• Home  
  • ನಂದಿಕೂರು ನಿನ್ನಿಕಲ್ಲು ಪಾದೆಯಲ್ಲಿ ತಾಂಬೂಲ ಪ್ರಶ್ನಾ ಚಿಂತನೆ (Thoughts on the Tambula question at the foot of Nandikur Ninnikallu)
- ಧಾರ್ಮಿಕ

ನಂದಿಕೂರು ನಿನ್ನಿಕಲ್ಲು ಪಾದೆಯಲ್ಲಿ ತಾಂಬೂಲ ಪ್ರಶ್ನಾ ಚಿಂತನೆ (Thoughts on the Tambula question at the foot of Nandikur Ninnikallu)

Share: ನಂದಿಕೂರು ನಿನ್ನಿಕಲ್ಲು ಪಾದೆಯಲ್ಲಿ ತಾಂಬೂಲ ಪ್ರಶ್ನಾ ಚಿಂತನೆ ತುಳುನಾಡಿನ ಪವಿತ್ರ ಸ್ಥಳ, ಆದಿ ಪರಂಪರೆ, ದೈವಸಾನ್ನಿಧ್ಯ, ಪೂರ್ವಜರ ಆತ್ಮಸ್ಮರಣೆ ನಿನ್ನಿಕಲ್ಲು  (Nandikuru) ನಂದಿಕೂರು : ನಂದಿಕೂರು ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಪ್ರಾಕೃತಿಕ ಸೊಬಗಿನ ನಿನ್ನಿಕಲ್ಲು ಪಾದೆಯನ್ನು ವರ್ಲ್ಡ್ ಹೆರಿಟೇಜ್ ಸೆಂಟರ್ ಆಗಿ ವಿಶ್ವ   ಮಟ್ಟದಲ್ಲಿ ಗುರುತಿಸುವ ನಿಟ್ಟಿನಲ್ಲಿ ನಿನ್ನಿಕಲ್ಲು ಪಾದೆಯನ್ನು ಉಳಿಸುವ ದಿಕ್ಕಿನಲ್ಲಿ ಪ್ರಯತ್ನ ನಡೆಯುತ್ತಿದೆ.  ಆ ಪ್ರಯುಕ್ತ ನಂದಿಕೂರು ನಿನ್ನಿಕಲ್ಲು ಪಾದೆಯಲ್ಲಿ ಭಾನುವಾರ  ತಾಂಬೂಲ ಪ್ರಶ್ನಾ ಚಿಂತನೆ ನಡೆದಿದ್ದು, ಪ್ರಶ್ನೆಯಲ್ಲಿ ಗೋಚರಕ್ಕೆ ಬಂದ ವಿಷಯಗಳ […]

 ಆ ಪ್ರಯುಕ್ತ ನಂದಿಕೂರು ನಿನ್ನಿಕಲ್ಲು ಪಾದೆಯಲ್ಲಿ ಭಾನುವಾರ  ತಾಂಬೂಲ ಪ್ರಶ್ನಾ ಚಿಂತನೆ ನಡೆದಿದ್ದು, ಪ್ರಶ್ನೆಯಲ್ಲಿ ಗೋಚರಕ್ಕೆ ಬಂದ ವಿಷಯಗಳ ಸ್ಪಷ್ಟ ನಿರ್ಧಾರಕ್ಕಾಗಿ ನವೆಂಬರ್ 2ರಿಂದ 4ರವರೆಗೆ ಅಷ್ಠಮಂಗಲ ಪ್ರಶ್ನಾ ಚಿಂತನೆ ಮಾಡುವುದಾಗಿ ದಿನ ನಿಗದಿಪಡಿಸಿ ತೀರ್ಮಾನ ಕೈಗೊಳ್ಳಲಾಯಿತು.
 ತುಳುನಾಡಿನ ಪವಿತ್ರ ಸ್ಥಳ, ಆದಿ ಪರಂಪರೆ, ದೈವಸಾನ್ನಿಧ್ಯ ಮತ್ತು ನಮ್ಮ ಪೂರ್ವಜರ ಆತ್ಮಸ್ಮರಣೆಯನ್ನು ಹೊತ್ತು ನಿಂತಿರುವ ನಂದಿಕೂರು ಕೈಗಾರಿಕಾ ಪ್ರದೇಶದ ಬಳಿಯಿರುವ ನಿನ್ನಿಕಲ್ಲು ಪಾದೆ ಪರಿಸರದಲ್ಲಿ ದೈವಜ್ಞ ಶಶಿಧರ್ ಮಾಂಗಡ್ ನೇತೃತ್ವದಲ್ಲಿ ಆಯೋಜಿಸಿದ್ದ ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದವು.
  ತುಳುವರ ಸಂಸ್ಕೃತಿ ಸಂಶೋಧನಾ ಕೇಂದ್ರ, ಮಯೂರ ವರ್ಮನ ವೇದಾಧ್ಯಯನ, ಕೃಷಿ ಬದುಕಿಗೆ ಪ್ರಾಧ್ಯಾನ್ಯತೆ ಕೊಡುವ ಹಾಗೂ ಪ್ರಮುಖವಾಗಿ ಧ್ಯಾನ ಕೇಂದ್ರವಾಗಿ ಈ ಪ್ರದೇಶ ರೂಪುಗೊಳ್ಳಬೇಕು ಎನ್ನುವ ಅಭಿಪ್ರಾಯಗಳು ಜನರಿಂದ ವ್ಯಕ್ತವಾಯಿತು.
  ಪ್ರಾಕೃತಿಕ ಸೊಬಗಿನ ನಿನ್ನಿಕಲ್ಲು ಪಾದೆ ವರ್ಲ್ಡ್ ಹೆರಿಟೇಜ್ ಸೆಂಟರ್ ಆಗಿ ವಿಶ್ವ ಮಟ್ಟದಲ್ಲಿ ಗುರುತಿಸುವ ಉದ್ದೇಶವನ್ನೊಂದಿದ್ದು, ಎಲ್ಲರ ಸಹಕಾರದಿಂದ ಇಲ್ಲಿ ತುಳುವ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡುವ ಇರಾದೆ ಇರುವುದಾಗಿ ತುಳುವರ್ಲ್ಡ್ ಪೌಂಡೇಶನ್‌ ನ ರಾಜೇಶ್ ಆಳ್ವ ಹೇಳಿದರು.
 ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅನುವಾದಕ ಗೋಪಾಲಕೃಷ್ಣ ವಾಂತಿಚಾಲ್, ಡಾ. ವೈ. ಎನ್ ಶೆಟ್ಟಿ, ಎನ್. ಮಧ್ವರಾಯ ಭಟ್, ಲಕ್ಷ್ಮಣ್ ಶೆಟ್ಟಿವಾಲ್, ರಾಜೇಶ್ ಆಳ್ವ, ಜಿ. ಕೆ  ಹರಿಪ್ರಸಾದ್ ರೈ, ಕೃಷ್ಣಮೂರ್ತಿ ರಾವ್ ಪಾದೆಬೆಟ್ಟು, ಉದಯ ರೈ ಅರಂತಡೆ, ಸಂತೋಷ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ನಾಗೇಶ್ ಭಟ್, ನಾಗರಾಜ ರಾವ್, ವಸಂತ ಶೆಟ್ಟಿ, ಅರವಿಂದ ಬೆಳ್ಚಡ, ವಸಂತ ರೈ, ಪ್ರಮೋದ್ ಸಪ್ರೆ, ಭಾನುಮತಿ ಶೆಟ್ಟಿ, ಕಿರಣ್ ಚೌಟ, ಸತೀಶ್ ಆಚಾರ್ಯ, ರವಿ ಹೆಜಮಾಡಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.