• Home  
  •  ಪಲಿಮಾರಿನಲ್ಲಿ ಏಕ ದಿನ ಮತ ಪ್ರಭಾಷಣ ಕಾರ್ಯಕ್ರಮ (Palimaru yeka Matha Prabhashana)
- ಧಾರ್ಮಿಕ

 ಪಲಿಮಾರಿನಲ್ಲಿ ಏಕ ದಿನ ಮತ ಪ್ರಭಾಷಣ ಕಾರ್ಯಕ್ರಮ (Palimaru yeka Matha Prabhashana)

Share: ಪಲಿಮಾರಿನಲ್ಲಿ ಏಕ ದಿನ ಮತ ಪ್ರಭಾಷಣ ಕಾರ್ಯಕ್ರಮ (Palimaru) ಪಲಿಮಾರು; ಯುವ ಸಮುದಾಯಕ್ಕೆ ಧಾರ್ಮಿಕ, ಲೌಕಿಕ ಶಿಕ್ಷಣ ನೀಡಿ ಸತ್ಪ್ರಜೆಗಳಾಗಿ ರೂಪಿಸುವುದೇ ಎಸ್‌ಕೆಎಸ್‌ಎಸ್‌ಎಫ್‌ ಸಂಘಟನೆಯ ಗುರಿ ಎಂದು ಎಸ್‌ಕೆಎಸ್‌ಎಸ್‌ಎಫ್‌ ಕರ್ನಾಟಕ ರಾಜ್ಯಾದ್ಯಕ್ಷ ಮುಫ್ತಿ ರಫೀಕ್ ಅಹಮ್ಮದ್ ಹುದವಿ ಕೋಲಾರಿ ಹೇಳಿದ್ದಾರೆ.   ಅವರು ಎಸ್‌ಕೆಎಸ್‌ಎಸ್‌ಎಫ್‌ ಫಲಿಮಾರು ಘಟಕ ಆಯೋಜಿಸಿದ್ದ ಏಕ ದಿನ ಮತ ಪ್ರಭಾಷಣ ಕಾರ್ಯಕ್ರಮ ದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.  ಪ್ರವಾದಿಯವರು ತೋರಿದ ದಾರಿಯಲ್ಲಿ ನಮ್ಮ ಪೂರ್ವಿಕ ಉಲಮಾ ಗಳನ್ನು ಅನುಸರಿಸಿ ಜೀವಿಸಿ ಮಾನವ […]

ಪಲಿಮಾರಿನಲ್ಲಿ ಏಕ ದಿನ ಮತ ಪ್ರಭಾಷಣ ಕಾರ್ಯಕ್ರಮ

(Palimaru) ಪಲಿಮಾರು; ಯುವ ಸಮುದಾಯಕ್ಕೆ ಧಾರ್ಮಿಕ, ಲೌಕಿಕ ಶಿಕ್ಷಣ ನೀಡಿ ಸತ್ಪ್ರಜೆಗಳಾಗಿ ರೂಪಿಸುವುದೇ ಎಸ್‌ಕೆಎಸ್‌ಎಸ್‌ಎಫ್‌ ಸಂಘಟನೆಯ ಗುರಿ ಎಂದು ಎಸ್‌ಕೆಎಸ್‌ಎಸ್‌ಎಫ್‌ ಕರ್ನಾಟಕ ರಾಜ್ಯಾದ್ಯಕ್ಷ ಮುಫ್ತಿ ರಫೀಕ್ ಅಹಮ್ಮದ್ ಹುದವಿ ಕೋಲಾರಿ ಹೇಳಿದ್ದಾರೆ.

  ಅವರು ಎಸ್‌ಕೆಎಸ್‌ಎಸ್‌ಎಫ್‌ ಫಲಿಮಾರು ಘಟಕ ಆಯೋಜಿಸಿದ್ದ ಏಕ ದಿನ ಮತ ಪ್ರಭಾಷಣ ಕಾರ್ಯಕ್ರಮ ದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

 ಪ್ರವಾದಿಯವರು ತೋರಿದ ದಾರಿಯಲ್ಲಿ ನಮ್ಮ ಪೂರ್ವಿಕ ಉಲಮಾ ಗಳನ್ನು ಅನುಸರಿಸಿ ಜೀವಿಸಿ ಮಾನವ ಸಮುದಾಯಕ್ಕೆ ಮಾದರಿಯಾಗಲು ಯುವ ಸಮುದಾಯ ಪರಿಶ್ರಮಿಸಬೇಕು ಎಂದ ಅವರು,    ಈ ನಿಟ್ಟಿನಲ್ಲಿ ಎಸ್‌ಕೆಎಸ್‌ಎಸ್‌ಎಫ್‌ ಕರ್ನಾಟಕ ರಾಜ್ಯ ಸಮಿತಿಯು ಪ್ರತಿಯೊಂದು ಜಮಾತಿನ ಸಹಕಾರದಿಂದ ಯುವ ಸಮುದಾಯ ವನ್ನು ಸದೃಡಗೊಳಿಸಲು ಕಾರ್ಯಕ್ರಮ ರೂಪಿಸಲಿದೆ ಎಂದರು.

  ಇನ್ನಾ ಪಲಿಮಾರು ಹಯಾತುಲ್ ಇಸ್ಲಾಮ್ ಜುಮಾ ಮಸೀದಿಯ ಖತೀಬರಾದ ಮೌಲಾನಾ ಎಂ. ಎಸ್. ಮುಹಮ್ಮದ್ ರಿಯಾಝ್ ಪೈಝಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾಂಜರಕಟ್ಟೆ ನೂರುಲ್ ಹುದಾ ಮಸೀದಿಯ ಇಮಾಮ್ ಅಶ್ರಫ್ ಅಝ್ಹರಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಜಮಾತ್ ಕಮಿಟಿಯ ಅಧ್ಯಕ್ಷ ಟಿ. ಉಮರಬ್ಬ, ಕಾರ್ಯದರ್ಶಿ ಅಬ್ದುಲ್ ರಹಮಾನ್, ಕೆ. ಎಸ್. ಉಮರಬ್ಬ, ಅಹಮ್ಮದ್ ಇನ್ನಾ, ಮದ್ರಸ ಅಧ್ಯಾಪಕರಾದ ಅಬ್ದುಲ್ ರಜಾಕ್ ಸಅದಿ, ಮೊಹಿಯುದ್ದೀನ್ ಮುಸ್ಲಿಯಾರ್, ಸಂಶುದ್ದೀನ್ ಸಅದಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜನಾಬ್ಎಂ‌ ಪಿ. ಮೊಯಿದಿನಬ್ಬ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

 ಎಸ್‌ಕೆಎಸ್‌ಎಸ್‌ಎಫ್‌ ಫಲಿಮಾರು ಘಟಕದ ಅಧ್ಯಕ್ಷ ದಾದಾಪೀರ್, ಖಾಸಿಂ ಕರ್ನಿರೆ, ಹುಸೆೃನ್ ಮಹ್ಮದ್, ರಫೀಕ್ ಹುಸೈನ್, ಕಾರ್ಯದರ್ಶಿ ಮಹಮ್ಮದ್ ಝಾಹಿರ್, ಕೋಶಾಧಿಕಾರಿ ಇಬ್ರಾಹಿಂ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.