ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದು, ಯುವತಿಯ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಹೆತ್ತವರು ಗುರುವಾರ ಸಂಜೆ ತಮ್ಮ ಮನೆಯಲ್ಲಿ ಮಾಧ್ಯಮದೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲೂರಿನ ಕೇಮುಂಡೇಲು ನಿವಾಸಿ ಅದಮಾರು ಜನಾರ್ಧನ ಶೋಭಾ ದಂಪತಿಗಳ ಏಕೈಕ ಪುತ್ರಿ ನಿಖಿತಾ ಕುಲಾಲ್ ಸಾವನ್ನಪ್ಪಿದ ಯುವತಿ.
ನಿಖಿತಾ ಮನೆಯಲ್ಲಿ ನೀರವ ಮೌನ ಮತ್ತು ದುಖ: ಮುಗಿಲು ಮುಟ್ಟಿದ್ದು, ಹೆತ್ತವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಿಖಿತಾ ಸಾವಿಗೆ ಆಕ್ರೋಶ ವ್ಯಕ್ತವಾಗಿದ್ದು,ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದೆ.

