• Home  
  • ಮೊಗವೀರ ಕನ್ನಡ ಮಾಸಿಕದ ಆಯೋಜನೆಯಲ್ಲಿ ಉಡುಪಿ ಉಚ್ಚಿಲ ದಸರಾದಲ್ಲಿ ‘ದಸರಾ ಕವಿಗೋಷ್ಠಿ’(‘Dasara Poets’ Meet’ at Udupi Uchila Dasara, organized by the Kannada monthly magazine *Mogaveera*)
- ಸಂಘ, ಸಂಸ್ಥೆಗಳು - ಸಾಂಸ್ಕೃತಿಕ - ಸೌಹಾರ್ಧ

ಮೊಗವೀರ ಕನ್ನಡ ಮಾಸಿಕದ ಆಯೋಜನೆಯಲ್ಲಿ ಉಡುಪಿ ಉಚ್ಚಿಲ ದಸರಾದಲ್ಲಿ ‘ದಸರಾ ಕವಿಗೋಷ್ಠಿ’(‘Dasara Poets’ Meet’ at Udupi Uchila Dasara, organized by the Kannada monthly magazine *Mogaveera*)

Share: ಮೊಗವೀರ ಕನ್ನಡ ಮಾಸಿಕದ ಆಯೋಜನೆಯಲ್ಲಿ ಉಡುಪಿ ಉಚ್ಚಿಲ ದಸರಾದಲ್ಲಿ ‘ದಸರಾ ಕವಿಗೋಷ್ಠಿ’  ಸತೀಶ್ ಅಮೀನ್ ಪಡುಕರೆ ಅವರ ಭಕ್ತಿ ಭಾವ ಬದುಕು ಕೃತಿ ಬಿಡುಗಡೆ (Uchila)ಉಚ್ಚಿಲ: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮತ್ತು ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲ ಇವರ ಸಂಯುಕ್ತ ಆಶ್ರಯದಲ್ಲಿ ಮೊಗವೀರ ಕನ್ನಡ ಮಾಸಿಕದ 87 ನೇ ಸಂಭ್ರಮದ ಪ್ರಯುಕ್ತ ಉಚ್ಚಿಲ ಮೊಗವೀರ ಭವನದಲ್ಲಿ ಉಡುಪಿ ಉಚ್ಚಿಲ ದಸರಾ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು.   ಕಾರ್ಯಕ್ರಮವನ್ನು ದ.ಕ.ಮೊಗವೀರ ಮಹಾಜನ […]

(Uchila)ಉಚ್ಚಿಲ: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮತ್ತು ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲ ಇವರ ಸಂಯುಕ್ತ ಆಶ್ರಯದಲ್ಲಿ ಮೊಗವೀರ ಕನ್ನಡ ಮಾಸಿಕದ 87 ನೇ ಸಂಭ್ರಮದ ಪ್ರಯುಕ್ತ ಉಚ್ಚಿಲ ಮೊಗವೀರ ಭವನದಲ್ಲಿ ಉಡುಪಿ ಉಚ್ಚಿಲ ದಸರಾ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು.

  ಕಾರ್ಯಕ್ರಮವನ್ನು ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ಸಾಹಿತ್ಯವೂ ಬದುಕಿಗೆ ಅನಿವಾರ್ಯ. ಈ ನಿಟ್ಟಿನಲ್ಲಿ ದಸರಾದ ಪ್ರಯುಕ್ತ ಕವಿಗೋಷ್ಠಿ ವಿಶೇಷವಾದ ಕಾರ್ಯಕ್ರಮವಾಗಿದೆ. ಮುಂದಿನ ವರ್ಷ ಇನ್ನಷ್ಟು ಉತ್ತಮ ರೀತಿಯಲ್ಲಿ ಆಯೋಜಿಸಲಾಗುವುದು ಎಂದರು.

ಪುಸ್ತಕ /ಧ್ವನಿಸುರುಳಿ ಬಿಡುಗಡೆ :

   ಶ್ರೀ ಮಹಾಲಕ್ಷ್ಮಿ ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಅವರ ಭಕ್ತಿ ಭಾವ ಬದುಕು ಕೃತಿ ಹಾಗೂ ಕವಿ, ಪತ್ರಕರ್ತ ಯಶವಂತ ಬೋಳೂರುರವರ ಮೊಗವೀರ ಕುಲಗುರು ಮಾಧವ ಮಂಗಳ ಪೂಜಾರ್ಯರ ಕುರಿತ ಧ್ವನಿ ಸುರುಳಿ ಲೋಕಾರ್ಪಣೆಗೊಂಡಿತು.

  ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಅಧ್ಯಕ್ಷರಾದ ಅಜಿತ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

  ವೇದಿಕೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಟ್ರಸ್ಟಿಗಳಾದ ದೇವರಾಜ ಬಂಗೇರ, ಲಕ್ಷ್ಮಣ ಶ್ರೀಯಾನ್, ಉಪಾಧ್ಯಕ್ಷೆ ದಯಾವತಿ ಸುವರ್ಣ, ಸಹ ಕಾರ್ಯದರ್ಶಿ ಪ್ರೀತಿ ಶ್ರೀಯಾನ್, ದ.ಕ.ಘಟಕದ ಉಪಾಧ್ಯಕ್ಷರಾದ ಮೋಹನ್ ಕೋಡಿಕಲ್, ಕಾರ್ಯದರ್ಶಿ ಭರತ್ ಎರ್ಮಾಳು, ಮೊಗವೀರ ಸಮಿತಿ ಕಾರ್ಯಧ್ಯಕ್ಷ ರಾಜೇಶ್ ಪುತ್ರನ್, ಮ್ಯಾನೇಜರ್ ಪ್ರಮೋದ್ ಪುತ್ರನ್, ವ್ಯವಸ್ಥಾಪಕ ಮಂಡಳಿಯ ಮಹಿಳಾ ವಿಭಾಗದ  ಪ್ರಮುಖರಾದ ಮೋಹಿನಿ ಮಲ್ಪೆ, ಸುರೇಖ ಪುತ್ರನ್,  ಶರಣ್ ಕುಮಾರ್ ಮಟ್ಟು, ದಿನೇಶ್ ಎರ್ಮಾಳು, ಯಜ್ಞೇಶ್ ಉಪಸ್ಥಿತರಿದ್ದರು.

ಮೊಗವೀರ ಕನ್ನಡ ಮಾಸಿಕದ ಸಂಪಾದಕರಾದ ಅಶೋಕ್ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

  ಉಡುಪಿ ಉಚ್ಚಿಲ ದಸರಾ ಕವಿಗೋಷ್ಠಿ :

  ಹಿರಿಯ ಕವಿ, ಪತ್ರಕರ್ತ ಯಶವಂತ್ ಬೋಳೂರು ಅಧ್ಯಕ್ಷತೆಯಲ್ಲಿ ಜರಗಿದ ಕವಿಗೋಷ್ಠಿಯಲ್ಲಿ ಗುರುಪ್ರಸಾದ್ ಪಡುಬಿದ್ರಿ, ರವಿ ಕೊಟ್ಟಾರಗಸ್ತಿ, ದೀಪಕ್ ಎನ್ ದುರ್ಗ ಕಾರ್ಕಳ, ಚಂದ್ರಹಾಸ್ ಕಾನಂತೂರ್ ಉಳ್ಳಾಲ, ಸತೀಶ್ ಅಮೀನ್ ಪಡುಕರೆ, ಶುಭಲಕ್ಷ್ಮಿ ನಾಯಕ್, ಶಂಕರ್ ಪಡಂಗ ಮೂಲ್ಕಿ, ರಮೇಶ್ ಉಳಾಯ ಪುತ್ತೂರು, ವಾಸಂತಿ ಅಂಬಲಪಾಡಿ, ವಿಂದ್ಯಾ ಎಸ್. ರೈ, ಬಂಟ್ವಾಳ, ಐಕಳ ಕೃಷ್ಣಾನಂದ ಶೆಟ್ಟಿ ಕಿನ್ನಿಗೋಳಿ, ಆಂತೋಣಿ ಲೂಯಿಸ್, ಅಶೋಕ ತೆಕ್ಕಟ್ಟೆ, ಬಪ್ಪನಾಡು ವಿಜಯಕುಮಾರ್ ರಾವ್ ಬೆಂಗಳೂರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

ಡಾ. ವಿ.ಕೆ.ಯಾದವ್ ಸಸಿಹಿತ್ಲು ಕವಿಗೋಷ್ಠಿ ನಿರ್ವಹಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.