• Home  
  • ಉಚ್ಚಿಲ: ಜವನೆರ್‌ ಉಚ್ಚಿಲ ಸಂಸ್ಥೆಯ 37ನೇ ವಾರ್ಷಿಕೋತ್ಸವ ಸಂಪನ್ನ (37th Anniversary of Javner Uchila)
- ಮನೋರಂಜನೆ - ರಾಜಕೀಯ

ಉಚ್ಚಿಲ: ಜವನೆರ್‌ ಉಚ್ಚಿಲ ಸಂಸ್ಥೆಯ 37ನೇ ವಾರ್ಷಿಕೋತ್ಸವ ಸಂಪನ್ನ (37th Anniversary of Javner Uchila)

Share: ಉಚ್ಚಿಲ: ಜವನೆರ್‌ ಉಚ್ಚಿಲ ಸಂಸ್ಥೆಯ 37ನೇ ವಾರ್ಷಿಕೋತ್ಸವ ಸಂಪನ್ನ (Uchila)ಉಚ್ಚಿಲ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಚ್ಚಿಲದ ಖ್ಯಾತ ನಾಟಕ ಸಂಸ್ಥೆ ಜವನೆರ್‌ ಉಚ್ಚಿಲ ತಂಡದಿಂದ “ಪಿರಬನ್ನಗ – 2” (Pirabannaga -2) ನಾಟಕ ಪ್ರದರ್ಶನ ಶನಿವಾರ ರಾತ್ರಿ ನೆರವೇರಿತು.  ಇದೇ ಸಂದರ್ಭ ಖ್ಯಾತ ನಾಟಕ ಕಲಾವಿದೆ ಹಾಗೂ ನಾಟಕದ ದಿಗ್ದರ್ಶಕಿ ಶ್ರೀಮತಿ ಸುಚೇತಾ ಶರತ್ ಉಚ್ಚಿಲರವರನ್ನು (Suchetha Sharath Uchila) ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.  ಜವನೆರ್‌ ಉಚ್ಚಿಲ […]

ಉಚ್ಚಿಲ: ಜವನೆರ್‌ ಉಚ್ಚಿಲ ಸಂಸ್ಥೆಯ 37ನೇ ವಾರ್ಷಿಕೋತ್ಸವ ಸಂಪನ್ನ

(Uchila)ಉಚ್ಚಿಲ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಚ್ಚಿಲದ ಖ್ಯಾತ ನಾಟಕ ಸಂಸ್ಥೆ ಜವನೆರ್‌ ಉಚ್ಚಿಲ ತಂಡದಿಂದ “ಪಿರಬನ್ನಗ – 2” (Pirabannaga -2) ನಾಟಕ ಪ್ರದರ್ಶನ ಶನಿವಾರ ರಾತ್ರಿ ನೆರವೇರಿತು.

 ಇದೇ ಸಂದರ್ಭ ಖ್ಯಾತ ನಾಟಕ ಕಲಾವಿದೆ ಹಾಗೂ ನಾಟಕದ ದಿಗ್ದರ್ಶಕಿ ಶ್ರೀಮತಿ ಸುಚೇತಾ ಶರತ್ ಉಚ್ಚಿಲರವರನ್ನು (Suchetha Sharath Uchila) ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

 ಜವನೆರ್‌ ಉಚ್ಚಿಲ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಪೂಜಾರಿಯವರು (Prabhakara Poojary)ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಬಡಾ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಕುಮಾರ್‌ ಮೆಂಡನ್ (Shivakumar Mendon), ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಅರ್ಚಕ  ಕೆವಿ ವಿಷ್ಣುಮೂರ್ತಿ ಉಪಾಧ್ಯಾಯ (KV Vishnumoorthi UpadhyAya), ಮನೋಹರ ಉಚ್ಚಿಲ, ಲಕ್ಷ್ಮಣ ಬಂಗೇರ, ವಿಜಯ ಆಚಾರ್ಯ ಮತ್ತಿತತರು ಉಪಸ್ಥಿತರಿದ್ದರು.

ಸತೀಶ್ ಶೆಟ್ಟಿ ಗುಡ್ಡೆಚ್ಚಿ (Sathish Shetty Gudecchi) ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

 ಕಾರ್ಯಕ್ರಮದ ಬಳಿಕ ಪಿರಬನ್ನಗ – 2 ನಾಟಕ ಪ್ರದರ್ಶನ ನಡೆಯಿತು.

ಪಿರಬನ್ನಗ –  2 ನಾಟಕವನ್ನು ದಿನಕರ ಭಂಡಾರಿ ಕಣಂಜಾರು (Dinakar Bhandari Kananjaru) ರಚಿಸಿದ್ದಾರೆ.

ನಾಟಕವನ್ನು ಶ್ರೀಮತಿ ಸುಚೇತಾ ಶರತ್ ನಿರ್ದೇಶಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಶರತ್‌ ಉಚ್ಚಿಲ ನಾಟಕಕ್ಕೆ ಸಂಗೀತ ನೀಡಿದ್ದಾರೆ. ನಾಟಕವು ಸಾವಿರಾರು ಪ್ರೇಕ್ಷಕರ ಮನಸೂರೆಗೊಂಡಿದೆ

Leave a comment

Your email address will not be published. Required fields are marked *

eMedia Kannada  @2025. All Rights Reserved.