ವಾಹನಗಳು, ಆಂಬ್ಯುಲೆನ್ಸ್ಗಳು ಚಲಿಸಿದವು.
ಶನಿವಾರ ರಾತ್ರಿ 8ಗಂಟೆ ವೇಳೆಗೆ ಎಂ.ಜಿ. ರಸ್ತೆಯಲ್ಲಿ ಝಿರೋ ಟ್ರಾಫಿಕ್ ಗೊಳಿಸಿ ರಿಹರ್ಸಲ್ ನಡೆಸುತ್ತಿದ್ದಂತೆ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸಿ ಆಸಕ್ತಿಯಿಂದ ವೀಕ್ಷಣೆ ಮಾಡುತ್ತಿರುವುದು ಕಂಡು ಬಂದಿದೆ. ಮಂಗಳೂರಿನಲ್ಲಿ ಮೊತ್ತಮೊದಲ ಬಾರಿ ರೋಡ್ ಶೋ ನಡೆಯುತ್ತಿದೆ.
ನಗರಕ್ಕೆ 2ದಿನದ ಹಿಂದೆಯೇ ಎಸ್ ಪಿಜಿ (ವಿಶೇಷ ರಕ್ಷಣಾಗಳು ತಂಡ ಆಗಮಿಸಿದ್ದು, ನಗರದಾದ್ಯಂತ ಸಂಚರಿಸಿ ಪರಿಶೀಲನೆ ನಡೆಸಿದೆ.

