• Home  
  • ಉಡುಪಿಯಲ್ಲಿ ಆಕಾಶವಾಣಿಯ ಉಡುಪಿಯ ನೂತನ ಎಫ್‌ಎಂ ಟ್ರಾನ್ಸ್‌ಮಿಷನ್ ಕೇಂದ್ರ ಉದ್ಘಾಟನೆ (Inauguration of All India Radio’s new FM transmission station in Udupi)
- Technology

ಉಡುಪಿಯಲ್ಲಿ ಆಕಾಶವಾಣಿಯ ಉಡುಪಿಯ ನೂತನ ಎಫ್‌ಎಂ ಟ್ರಾನ್ಸ್‌ಮಿಷನ್ ಕೇಂದ್ರ ಉದ್ಘಾಟನೆ (Inauguration of All India Radio’s new FM transmission station in Udupi)

Share: ಉಡುಪಿಯಲ್ಲಿ ಆಕಾಶವಾಣಿಯ ಉಡುಪಿಯ ನೂತನ ಎಫ್‌ಎಂ ಟ್ರಾನ್ಸ್‌ ಮಿಷನ್ ಕೇಂದ್ರ ಉದ್ಘಾಟನೆ ಎಫ್‌ಎಂ ಟ್ರಾನ್ಸ್‌ಮಿಷನ್ ಕೇಂದ್ರ ಲೋಕಾರ್ಪಣೆ ಗೊಳಿಸಿದ ಕೇಂದ್ರ ಅಶ್ವಿನಿ  ವೈಷ್ಣವ್  (Udupi) ಉಡುಪಿ: ಮಂಗಳೂರು ಆಕಾಶವಾಣಿಯ ಉಡುಪಿಯ ನೂತನ ಎಫ್‌ಎಂ ಟ್ರಾನ್ಸ್‌ಮಿಷನ್ ಕೇಂದ್ರವನ್ನು ಶುಕ್ರವಾರ ಕೇಂದ್ರ ರೈಲ್ವೇ ಮತ್ತು ಮಾಹಿತಿ ಪ್ರಸಾರ ಸಚಿವ ಅಶ್ವಿನಿ  ವೈಷ್ಣವ ಲೋಕಾರ್ಪಣೆ ಗೊಳಿಸಿದರು.    1 ಕಿಲೋವ್ಯಾಟ್ ಸಾಮರ್ಥ್ಯದ 101.9 ಮೆಗಾಹರ್ಟ್ಸ್ ತರಂಗಾಂತರದ ಎಫ್‌ಎಂ ಕೇಂದ್ರ ಇದಾಗಿದ್ದು, ಸುಮಾರು 2.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡಿದೆ. […]

 (Udupi) ಉಡುಪಿ: ಮಂಗಳೂರು ಆಕಾಶವಾಣಿಯ ಉಡುಪಿಯ ನೂತನ ಎಫ್‌ಎಂ ಟ್ರಾನ್ಸ್‌ಮಿಷನ್ ಕೇಂದ್ರವನ್ನು ಶುಕ್ರವಾರ ಕೇಂದ್ರ ರೈಲ್ವೇ ಮತ್ತು ಮಾಹಿತಿ ಪ್ರಸಾರ ಸಚಿವ ಅಶ್ವಿನಿ  ವೈಷ್ಣವ ಲೋಕಾರ್ಪಣೆ ಗೊಳಿಸಿದರು.  

 1 ಕಿಲೋವ್ಯಾಟ್ ಸಾಮರ್ಥ್ಯದ 101.9 ಮೆಗಾಹರ್ಟ್ಸ್ ತರಂಗಾಂತರದ ಎಫ್‌ಎಂ ಕೇಂದ್ರ ಇದಾಗಿದ್ದು, ಸುಮಾರು 2.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡಿದೆ. ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಎಫ್‌ಎಂ ಪ್ರಸಾರ ಸೇವೆ ಲಭ್ಯವಾಗಲಿದೆ. ಈ ಮೂಲಕ ಉಡುಪಿಯ ಸುತ್ತುಮುತ್ತಲಿನ ಜನರಿಗೆ ಆಕಾಶವಾಣಿಯ ಶ್ರೋತೃಗಳಿಗೆ ಅನುಕೂಲವಾಗಲಿದೆ.

    ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಕೊಂಕಣ ರೈಲ್ವೇ ಯನ್ನು ಭಾರತೀಯ ರೈಲ್ವೆಯ ಜೊತೆಗೆ ವಿಲೀನ ಗೊಳಿಸುವ ಪ್ರಕ್ರಿಯೆಗೆ ಕರ್ನಾಟಕ ಮತ್ತು ಕೇರಳದ ಅನುಮತಿ ಬೇಕಾಗಿದೆ.  

  ಸುಮಾರು ಹತ್ತು ರೈಲು ನಿಲ್ದಾಣಗಳ ಡಬ್ಲಿಂಗ್ ಹಾಗೂ ಎರಡು ಸುರಂಗ ಮಾರ್ಗಗಳ  ಯೋಜನೆ ಪೂರ್ಣಗೊಳಿಸಲಿದ್ದೇವೆ , ಮತ್ತು ಬೈಂದೂರು, ಬಾರ್ಕೂರು ರೈಲ್ವೆ ನಿಲ್ದಾಣಗಳನ್ನು ಉನ್ನತೀಕರಿಸುವ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ , ಶಾಸಕರಾದ ಯಶ್‌ಪಾಲ್ ಸುವರ್ಣ,  ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.