“ಇನ್ಸಿಡೆಂಟ್ 2026” ರಲ್ಲಿ ನಿಟ್ಟೆ ವಿದ್ಯಾರ್ಥಿಗಳಿಗೆ ಬಹುಮಾನ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಆಯೋಜಿಸಿದ ಸಾಂಸ್ಕೃತಿಕ ಉತ್ಸವ
(Karkala) ಕಾರ್ಕಳ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಆಯೋಜಿಸಿದ ವಾರ್ಷಿಕ ಸಾಂಸ್ಕೃತಿಕ ಉತ್ಸವವಾದ ‘ಇನ್ಸಿಡೆಂಟ್ 2026’ ರಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಂಗೀತ ವಿಭಾಗದಲ್ಲಿ, ಸ್ಟೀರಿಯೊ ಕ್ಲಬ್ ನ ಆದಿತ್ಯ ಪಿ. ಭಟ್ ರಾಗ ರಾಪ್ಸೋಡಿ ಎಂಬ ಏಕವ್ಯಕ್ತಿ ಗಾಯನ ಸ್ಪರ್ಧೆಯಲ್ಲಿ ಎರಡನೇ ಬಹುಮಾನವನ್ನು ಪಡೆದರು. ಇವರಿಗೆ ಆಶ್ವಿತ್ ಪ್ರಭು ಹಿನ್ನಲೆ ಸಂಗೀತದಲ್ಲಿ ಸಾಥ್ ನೀಡಿದರು.
ಕಲಾಂಜಲಿ ಕ್ಲಬ್ ನ ಟೀಮ್ ಆರ್ ಎಫ್ ಸಿ ‘ಪ್ರೊಮ್ನೇಡ್’ ವೆಸ್ಟರ್ನ್ ಗ್ರೂಪ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿತು.
ಟೀಮ್ ತಾಲೀಮ್ ಬೀದಿ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿತು.

