ಉಚ್ಚಿಲದಲ್ಲಿ ಲಾರಿ ಟಯರಿಗೆ ಬೆಂಕಿ : ಕೆಲಕಾಲ ಆತಂಕ
(Uchila) ಉಚ್ಚಿಲ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಎದುರು ಚಲಿಸುತ್ತಿದ್ದ ಲಾರಿಯ ಟಯರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲಕಾಲ ಆತಂಕ ಉಂಟಾದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.
ಗುಜರಾತಿನಿಂದ ಮಂಗಳೂರಿಗೆ ಪ್ಲಾಸ್ಟಿಕ್ ಹುಡಿಗಳನ್ನು ಕೊಂಡೊಯುತ್ತಿದ್ದ ಲಾರಿಯೊಂದರ ಚಕ್ರದ ಡ್ರಮ್ ಬಿಸಿಯಾಗಿ ಟಯರಿಗೆ ಬೆಂಕಿ ಹತ್ತಿಕೊಂಡಿತ್ತು. ಸ್ಥಳೀಯರು ಇದನ್ನು ಗಮನಿಸಿ ಲಾರಿಯನ್ನು ತಕ್ಷಣ ನಿಲ್ಲಿಸಿದ್ದಾರೆ.
ಸ್ಥಳೀಯರು ತುರ್ತು ಸ್ಪಂದಿಸಿ ಹೆದ್ದಾರಿ ಪಕ್ಕದ ಮನೆಗಳಿಂದ ನೀರನ್ನು ತಂದು ಬೆಂಕಿ ಆರಿಸುವಲ್ಲಿ ಸಫಲರಾಗಿದ್ದಾರೆ.
ಬೆಂಕಿಯ ಕಿಡಿ ಲಾರಿಯಲ್ಲಿದ್ದ ಪ್ಲಾಸ್ಟಿಕ್ ಮೇಲೆ ಹಾರಿದ್ದರೆ ದೊಡ್ಡ ಮಟ್ಟದ ಬೆಂಕಿ ಅವಘಡ ಸಂಭವಿಸುತ್ತಿತ್ತು.
