ಉಚ್ಚಿಲದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಸನ್ಮಾನ: ಮನದ ಮಾತು
ಉಚ್ಚಿಲ: ಉಚ್ಚಿಲದಲ್ಲಿ ಸಹಕಾರಿ ಸಭಾಂಗಣವನ್ನು ಉದ್ಘಾಟಿಸಿ, ಅಮೃತ ದರ್ಪಣ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಸನ್ಮಾನಿತರಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ನಾನೂ ಕೂಡಾ ಸಹಕಾರಿ ರಂಗದ ಬಿಈಜವಾಗಿದ್ದು, ಸಹಕಾರಿ ಕ್ಷೇತ್ರವು ನನ್ನ ಬೇರು ಆಗಿದೆ.
ಉಡುಪಿ ಜಿಲ್ಲೆಯು ಸಂಸ್ಕೃತಿ ಭರಿತವಾಗಿದ್ದು, ಸಹಕಾರೀ ತತ್ವದ ಪರಿಕಲ್ಪನೆಯಡಿ ಮೌಲ್ಯವನ್ನು ಎತ್ತರಿಸಿದ ಸಹಕಾರಿ ಭೀಷ್ಮ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಸಾಧನೆಗೆ ಸಹಕಾರಿ ಧ್ರುವ ಪ್ರಶಸ್ತಿ ನೀಡಿರುವುದು ಸಾಧನೆ, ಪರಿಶ್ರಮಕ್ಕೆ ಸಂದ ಫಲವಾಗಿದೆ ಎಂದರು.
