ಉಡುಪಿ: ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ ತಂಡಕ್ಕೆ ಶಟಲ್ ಬ್ಯಾಡ್ಮಿಂಟನ್ ಪ್ರಶಸ್ತಿ
(Udupi) ಉಡುಪಿ: ಮಾರ್ನಿಂಗ್ ಶೆಟಲ್ ಫ್ರೆಂಡ್ಸ್, ಅಜ್ಜರಕಾಡು ಆಯೋಜಿಸಿದ್ದ ಶಟಲ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾಟ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಡಾ. ರೋಷನ್ ಶೆಟ್ಟಿ ಇವರು ನೆರವೇರಿಸಿದರು.
ಅವರು ಮಾತನಾಡಿ, ಉಡುಪಿಯ ಅಜ್ಜರಕಾಡು ಪರಿಸರವು ಕ್ರೀಡಾ ಹಬ್ ಆಗಿದ್ದು, ಸರಕಾರದಿಂದ ಬಹಳಷ್ಟು ಅನುದಾನಗಳು ಕಾಲಕಾಲಕ್ಕೆ ಬಂದಿದೆ. ಸುಸಜ್ಜಿತ ಸ್ಪೋರ್ಟ್ಸ್ ಮತ್ತು ಸೈನ್ಸ್ ಸೆಂಟರ್ ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಿಟ್ಟರೆ ಉಡುಪಿಯ ಅಜ್ಜರಕಾಡು ಸ್ಟೇಡಿಯಂನಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ. ಮುಂದಿನ ದಿನಗಳಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಮಲ್ಟಿ ಪರ್ಪಸ್ ಒಳಾಂಗಣ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಾಣಕ್ಕಾಗಿ ಖೇಲೊ ಇಂಡಿಯಾದ ಅಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ, ಬಿ ಎಂ ಹೆಗಡೆ, ಪುಟ್ಟರಾಜ್, ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಡಾ. ಭಾಸ್ಕರ್ ಎಂ. ಏನ್, ಡಾ. ಉದಯ ಕುಮಾರ್ ಶೆಟ್ಟಿ, ದೇವರಾಜ್, ಅಭಿಜಿತ್ ಕೋಟ್ಯಾನ್ ಭಾಗವಹಿಸಿದ್ದರು.
ಪಂದ್ಯಾಟದಲ್ಲಿ ಒಟ್ಟು ನಾಲ್ಕು ತಂಡಗಳ 40 ಆಟಗಾರರು ಭಾಗವಹಿಸಿದ್ದರು. ಪಂದ್ಯಕೂಟದಲ್ಲಿ ವಿಜೇತರಾಗಿ ರೋಹಿತ್ ಶೆಟ್ಟಿಯವರ ನಾಯಕತ್ವದ ಟೀಂ ಬ್ಲೇಸರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ರನ್ನರ್ಸ್ ಟ್ರೋಫಿ ಪ್ರಶಸ್ತಿಯನ್ನು ಅಮೀತ್ ಪಡುಕೋಣೆ ನಾಯಕತ್ವದ ಟೀಂ ಅಲ್ಪಾ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಡಿಷನಲ್ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ನವರು ವಿಜೇತರಿಗೆ ಪ್ರಶಸ್ತಿಯನ್ನು ವಿತರಿದರು.
ಈ ಸಂದರ್ಭದಲ್ಲಿ ಕಾಶಿನಾಥ್ ಪೈ, ಸುಹೇಲ್ ಅಮೀನ್, ಡಾ. ಅತುಲ್ ಭಾಗವಹಿಸಿದ್ದರು.
ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ಬಿನ ಸದಸ್ಯರಾದ ಗಣೇಶ್ ಮಟ್ಟು ಮತ್ತು ಅಮಿತ್ ಪಡುಕೋಣೆ ಪಂದ್ಯಾಕೂಟವನ್ನು ನೆರವೇರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ನಂದಕಿಶೋರ್ ಕೆಮ್ಮಣ್ಣು ನೆರವೇರಿಸಿದರು.

