• Home  
  • ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲಕ್ಕೆ ಉಸ್ತುವಾರಿ ಸಚಿವೆ  ಲಕ್ಷ್ಮೀ ಹೆಬ್ಬಾಳ್ಕರ್, ಕುಟುಂಬ ಭೇಟಿ (Minister-in-charge Lakshmi Hebbalkar visits family at Uchila Sri Mahalakshmi Temple)
- ಧಾರ್ಮಿಕ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲಕ್ಕೆ ಉಸ್ತುವಾರಿ ಸಚಿವೆ  ಲಕ್ಷ್ಮೀ ಹೆಬ್ಬಾಳ್ಕರ್, ಕುಟುಂಬ ಭೇಟಿ (Minister-in-charge Lakshmi Hebbalkar visits family at Uchila Sri Mahalakshmi Temple)

Share:  ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲಕ್ಕೆ ಉಸ್ತುವಾರಿ ಸಚಿವೆ  ಲಕ್ಷ್ಮೀ ಹೆಬ್ಬಾಳ್ಕರ್, ಕುಟುಂಬ ಭೇಟಿ ಸಚಿವೆಯನ್ನು ಸನ್ಮಾನಿಸಿದ ಮೊಗವೀರ ಮಹಾಜನ‌ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ (Uchila) ಉಚ್ಚಿಲ: ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಕುಟುಂಬ ಸಮೇತ ಸೋಮವಾರ ಸಂಜೆ ಭೇಟಿ ನೀಡಿದರು.   ದೇವಳದ ಅರ್ಚಕ ವೇದಮೂರ್ತಿ ವಿಷ್ಣುಮೂರ್ತಿ ಉಪಾಧ್ಯಾಯ ಮತ್ತು ಗೋಪಿಯವರು ವಿಷೇಶ ಪೂಜೆ ಸಲ್ಲಿಸಿ […]

ಸಚಿವೆಯನ್ನು ಸನ್ಮಾನಿಸಿದ ಮೊಗವೀರ ಮಹಾಜನ‌ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್

(Uchila) ಉಚ್ಚಿಲ: ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಕುಟುಂಬ ಸಮೇತ ಸೋಮವಾರ ಸಂಜೆ ಭೇಟಿ ನೀಡಿದರು.

  ದೇವಳದ ಅರ್ಚಕ ವೇದಮೂರ್ತಿ ವಿಷ್ಣುಮೂರ್ತಿ ಉಪಾಧ್ಯಾಯ ಮತ್ತು ಗೋಪಿಯವರು ವಿಷೇಶ ಪೂಜೆ ಸಲ್ಲಿಸಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತವರ ಕುಟುಂಬಕ್ಕೆ ಪ್ರಸಾದ ನೀಡಿದರು.

 ಮೊಗವೀರ ಮಹಾಜನ‌ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿಯವರು ದೇವಸ್ಥಾನದ ವತಿಯಿಂದ ಅಭಿನಂದಿಸಿ, ಸ್ಮರಣಿಕೆ ನೀಡಿದರು.

   ಈ ಸಂದರ್ಭ ಮೊಗವೀರ ಮಹಾಜನ‌ ಸಂಘದ ಉಪಾಧ್ಯಕ್ಷ ದಿನೇಶ್‌ ಎರ್ಮಾಳು, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್‌ ಮಟ್ಟು,‌ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ಬೈಕಾಡಿ ರಾಘವೇಂದ್ರ ಸುವರ್ಣ, ನಾಲ್ಕು ಪಟ್ಣ ಮೊಗವೀರ ಸಭಾದ ಅಧ್ಯಕ್ಷ ಮನೋಜ್‌ ಕಾಂಚನ್‌, ಮಹಿಳಾ ಘಟಕಾಧ್ಯಕ್ಷೆ ಶ್ರೀಮತಿ ಸುಗುಣ ಕರ್ಕೇರಾ, ಸಮಿತಿ ಸದಸ್ಯರಾದ ಸುಜಿತ್‌ ಸುವರ್ಣ, ಕಿರಣ್‌ ಕುಮಾರ್‌ ಉದ್ಯಾವರ, ಕವಿತಾ, ಆರತಿ ಮನೋಜ್‌, ಪೂರ್ಣಿಮಾ ಚಂದ್ರಶೇಖರ್‌, ಭಾರತಿ, ದೇವಳದ ಪ್ರಧಾನ ಪ್ರಬಂಧಕ ಸತೀಶ್‌ ಅಮೀನ್‌ ಪಡುಕರೆ, ಕಾಂಗ್ರೆಸ್‌ ಮುಖಂಡರಾದ ಪ್ರಸಾದ್‌ ರಾಜ್‌ ಕಾಂಚನ್‌, ವೈ ಸುಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.