ಉಡುಪಿ: ಮಲ್ಪೆಯ ಆಪದ್ಭಾಂಧವ ಜೀವರಕ್ಷಕ ಈಶ್ವರ್ ಮಲ್ಪೆ ಅವರು ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಮಲ್ಪೆ ಸಹಿತ ರಾಜ್ಯದ ಮೂಲೆಮೂಲೆಯಲ್ಲಿ ನೀರಿಗೆ ಬಿದ್ದವರನ್ನು ರಕ್ಷಿಸುವ ಸಮಾಜಸೇವೆಯನ್ನು ಇವರು ಮಾಡುತ್ತಿದ್ದಾರೆ. ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಪ್ರಶಸ್ತಿ ಸಮಾರಂಭದ ಸಮಾರೋಪವನ್ನು ಹಮ್ಮಿಕೊಳ್ಳಲಾಗಿದೆ. ಅಕ್ಷಯಪಾತ್ರ ಮಾನವ ಫೌಂಡೇಶನ್ ಅವರ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಕರ್ನಾಟಕದ ರಾಜ್ಯಪಾಲರು ಪ್ರದಾನ ಮಾಡಲಿದ್ದಾರೆ.ದಿ ಗ್ರೇಟ್ ಕಲಿ ಮಹಿಮಾ ಚೌದ್ರಿ, ಬಾಲಿವುಡ್ ಸಿಂಗರ್ ಜಾವೇದ್ ಅಲಿ, ಮಿಸ್ ಇಂಡಿಯಾ ಸಿಮ್ರಾನ್ ಅಹುಜಾ, ನಟ ಶಿವರಾಜ್ ಕುಮಾರ್ ಸಹಿತ ಅನೇಕ ಗಣ್ಯ ವ್ಯಕ್ತಿಗಳು ಈ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

