• Home  
  • ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲ ಚಂದ್ರಮಂಡಲ ರಥ ಮೆರವಣಿಗೆ, ಹೊರೆಕಾಣಿಕೆ ಸಮರ್ಪಣೆ (Uchila Sri Mahalakshmi Temple Chandramandal Ratha Procession, Dedication of Horakanike)
- ಧಾರ್ಮಿಕ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲ ಚಂದ್ರಮಂಡಲ ರಥ ಮೆರವಣಿಗೆ, ಹೊರೆಕಾಣಿಕೆ ಸಮರ್ಪಣೆ (Uchila Sri Mahalakshmi Temple Chandramandal Ratha Procession, Dedication of Horakanike)

Share:  ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲ ಚಂದ್ರಮಂಡಲ ರಥ ಮೆರವಣಿಗೆ, ಹೊರೆಕಾಣಿಕೆ ಸಮರ್ಪಣೆ   ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದ ಮೊಗವೀರ ಮುಖಂಡ ಡಾ. ಜಿ ಶಂಕರ್  (Uchila) ಉಚ್ಚಿಲ: ದ.ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ದ.ಕ ಮೊಗವೀರ ಮಹಿಳಾ ಮಹಾಜನ ಸಂಘ ಮತ್ತು ಬೆಳ್ಳಿ ರಥ ಸಮಿತಿಯ ವತಿಯಿಂದ ಸಮರ್ಪಣೆ ಮಾಡಿದ ಚಂದ್ರ ಮಂಡಲ ರಥ ಮೆರವಣಿಗೆ ಹಾಗೂ ರಥೋತ್ಸವದ ಪ್ರಯುಕ್ತ ಸೋಮವಾರ ಸಂಜೆ ಹೊರೆ ಕಾಣಿಕೆ ನೆರವೇರಿತು. ಉಚ್ಚಿಲ ಶ್ರೀ […]

 (Uchila) ಉಚ್ಚಿಲ: ದ.ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ದ.ಕ ಮೊಗವೀರ ಮಹಿಳಾ ಮಹಾಜನ ಸಂಘ ಮತ್ತು ಬೆಳ್ಳಿ ರಥ ಸಮಿತಿಯ ವತಿಯಿಂದ ಸಮರ್ಪಣೆ ಮಾಡಿದ ಚಂದ್ರ ಮಂಡಲ ರಥ ಮೆರವಣಿಗೆ ಹಾಗೂ ರಥೋತ್ಸವದ ಪ್ರಯುಕ್ತ ಸೋಮವಾರ ಸಂಜೆ ಹೊರೆ ಕಾಣಿಕೆ ನೆರವೇರಿತು.

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಗೋವಿಂದ ಭಟ್‌ ರವರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ವಿತರಿಸಿದರು.

 ಮೊಗವೀರ ಮುಂದಾಳು ನಾಡೋಜ ಡಾ. ಜಿ ಶಂಕರ್ ರವರು ತೆಂಗಿನ ಕಾಯಿಯನ್ನು ಒಡೆಯುವ ಮೂಲಕ ಹೊರೆ ಕಾಣಿಕೆಗೆ ಚಾಲನೆ ನೀಡಿದರು.

ದ.ಕ ಮೊಗವೀರ ಮಹಿಳಾ ಮಹಾಜನ ಸಂಘ ಮತ್ತು ಬೆಳ್ಳಿ ರಥ ಸಮಿತಿಯ ವತಿಯಿಂದ ಸಮರ್ಪಣೆ ಮಾಡಿದ ಚಂದ್ರ ಮಂಡಲ ರಥ ಮೆರವಣಿಗೆಗೆ ಮಹಿಳಾ ಮಂಡಲದ ಸದಸ್ಯೆಯರು ಮತ್ತು ಡಾ. ಜಿ ಶಂಕರ್‌ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಚೆಂಡೆ, ವಾದ್ಯ, ತಟ್ಟೀರಾಯ, ಭಜನಾ ತಂಡಗೂ, ಕುಣಿತ ಭಜನಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿತು.

    ಈ ಸಂದರ್ಭ ಮೊಗವೀರ ಮುಂದಾಳು ನಾಡೋಜಾ ಡಾ. ಜಿ ಶಂಕರ್‌, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ, ದ.ಕ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಶ್ರೀಮತಿ ಕವಿತಾ ಶರತ್, ಕಾರ್ಯದರ್ಶಿ ಪೂರ್ಣಿಮಾ ಚಂದ್ರಶೇಖರ್, ಬೆಳ್ಳಿ ರಥ ಸಮಿತಿಯ ಅಧ್ಯಕ್ಷೆ ಉಷಾರಾಣಿ, ಕಾರ್ಯದರ್ಶಿ ಶುಭಾ ದಿನೇಶ್, ಹರಿಯಪ್ಪ ಆರ್. ಕೋಟ್ಯಾನ್, ಶರಣ್ ಕುಮಾರ್ ಮಟ್ಟು, ವಿನಯ್ ಕರ್ಕೇರ ಮಲ್ಪೆ, ಶ್ರೀಮತಿ ಸುಗುಣ ಕರ್ಕೇರ,  ನಾರಾಯಣ ಕರ್ಕೇರಾ, ಸಂಜೀವ ಬಂಗೇರ, ಮೋಹನ್ ಬಂಗೇರ ಕಾಪು, ಕಾಪು ನಾಲ್ಕು ಪಟ್ನ ಅಧ್ಯಕ್ಷ ಮನೋಜ್ ಕಾಂಚನ್, ವಾಸುದೇವ ಸಾಲ್ಯಾನ್ ಕಟಪಾಡಿ, ನಾರಾಯಣ ಕರ್ಕೇರ ಪಡುಬಿದ್ರಿ, ರವೀಶ್ ಎಸ್. ಕೋಟೇಶ್ವರ, ಮನೋಜ್ ಕಾಂಚನ್, ಅಶೋಕ್ ಸಾಲ್ಯಾನ್ ಪಡುಬಿದ್ರಿ, ಕಿರಣ್ ಕುಮಾರ್ ಉದ್ಯಾವರ, ಶುಭಾಶ್ಚಂದ್ರ ಕಾಂಚನ್, ವಿಠಲ್ ಕರ್ಕೇರ, ಪುಂಡಲೀಕ ಹೊಸಬೆಟ್ಟು, ರವೀಂದ್ರ ಶ್ರೀಯಾನ್, ದಾಮೋದರ್ ಸುವರ್ಣ, ರತ್ನಾಕರ್ ಸಾಲ್ಯಾನ್ ಮಲ್ಪೆ, ಮಂಜುನಾಥ್ ಸುವರ್ಣ, ಶ್ರೀಧರ್ ಬಂಗೇರ ಎರ್ಮಾಳ್, ಸರ್ವೋತ್ತಮ ಕುಂದರ್, ಗುಂಡು ಬಿ ಅಮೀನ್‌, ಸುಜಿತ್ ‌ಸಾಲ್ಯಾನ್, ದಿನೇಶ್ ಎರ್ಮಾಳು, ಸತೀಶ್ ಸಾಲ್ಯಾನ್ ಎರ್ಮಾಳ್ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.