• Home  
  • ಉಚ್ಚಿಲ ಬದ್ದಿಂಜೆ ಮಠದಲ್ಲಿ ಹರಹರಿ ಸಂಗಮ(Hara Hari Sangama at Uchila Baddine matt)
- ಕರಾವಳಿ - ದೈವ - ದೇವರು - ವಿಡಿಯೋ

ಉಚ್ಚಿಲ ಬದ್ದಿಂಜೆ ಮಠದಲ್ಲಿ ಹರಹರಿ ಸಂಗಮ(Hara Hari Sangama at Uchila Baddine matt)

Share: ಉಚ್ಚಿಲ ಬದ್ದಿಂಜೆ ಮಠದಲ್ಲಿ ಹರಹರಿ ಸಂಗಮ.  (Uchila) ಉಚ್ಚಿಲ: ಉಚ್ಚಿಲ ಪುರಾಣ ಪ್ರಸಿದ್ಧ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ (Uchila Shri Malingeshwara Temple) ವಾರ್ಷಿಕ ರಥೋತ್ಸವ ದ ಕೊನೆಯ  ಅಂಗವಾಗಿ ಉಚ್ಚಿಲ  ಬದ್ದಿಂಜೆ ಮಠದಲ್ಲಿ ಶ್ರೀ ಮಹಲಿಂಗೇಶ್ವರನ ಹಾಗೂ ಮಹಾವಿಷ್ಣುವಿನ ಸಂಗಮವನ್ನು ಭಕ್ತಾದಿಗಳು ಕಣ್ತುಂಬಿ ಕೊಂಡರು.  ಉಚ್ಚಿಲ ದೇಗುಲ ದಿಂದ ದೇವರ ಬಲಿ ಮೂರ್ತಿಯನ್ನು ಋತ್ವಿಜರು ಮೆರವಣಿಗೆಯೊಂದಿಗೆ ತಂದು, ಬದ್ದಿಂಜೆ ಮಠದ ಪುಷ್ಕರಣಿಯಲ್ಲಿ ಜಳಕ ಮಾಡಿಸಲಾಯಿತು.  ಈ ಸಂದರ್ಭ ತಂತ್ರಿವರ್ಯರು ಹಾಗೂ ಅರ್ಚಕ […]

ಉಚ್ಚಿಲ ಬದ್ದಿಂಜೆ ಮಠದಲ್ಲಿ ಹರಹರಿ ಸಂಗಮ.

 (Uchila) ಉಚ್ಚಿಲ: ಉಚ್ಚಿಲ ಪುರಾಣ ಪ್ರಸಿದ್ಧ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ (Uchila Shri Malingeshwara Temple) ವಾರ್ಷಿಕ ರಥೋತ್ಸವ ದ ಕೊನೆಯ  ಅಂಗವಾಗಿ ಉಚ್ಚಿಲ  ಬದ್ದಿಂಜೆ ಮಠದಲ್ಲಿ ಶ್ರೀ ಮಹಲಿಂಗೇಶ್ವರನ ಹಾಗೂ ಮಹಾವಿಷ್ಣುವಿನ ಸಂಗಮವನ್ನು ಭಕ್ತಾದಿಗಳು ಕಣ್ತುಂಬಿ ಕೊಂಡರು.

 ಉಚ್ಚಿಲ ದೇಗುಲ ದಿಂದ ದೇವರ ಬಲಿ ಮೂರ್ತಿಯನ್ನು ಋತ್ವಿಜರು ಮೆರವಣಿಗೆಯೊಂದಿಗೆ ತಂದು, ಬದ್ದಿಂಜೆ ಮಠದ ಪುಷ್ಕರಣಿಯಲ್ಲಿ ಜಳಕ ಮಾಡಿಸಲಾಯಿತು.

 ಈ ಸಂದರ್ಭ ತಂತ್ರಿವರ್ಯರು ಹಾಗೂ ಅರ್ಚಕ ವರ್ಗ ಕೆರೆಯಲ್ಲಿ ಜಳಕ ನೆರವೇರಿಸಿದರು.

 ತದ ನಂತರ ದೇವರ ಬಲಿ ಮೂರ್ತಿಯನ್ನು ಬದ್ದಿಂಜೆ ಮಠದಲ್ಲಿ ವಿಷ್ಣುವಿನ ಮೂರ್ತಿಯೊಂದಿಗೆ ಇರಿಸಿ ಮಹಾಪೂಜೆ ನೆರವೇರಿಸಲಾಯಿತು.

 ಈ ಸಂದರ್ಭ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.