• Home  
  • BREAKING NEWS ಅಯೋಧ್ಯೆ: ರಾಮನ ದರ್ಶನ ಮಾಡಿ ಇಹಲೋಕ ತ್ಯಜಿಸಿದ ಆರ್‌ಎಸ್‌ಎಸ್‌ ಮುಖಂಡ   ಪಾಂಡುರಂಗ ಶಾನುಭಾಗ್  (Ayodhye; RSS Leader Panduranga Shanubhaga died after having darshan of Sri Rama)
- ಜೀವನಶೈಲಿ

BREAKING NEWS ಅಯೋಧ್ಯೆ: ರಾಮನ ದರ್ಶನ ಮಾಡಿ ಇಹಲೋಕ ತ್ಯಜಿಸಿದ ಆರ್‌ಎಸ್‌ಎಸ್‌ ಮುಖಂಡ   ಪಾಂಡುರಂಗ ಶಾನುಭಾಗ್  (Ayodhye; RSS Leader Panduranga Shanubhaga died after having darshan of Sri Rama)

Share: ಅಯೋಧ್ಯೆ: ರಾಮನ ದರ್ಶನ ಮಾಡಿ ಇಹಲೋಕ ತ್ಯಜಿಸಿದ ಆರ್‌ಎಸ್‌ಎಸ್‌ ಮುಖಂಡ   ಪಾಂಡುರಂಗ ಶಾನುಭಾಗ್   (Ayodhye) ಅಯೋಧ್ಯೆ: ಆರ್‌ಎಸ್‌ಎಸ್‌ನ ಉಡುಪಿಯ ‌  ಹಿರಿಯ ಸಕ್ರಿಯ ಮತ್ತು ರಾಷ್ಟ್ರಭಕ್ತ ಪಾಂಡುರಂಗ ಶಾನುಭಾಗರು ಅಯೋಧ್ಯೆಯಲ್ಲಿ ಭಾನುವಾರ ಮಧ್ಯಾಹ್ನ ರಾಮಮಂದಿರದ ಸಮೀಪದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  ಇಂದು ಬೆಳಿಗ್ಗೆ ಶ್ರೀ ರಾಮನ ದರ್ಶನ‌ಪಡೆದು ಅತ್ಯಂತ ಧನ್ಯತೆಯನ್ನು ವ್ಯಕ್ತಪಡಿಸಿ  ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ  ಸಂತೋಷದಿಂದ ತೆರಳಿದ್ದರು. ಅಪರಾಹ್ನದ ಪಲ್ಲಕ್ಕಿಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ಗೇಟ್ ಬಳಿಯಲ್ಲಿ ರಾಷ್ಟ್ರಭಕ್ತ ಪಾಂಡುರಂಗ […]

ಅಯೋಧ್ಯೆ: ರಾಮನ ದರ್ಶನ ಮಾಡಿ ಇಹಲೋಕ ತ್ಯಜಿಸಿದ ಆರ್‌ಎಸ್‌ಎಸ್‌ ಮುಖಂಡ   ಪಾಂಡುರಂಗ ಶಾನುಭಾಗ್  

(Ayodhye) ಅಯೋಧ್ಯೆ: ಆರ್‌ಎಸ್‌ಎಸ್‌ನ ಉಡುಪಿಯ ‌  ಹಿರಿಯ ಸಕ್ರಿಯ ಮತ್ತು ರಾಷ್ಟ್ರಭಕ್ತ ಪಾಂಡುರಂಗ ಶಾನುಭಾಗರು ಅಯೋಧ್ಯೆಯಲ್ಲಿ ಭಾನುವಾರ ಮಧ್ಯಾಹ್ನ ರಾಮಮಂದಿರದ ಸಮೀಪದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

 ಇಂದು ಬೆಳಿಗ್ಗೆ ಶ್ರೀ ರಾಮನ ದರ್ಶನ‌ಪಡೆದು ಅತ್ಯಂತ ಧನ್ಯತೆಯನ್ನು ವ್ಯಕ್ತಪಡಿಸಿ  ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ  ಸಂತೋಷದಿಂದ ತೆರಳಿದ್ದರು.

ಅಪರಾಹ್ನದ ಪಲ್ಲಕ್ಕಿಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ಗೇಟ್ ಬಳಿಯಲ್ಲಿ ರಾಷ್ಟ್ರಭಕ್ತ ಪಾಂಡುರಂಗ ಶಾನುಭಾಗರಿಗೆ ಹೃದಯಾಘಾತವಾಗಿದೆ. ಸಮೀಪವರ್ತಿಗಳು ಅವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

 ಜೀವನ ಪರ್ಯಂತ ಹಿಂದು ಸಿದ್ಧಾಂತಕ್ಕಾಗಿ ದೈಹಿಕ ಅಂಧತ್ವವಿದ್ದರೂ, ಸಂಘದಲ್ಲಿ ಅತ್ಯಂತ ಸಕ್ರಿಯರಾಗಿದ್ದ ಶಾನುಭಾಗರು ಅಪೂರ್ವ ಚಿಂತಕರೂ ರಾಷ್ಟ್ರ ಭಕ್ತರೂ ಆಗಿದ್ದರು .

 ಪೇಜಾವರ ಶ್ರಿ ಆಘಾತ

ಬೆಳಿಗ್ಗೆ ಶಾನಾಭಾಗರಿಗೆ ಸಂತೋಷದಿಂದ  ತೀರ್ಥಪ್ರಸಾದ ನೀಡಿ, ಸಂಸ್ಕೃತ ದಲ್ಲೇ ಸಂಭಾಷಣೆ ನಡೆಸಿ ಕುಶಲೋಪರಿ ನಡೆಸಿದ್ದ ಪೇಜಾವರ ಶ್ರೀಗಳು ಈ ಸುದ್ದಿ ತಿಳಿದು ಆಘಾತ ವ್ಯಕ್ತಪಡಿಸಿದ್ದು, ಅವರ ಆತ್ಮಕ್ಕೆ ಶ್ರೀ ರಾಮನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ವಿಶ್ವ‌ ಹಿಂದು ಪರಷತ್ ಮುಖಂಡ ಗೋಪಾಲ್ ಜಿ (VHP Leader Gopal ji), ಮಾಜಿ ಶಾಸಕ ರಘುಪತಿ ಭಟ್  (EX MLA Rghupathi Bhat) ಸ್ಥಳದಲ್ಲಿದ್ದು ಮುಂದಿನ ವ್ಯವಸ್ಥೆಗಳ ಬಗ್ಗೆ ಪ್ರವೃತ್ತರಾಗಿದ್ಧಾರೆ.  ಕಾಪು ಶಾಸಕ ಗುರ್ಮೆ ಸುರೇಶ್‌ ಶಟ್ಟಿ (KAUP MLA Gurme Suresf Shetty)ಸಹಿತ ಗಣ್ಯರು ಪಾಂಡುರಂಗ ಶಾನುಭಾಗರವರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ

Leave a comment

Your email address will not be published. Required fields are marked *

eMedia Kannada  @2025. All Rights Reserved.