• Home  
  • ಇಸ್ಕಾನ್ ನಿಂದ ಕಸಾಯಿಖಾನೆಗೆ ಗೋವುಗಳ ಮಾರಾಟ: ಮೇನಕಾ ಗಾಂಧಿ ಗಂಭೀರ ಆರೋಪ
- ಅಪರಾಧ

ಇಸ್ಕಾನ್ ನಿಂದ ಕಸಾಯಿಖಾನೆಗೆ ಗೋವುಗಳ ಮಾರಾಟ: ಮೇನಕಾ ಗಾಂಧಿ ಗಂಭೀರ ಆರೋಪ

Share: ಇಸ್ಕಾನ್ ನಿಂದ ಕಸಾಯಿಖಾನೆಗೆ ಗೋವುಗಳ ಮಾರಾಟ: ಮೇನಕಾ ಗಾಂಧಿ ಗಂಭೀರ ಆರೋಪ  ಹೊಸದಿಲ್ಲಿ : ಧಾರ್ಮಿಕ ಸಂಸ್ಥೆ ಇಸ್ಕಾನ್ ವಿರುದ್ಧ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಇಸ್ಕಾನ್ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ ಎಂದು ಮೇನಕಾ ಗಾಂಧಿ ಆರೋಪಿಸಿದ್ದಾರೆ. ಆದರೆ ಈ ಆಪಾದನೆಯನ್ನು ಇಸ್ಕಾನ್ ನಿರಾಕರಿಸಿದ್ದು, ಸಂಸ್ಥೆಯು ಗೋವುಗಳ ರಕ್ಷಣೆಯಲ್ಲಿ ತೊಡಗಿದೆ ಎಂದು ಸಮರ್ಥಿಸಿಕೊಂಡಿದೆ.  ದೇಶದಲ್ಲಿ ಇಸ್ಕಾನ್ ಬಹುದೊಡ್ಡ ಮೋಸದ ಧಾರ್ಮಿಕ ಸಂಸ್ಥೆಯಾಗಿದೆ. ಇಸ್ಕಾನ್ ಗೋಶಾಲೆಗಳಲ್ಲಿರುವ ಗೋವುಗಳನ್ನು ಮಾರಾಟ ಮಾಡಿದಷ್ಟು […]

ಇಸ್ಕಾನ್ ನಿಂದ ಕಸಾಯಿಖಾನೆಗೆ ಗೋವುಗಳ ಮಾರಾಟ: ಮೇನಕಾ ಗಾಂಧಿ ಗಂಭೀರ ಆರೋಪ

 ಹೊಸದಿಲ್ಲಿ : ಧಾರ್ಮಿಕ ಸಂಸ್ಥೆ ಇಸ್ಕಾನ್ ವಿರುದ್ಧ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಇಸ್ಕಾನ್ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ ಎಂದು ಮೇನಕಾ ಗಾಂಧಿ ಆರೋಪಿಸಿದ್ದಾರೆ. ಆದರೆ ಈ ಆಪಾದನೆಯನ್ನು ಇಸ್ಕಾನ್ ನಿರಾಕರಿಸಿದ್ದು, ಸಂಸ್ಥೆಯು ಗೋವುಗಳ ರಕ್ಷಣೆಯಲ್ಲಿ ತೊಡಗಿದೆ ಎಂದು ಸಮರ್ಥಿಸಿಕೊಂಡಿದೆ.

 ದೇಶದಲ್ಲಿ ಇಸ್ಕಾನ್ ಬಹುದೊಡ್ಡ ಮೋಸದ ಧಾರ್ಮಿಕ ಸಂಸ್ಥೆಯಾಗಿದೆ. ಇಸ್ಕಾನ್ ಗೋಶಾಲೆಗಳಲ್ಲಿರುವ ಗೋವುಗಳನ್ನು ಮಾರಾಟ ಮಾಡಿದಷ್ಟು ದೇಶದಲ್ಲಿ ಯಾರು ಮಾರಾಟ ಮಾಡಿಲ್ಲ. ಗೋವುಗಳ ರಕ್ಷಣೆ  ಹೆಸರಲ್ಲಿ ಗೋಶಾಲೆಗಳನ್ನು ನಿರ್ಮಿಸಿ ಸರಕಾರದಿಂದ ಹೆಚ್ಚಿನ ಪ್ರಮಾಣದ ಜಾಗ ಸೇರಿ ಹಲವು ಅನುಕೂಲತೆಗಳನ್ನು ಪಡೆಯುವ ಸಂಸ್ಥೆಯು ಗೋವುಗಳನ್ನು ಕಟಕರಿಗೆ ಮಾರಾಟ ಮಾಡುತ್ತದೆ ಎಂದು ಮೇನಕಾ ಹೇಳಿರುವ ವಿಡಿಯೋ ವೈರಲ್ ಆಗಿದೆ.

 ಹಾಲು  ಕೊಡದ ಹಸುಗಳ ಮಾರಾಟ: ಆಂಧ್ರಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್ ಗೋಶಾಲೆಯೊಂದಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಹಾಲು ನೀಡದಿರುವ ಒಂದೇ ಒಂದು ಹಸು ಕೂಡ ಇರಲಿಲ್ಲ ಕರುಗಳು ಕೂಡ ಇರಲಿಲ್ಲ. ಹಾಲು ಕೊಡದ ಎಲ್ಲಾ ಹಸುಗಳನ್ನು ಕಟುಕರಿಗೆ ಮಾರಾಟ ಮಾಡಿದೆ ಎಂದು ಇದರ ಅರ್ಥ. ಇಸ್ಕಾನ್ ನವರು ಬೀದಿ ಬದಿಯಲ್ಲಿ ಹರೇ ರಾಮ ಹರೇ ಕೃಷ್ಣ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಅವರ ಜೀವನವೇ ಹಾಲಿನ ಮೇಲೆ ಅವಲಂಬಿತವಾಗಿದೆ ಎಂದು ಹೇಳುತ್ತಾರೆ ಎಂದು ಮೇನಕಾ ಆರೋಪಿಸಿದ್ದಾರೆ.

ಸತ್ಯಕ್ಕೆ ದೂರವಾದ ಆರೋಪ: ಇಸ್ಕಾನ್

 ಮೇನಕಾ ಗಾಂಧಿ ಅವರ ಆರೋಪವನ್ನು ಇಸ್ಕಾನ್ ಸಂಸ್ಥೆಯು ಅಲ್ಲಗೆಳೆದಿದೆ. “ಇಸ್ಕಾನ್ ಗೋವುಗಳನ್ನು ಮಾರಾಟ ಮಾಡುತ್ತದೆ ಎಂಬುದು ಸತ್ಯಕ್ಕೆ ದೂರವಾದುದು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಇಸ್ಕಾನ್ ಗೋವುಗಳನ್ನ ರಕ್ಷಣೆ ಮಾಡುತ್ತಿದೆ” ಎಂದು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಷ್ತರ ಗೋವಿಂದ ದಾಸ್ ಸ್ಪಷ್ಟನೆ ನೀಡಿದ್ದಾರೆ. “ನಾವು ಗೋವುಗಳನ್ನು ರಕ್ಷಣೆ ಮಾಡಲು ಗೋಶಾಲೆಗಳನ್ನು ನಿರ್ಮಿಸಿದ್ದೇವೆಯೇ ಹೊರತು ಅವುಗಳನ್ನು ಮಾರಾಟ ಮಾಡಲು ಅಲ್ಲ. ದೇಶದಲ್ಲಿ ಇಸ್ಕಾನ್ ಅರವತ್ತು ಗೋ ಶಾಲೆಗಳನ್ನು ನಿರ್ಮಿಸಿದೆ. ಗೋವುಗಳು ಜೀವಂತವಾಗಿರುವ ತನಕ ಅವುಗಳ ಪಾಲನೆ ಪೋಷಣೆ ಮಾಡಲಾಗುತ್ತದೆ. ಗೋವುಗಳ ಕುರಿತು ರೈತರಿಗೆ ಹಾಗೂ ಕಾರ್ಮಿಕ ಜನರಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ನಾವು ಆಯೋಜಿಸುತ್ತೇವೆ ಎಂದು ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.