• Home  
  • ಉಚ್ಚಿಲ ಶ್ರೀ  ಮಹಾಲಕ್ಷ್ಮಿ ದೇವಸ್ಥಾನಕ್ಕೆ ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಭೇಟಿ
- ಪ್ರಚಲಿತ

ಉಚ್ಚಿಲ ಶ್ರೀ  ಮಹಾಲಕ್ಷ್ಮಿ ದೇವಸ್ಥಾನಕ್ಕೆ ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಭೇಟಿ

Share:   ಇತ್ತೀಚೆಗೆ ಸಮಗ್ರ ಜೀರ್ಣೋದ್ಧಾರಗೊಂಡ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭಾನುವಾರ ಭೇಟಿ ನೀಡಿದರು.  ದೇವಳದ ಪ್ರಧಾನ ಅರ್ಚಕ ಕೆವಿ ರಾಘವೇಂದ್ರ ಉಪಾಧ್ಯಾಯ ಮತ್ತು ವಿಷ್ಣುಮೂರ್ತಿ ಉಪಾಧ್ಯಾಯರವರು ಶ್ರೀ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿ ಪ್ರಸಾದ ವಿಕರಿಸಿದರು. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿಕೋಟಿಯನ್ ಬೆಳ್ಳಂಪಳ್ಳಿ ಯವರು ದೇವಸ್ಥಾನದ ವತಿಯಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರಿಗೆ ಸ್ಮರಣಿಕೆ […]

  ಇತ್ತೀಚೆಗೆ ಸಮಗ್ರ ಜೀರ್ಣೋದ್ಧಾರಗೊಂಡ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭಾನುವಾರ ಭೇಟಿ ನೀಡಿದರು.

 ದೇವಳದ ಪ್ರಧಾನ ಅರ್ಚಕ ಕೆವಿ ರಾಘವೇಂದ್ರ ಉಪಾಧ್ಯಾಯ ಮತ್ತು ವಿಷ್ಣುಮೂರ್ತಿ ಉಪಾಧ್ಯಾಯರವರು ಶ್ರೀ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿ ಪ್ರಸಾದ ವಿಕರಿಸಿದರು.

ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿಕೋಟಿಯನ್ ಬೆಳ್ಳಂಪಳ್ಳಿ ಯವರು ದೇವಸ್ಥಾನದ ವತಿಯಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರಿಗೆ ಸ್ಮರಣಿಕೆ  ನೀಡಿ ಸನ್ಮಾನಿಸಿದರು.

 ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ್ ಪೂಜಾರಿ, ಉಡುಪಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ಎಂಎ ಗಫೂರ್‌,  ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪ್ರಸಾದ್ ಕಾಂಚನ್, ವೆರೀನಿಕಾ ಕರ್ನಾಲಿಯೋ,  ಕಿಶನ್‌ ಹೆಗ್ಡೆ ಕೊಳ್ಕೆ ಬೈಲ್, ವಿಶ್ವಾಸ ಅಮೀನ್ , ಅಬ್ದುಲ್ ಅಜೀಜ್ ಮತ್ತಿತರ   ಮುಖಂಡರು ಉಪಸ್ಥಿತರಿದ್ದರು.

 ದಕ್ಷಿಣ ಕನ್ನಡ ಮೊಗವೀರಮಹಾಜನ ಸಂಘದ  ಅಧ್ಯಕ್ಷ ಜಯ ಸಿ ಕೋಟ್ಯಾನ್‌ ಬೆಳ್ಳಂಪಳ್ಳಿ, ಶಿವಕುಮಾರ್,  ದಿನೇಶ್ ಕೋಟ್ಯಾನ್   ರಾಘವೇಂದ್ರ ಬಿಜಾಡಿ, ಮನೇಜರ್‌ ಸತೀಶ್‌ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.