ಮೊಗವೀರ ಮಹಾಜನ ಸಂಘ ದ ವತಿಯಿಂದ ನೂತನವಾಗಿ ಉಡುಪಿ ಶಾಸಕರಾಗಿ ಆಯ್ಕೆಯಾದ ಯಶ್ವಂತ್ ಸುವರ್ಣ ರವರನ್ನು ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಮೊಗವೀರ ಮುಖಂಡ ಡಾಕ್ಟರ್ ಜಿ ಶಂಕರ್ ಮಾತನಾಡಿ, ಮೊಗವೀರ ಜನಾಂಗದ ಯಶ್ ಪಾಲ್ ಸುವರ್ಣರು ಶಾಸಕರಾಗಿ ಆಯ್ಕೆಯಾದದ್ದು ಸಂತಸ ತಂದಿದೆ. ಯಶ್ಪಾಲ್ ಸುವರ್ಣ ರಿಂದ ಸಮಾಜಕ್ಕೆ ಹೆಚ್ಚಿನ ಸೇವೆ ಲಭಿಸಲಿ ಎಂದು ಹಾರೈಸಿದರು.
ಈ ಸಂದರ್ಭ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟಿಯನ್ ಬೆಳ್ಳಂಪಳ್ಳಿ, ಜೀರ್ಣೋದರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲಿಯನ್, ಸಮಿತಿ ಸದಸ್ಯರು, ದೇವಳದ ಪ್ರಧಾನ ಪ್ರಬಂಧಕ ಸತೀಶ್ ಅಮೀನ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.

