Tag: KUNDAPURA MLA KIRAN KODGI

ರಾಜಕೀಯ

ಉಚ್ಚಿಲ : ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026 ಸಮಾರೋಪ (Uchila : Pt. Deenadayal Upadhyay Training Mahabhayan – 2026 Concluded)

ಉಚ್ಚಿಲ : ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026 ಸಮಾರೋಪ ಕಾರ್ಯಕರ್ತರ ರಕ್ತ ಬೆವರಿನ ಸಾರ್ಥಕತೆ  ಬಿಜೆಪಿಯಲ್ಲಿದೆ : ಸಂಸದ ಚೌಟ (PHOTO CREDIT : HARINAXA, MUDARANGADI)  (Uchila) ಉಚ್ಚಿಲ : ಪಡುಬಿದ್ರಿ : ಕಾರ್ಯಕರ್ತರ ರಕ್ತ ಬೆವರಿನ ಸಾರ್ಥಕತೆಯು ಬಿಜೆಪಿಯಲ್ಲಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.  ಅವರು ಉಚ್ಚಿಲ ಮಹಾಲಕ್ಷ್ಮಿ ಸಭಾಂಗಣದಲ್ಲಿ ಭಾನುವಾರ ಸಂಜೆ ಎರಡು ದಿನಗಳ ಕಾಲ ನಡೆದ ಉಡುಪಿ ಜಿಲ್ಲಾ ಮಟ್ಟದ ಪಂಡಿತ್‌ ದೀನದಯಾಳ್ […]

ರಾಜಕೀಯ

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಸುಳ್ಳು ಸುದ್ದಿ ಹರಡಲಾಗುತ್ತಿದೆ : ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ (Fake news is being spread against BJP on social media: Union Finance Minister Nirmala Sitharaman)

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಸುಳ್ಳು ಸುದ್ದಿ ಹರಡಲಾಗುತ್ತಿದೆ : ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಉಚ್ಚಿಲ ಮಹಾಲಕ್ಷ್ಮೀ ಸಭಾಭವನದಲ್ಲಿ 2 ದಿನಗಳ ಬಿಜೆಪಿ ಜಿಲ್ಲಾ ಪ್ರಶಿಕ್ಷಣ ವರ್ಗ ಉದ್ಘಾಟಿಸಿದ ಕೇಂದ್ರ ಸಚಿವೆ (Uchila) ಉಚ್ಚಿಲ : ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಹರಡಲಾಗುತ್ತಿರುವ ಸುಳ್ಳು ಸುದ್ದಿಗಳ ಬಗೆಗಿನ ಸತ್ಯವನ್ನು ಜನರಿಗೆ ತಿಳಿಸುವ ಅಗತ್ಯವಿದೆ ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅವರು ಶನಿವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ 2 ದಿನಗಳ ಬಿಜೆಪಿ […]

social service

ಪಂಚವರ್ಣ ಸಂಘಟನೆ 300ನೇ ಅಭಿಯಾನ : ಆನಂದ್ ಸಿ ಕುಂದರ್ ರವರಿಗೆ ಸಮರ್ಪಣಾ ಗೌರವ (Panchavarna Sangathan’s 300th campaign: Dedication honors Anand C. Kunder)

ಪಂಚವರ್ಣ ಸಂಘಟನೆ 300ನೇ ಅಭಿಯಾನ : ಆನಂದ್ ಸಿ ಕುಂದರ್ ರವರಿಗೆ ಸಮರ್ಪಣಾ ಗೌರವ ಸಮಾಜಕ್ಕಾಗಿ ಅರ್ಪಿಸಿಕೊಂಡ ಆನಂದ್ ಸಿ ಕುಂದರ್ : ಶಾಸಕ ಕೊಡ್ಗಿ (Kota) ಕೋಟ: ಆನಂದ್ ಸಿ ಕುಂದರ್ ಎಂದರೆ ಅದೊಂದು ಶಕ್ತಿ. ಜಿಲ್ಲೆಯ ಸಾಂಸ್ಕೃತಿಕ ಕಾಶಿಯನ್ನಾಗಿಸಿದ ಕೀರ್ತಿ ಆನಂದ ಕುಂದರ್ ರವರಿಗೆ ಲಭಿಸುತ್ತದೆ. ಇಂತಹ ವ್ಯಕ್ತಿಗೆ ಪಂಚವರ್ಣ ಸಂಘಟನೆ 300ನೇ ವಾರದ ಪರಿಸರ ಸ್ನೇಹಿ ಅಭಿಯಾನ ಸಮರ್ಪಿಸಿದ್ದು ಅರ್ಥಪೂರ್ಣ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು.   ಕೋಟದ ಪಂಚವರ್ಣ […]

protest ಸಂಘ, ಸಂಸ್ಥೆಗಳು

 ಮಣಿಪಾಲ: ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಧರಣಿ (Manipal:Demanding appropriate action against those spreading false propaganda about Srikshetra Dharmasthala)

ಮಣಿಪಾಲ: ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಧರಣಿ ಕಮ್ಯುನಿಸ್ಟ್ ಮನಸ್ಥಿತಿಯ ಅಧಿಕಾರಿಗಳಿಂದ ಹಿಂದೂ ಸಮಾಜದ ಒಗ್ಗಟ್ಟು ಒಡೆಯಲು ಹುನ್ನಾರ- ಶಾಸಕ ಯಶ್ ಪಾಲ್ ಸುವರ್ಣ (Udupi) ಉಡುಪಿ: ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಒಳಸಂಚು ನಡೆಸುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ‌ ನೇತೃತ್ವದಲ್ಲಿ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು. […]

ಜಿಲ್ಲಾಡಳಿತ ರಾಜಕೀಯ

  ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಆದಾಯ ಹೆಚ್ಚಿಸಿಕೊಳ್ಳಬೇಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Farmers should adopt new technologies and increase their income: Minister Lakshmi Hebbalkar)

  ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಆದಾಯ ಹೆಚ್ಚಿಸಿಕೊಳ್ಳಬೇಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್  ಕುಂದಾಪುರ ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿದ ಸಚಿವೆ ಸಚಿವರು   (Kundapura) ಕುಂದಾಪುರ : ರೈತರು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಹೆಚ್ಚು ಆದಾಯ ಗಳಿಸುವಂತಾಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.  ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಕುಂದಾಪುರ ರೈತ ಸಂಪರ್ಕ ಕೇಂದ್ರ […]

PROBLEMS

ಕುಂದಾಪುರ: ಜಡ್ಕಲ್ ಗ್ರಾಮದ ಕಿಂಡಿ ಅಣೆಕಟ್ಟು ಕುಸಿದು ಬೀಳುವ ಸ್ಥಿತಿ, ಜನರಲ್ಲಿ ಆತಂಕ (Kundapura : Kindi dam in Jadkal village is in danger of collapsing, causing panic among the people)

ಕುಂದಾಪುರ: ಜಡ್ಕಲ್ ಗ್ರಾಮದ ಕಿಂಡಿ ಅಣೆಕಟ್ಟು ಕುಸಿದು ಬೀಳುವ ಸ್ಥಿತಿ, ಜನರಲ್ಲಿ ಆತಂಕ (Kundapura) ಕುಂದಾಪುರ :  ಕೊಲ್ಲೂರು ಅಭಯಾರಣ್ಯ ವ್ಯಾಪ್ತಿಯ ಜಡ್ಕಲ್ ಗ್ರಾಮದ ಹೊಳ್ಮಕ್ಕಿ- ಕಾನ್ಕಿ ಹಾಗೂ ಹರುಮನೆ ನಡುವೆ ಸಂಪರ್ಕ ಬೆಸೆಯುವ ಹಾಗೂ ನೀರಾವರಿ ಉದ್ದೇಶಕ್ಕೆ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಅರಣ್ಯದಂಚಿನ ಜನರು ಜೀವ ಭಯದಲ್ಲಿ ಕಾಲ ಕಳೆಯುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.     ಹರುಮನೆ ಮತ್ತು ಹೊಳ್ಮಕ್ಕಿ ನಡುವೆ ಕಿರು ಹೊಳಗೆ 20 ವರ್ಷ ಹಿಂದೆ ಕಿಂಡಿ ಅಣೆಕಟ್ಟು […]

ಜೀವನಶೈಲಿ

ಕುಂದಾಪುರ : ಗರಿಷ್ಠ ಅಂಕ ಪಡೆದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ (Kundapur: Laptops distributed to government school students who scored highest marks)

ಕುಂದಾಪುರ : ಗರಿಷ್ಠ ಅಂಕ ಪಡೆದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ (Kundapura) ಕುಂದಾಪುರ-: ಎ:05 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕುಂದಾಪುರದ ತಾಲೂಕು ಕಚೇರಿ ಸಭಾಂಗಣದಲ್ಲಿ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಯವರು ವಿತರಿಸಿದರು. ಈ ಸಂದರ್ಭ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರದಿಂದ ಶಿಕ್ಷಣಕ್ಕಾಗಿ ಬೇರೆ ಬೇರೆ ಸವಲತ್ತುಗಳು ದೊರೆಯುತ್ತಿರುತ್ತದೆ ಅದನ್ನು ಸದುಪಯೋಗ […]

ರಾಜಕೀಯ ವಿಡಿಯೋ

ಕಾರ್ಕಳ: ಕಾರ್ಕಳ ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ (Karkala: Karkala BJP protests against the state government)

ಕಾರ್ಕಳ: ಕಾರ್ಕಳ ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ (Karkala) ಕಾರ್ಕಳ : ಕಾರ್ಕಳ ತಾಲೂಕು ಕಚೇರಿ ಮುಂಭಾಗ ಕಾರ್ಕಳ ಬಿಜೆಪಿ ವತಿಯಿಂದ ಶಾಸಕ ಸುನಿಲ್ ಕುಮಾ‌ರ್ ನೇತೃತ್ವದಲ್ಲಿ ರಾಜ್ಯ ಸರಕಾರದ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೇಂದ್ರ ಸರಕಾರ ರೂಪಿಸಿದ ಜನಪರ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಿದ್ದರಾಮಯ್ಯ ಸರಕಾರ ಅಡ್ಡಿಪಡಿಸುತ್ತಿದೆ. ಇಂತಹ ಒಂದು ಕೆಟ್ಟ ಸಂಪ್ರದಾಯಕ್ಕೆ ರಾಜ್ಯ ಸಾಕ್ಷಿಯಾಗಿದೆ.   ಕೇಂದ್ರ […]

protest

ಉಡುಪಿ ಎಸ್ಪಿ ವಿರುದ್ಧ ಐವರು ಬಿಜೆಪಿ ಶಾಸಕರು ಮತ್ತು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ (Protest by Five MLAʼs and Hindu Organisations Against Udupi SP)

ಉಡುಪಿ ಎಸ್ಪಿ ವಿರುದ್ಧ ಐವರು ಬಿಜೆಪಿ ಶಾಸಕರು ಮತ್ತು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ  (Udupi) ಉಡುಪಿ: ಉಡುಪಿ ಎಸ್ಪಿ ವಿರುದ್ಧ ಜಿಲ್ಲೆಯ ಐವರು ಬಿಜೆಪಿ ಶಾಸಕರು ಮತ್ತು ಹಿಂದೂ ಸಂಘಟನೆಗಳ ಸದಸ್ಯರು ಸೋಮವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಬಿಜೆಪಿಯ ಐವರು ಶಾಸಕರು ಭಾಗಿಯಾಗಿದ್ದು ವಿಶೇಷವಾಗಿತ್ತು. ಪ್ರಾರಂಭದಲ್ಲಿ ಎಸ್ಪಿ ಕಚೇರಿಯೆದುರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿತ್ತು.ಈ ಹಿನ್ನೆಲೆಯಲ್ಲಿ ಎಸ್ ಪಿ ಕಚೇರಿ ಮುಂಭಾಗದಲ್ಲಿ ಭಾರಿ ಭದ್ರತೆ ಮಾಡಲಾಯಿತು. ಹಿಂದೂ ಜಾಗರಣ ವೇದಿಕೆ ಈ ಪ್ರತಿಭಟನೆ ನೇತೃತ್ವ ವಹಿಸಿತ್ತು. […]

eMedia Kannada  @2025. All Rights Reserved.