• Home  
  •  ಉಡುಪಿ : ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಮೊದಲ ಅಪಘಾತ: ಐವರಿಗೆ ಗಾಯ (Udupi: First accident at Ambalpady flyover construction site: Five injured)
- ಅಪಘಾತ

 ಉಡುಪಿ : ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಮೊದಲ ಅಪಘಾತ: ಐವರಿಗೆ ಗಾಯ (Udupi: First accident at Ambalpady flyover construction site: Five injured)

Share: (Udupi) ಉಡುಪಿ : ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಮೊದಲ ಅಪಘಾತ: ಐವರಿಗೆ ಗಾಯ  (Udupi) ಉಡುಪಿ: ನಗರದ ಅಂಬಲಪಾಡಿ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಹೊಂಡಕ್ಕೆ ಕಾರು ಮಗುಚಿ ಬಿದ್ದು, ಮೊದಲ ಅಪಘಾತ ದಾಖಲಾಗಿದೆ.   ಕಾರಿನಲ್ಲಿದ್ದ ಐವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.  ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಬೃಹತ್ ಹೊಂಡಕ್ಕೆ ಮಗುಚಿಬಿದ್ದ ಘಟನೆ ಅಂಬಲಪಾಡಿ ಜಂಕ್ಷನ್ ಬಳಿ ಇಂದು ಮುಂಜಾನೆ 3 ಗಂಟೆಗೆ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ […]

(Udupi) ಉಡುಪಿ : ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಮೊದಲ ಅಪಘಾತ: ಐವರಿಗೆ ಗಾಯ

 (Udupi) ಉಡುಪಿ: ನಗರದ ಅಂಬಲಪಾಡಿ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಹೊಂಡಕ್ಕೆ ಕಾರು ಮಗುಚಿ ಬಿದ್ದು, ಮೊದಲ ಅಪಘಾತ ದಾಖಲಾಗಿದೆ.

  ಕಾರಿನಲ್ಲಿದ್ದ ಐವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

 ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಬೃಹತ್ ಹೊಂಡಕ್ಕೆ ಮಗುಚಿಬಿದ್ದ ಘಟನೆ ಅಂಬಲಪಾಡಿ ಜಂಕ್ಷನ್ ಬಳಿ ಇಂದು ಮುಂಜಾನೆ 3 ಗಂಟೆಗೆ ಸಂಭವಿಸಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಐದು ಮಂದಿ ಪ್ರಯಾಣಿಕರು ಕೊಲ್ಲೂರಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆಯ ಪಿಲ್ಲರ್ ನಿರ್ಮಿಸಲು ಬಹೃತ್ ಹೊಂಡ ಅಗೆಯಲಾಗಿದ್ದು, ವಾಹನ ಸವಾರರು ಜಾಗರೂಕರಾಗಿ ವಾಹನ ಚಲಾಯಿಸಬೇಕಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.